Wipro: ವರ್ಕ್​ ಫ್ರಂ ಹೋಂ ಅಂತ್ಯ, ವಾರಕ್ಕೆ 3 ದಿನ ಕಚೇರಿಗೆ ಬರಲು ಉದ್ಯೋಗಿಗಳಿಗೆ ವಿಪ್ರೋ ಸೂಚನೆ

ವಿಪ್ರೋ ತನ್ನ ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಕರೆಸಿದೆ ಮತ್ತು ವಾರದಲ್ಲಿ ಕನಿಷ್ಠ ಮೂರು ದಿನಗಳ ಕಾಲ ಕಚೇರಿಯಿಂದಲ್ಲೇ ಕೆಲಸ ಮಾಡಲು ಸೂಚನೆ ನೀಡಿದೆ.

Wipro: ವರ್ಕ್​ ಫ್ರಂ ಹೋಂ ಅಂತ್ಯ, ವಾರಕ್ಕೆ 3 ದಿನ ಕಚೇರಿಗೆ ಬರಲು ಉದ್ಯೋಗಿಗಳಿಗೆ ವಿಪ್ರೋ ಸೂಚನೆ
Wipro
Updated By: ಅಕ್ಷಯ್​ ಪಲ್ಲಮಜಲು​​

Updated on: Oct 05, 2022 | 3:43 PM

ಐಟಿ ಕಂಪನಿ ವಿಪ್ರೋ ತನ್ನ ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಕರೆಸಿದೆ ಮತ್ತು ವಾರದಲ್ಲಿ ಕನಿಷ್ಠ ಮೂರು ದಿನಗಳ ಕಾಲ ಕಚೇರಿಯಿಂದಲ್ಲೇ ಕೆಲಸ ಮಾಡಲು ಸೂಚನೆ ನೀಡಿದೆ. ಕಂಪನಿಯು ತನ್ನ ಕಚೇರಿಗಳು ಮತ್ತು ಕ್ಯಾಂಪಸ್‌ಗಳನ್ನು ವಾರದಲ್ಲಿ ನಾಲ್ಕು ದಿನ ತೆರೆದಿರುತ್ತದೆ ಎಂದು ಹೇಳಿದೆ. ಅಕ್ಟೋಬರ್ 10 ರಿಂದ, ವಿಪ್ರೋ ಕಚೇರಿಗಳು ಸೋಮವಾರ, ಮಂಗಳವಾರ, ಗುರುವಾರ ಮತ್ತು ಶುಕ್ರವಾರದಂದು ತೆರೆದಿರುತ್ತವೆ. ನಾವು ಕಂಪನಿ ಓಪನ್ ಇರುವುದಿಲ್ಲ ಎಂದು ಉದ್ಯೋಗಿಗಳಿಗೆ ನೋಟಿಸ್ ಕಳುಹಿಸಲಾಗಿದೆ.

ಐಟಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ಮಾಡೆಲ್​ನ್ನು ಕೊನೆಗೊಳಿಸಲು ಮತ್ತು ಹೈಬ್ರಿಡ್ ಮಾದರಿಗೆ ಬದಲಾಗುತ್ತಿರುವ ಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದೆ. ಇತ್ತೀಚಿಗೆ TCS ತನ್ನ ಶೇಕಡಾ 85ರಷ್ಟು ಉದ್ಯೋಗಿಗಳನ್ನು ವಾರಕ್ಕೆ ಕನಿಷ್ಠ ಮೂರು ಬಾರಿ ಕಚೇರಿಗೆ ಬರುವಂತೆ ಹೇಳಿತ್ತು. ಇನ್ಫೋಸಿಸ್ ಮೇ ತಿಂಗಳಲ್ಲಿ 5 ಲಕ್ಷ ಚದರ ಅಡಿ ಕಚೇರಿ ಜಾಗವನ್ನು ಸುಮಾರು 2.3 ಕೋಟಿ ರೂ.ಗೆ ಗುತ್ತಿಗೆ ನೀಡುವ ಮೂಲಕ ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಬರುವ ಸೂಚನೆಯನ್ನು ನೀಡಿತ್ತು.

ಇದನ್ನು ಓದಿ: ಟ್ವಿಟರ್ ಖರೀದಿಗೆ ಎಲಾನ್ ಮಸ್ಕ್ ಮತ್ತೊಂದು ಆಫರ್, ಮೂಲ ದರ ಒಪ್ಪಿಕೊಂಡ ಟ್ವಿಟರ್

ವಿಪ್ರೋ ತನ್ನ ಉದ್ಯೋಗಿಗಳಿ ಕಳುಹಿಸಿದ ಮೇಲ್​ನಲ್ಲಿ ಈ ನಾಲ್ಕು ದಿನಗಳಲ್ಲಿ ಕನಿಷ್ಠ ಮೂರು ದಿನಗಳ ಕಾಲ ಕಚೇರಿಯಿಂದಲ್ಲೇ ಕೆಲಸ ಮಾಡಬೇಕು. ಎಲ್ಲರೂ ಕಚೇರಿಗೆ ಬಂದು ಕೆಲಸ ಮಾಡಿದರೆ ಎಲ್ಲರಿಗೂ ಒಂದು ನೆಮ್ಮದಿಯ ವಾತಾವರಣ ಇರುತ್ತದೆ, ಪರಸ್ಪರ ಸಂಪರ್ಕ ಇದ್ದರೆ ಕೆಲಸವು ಬೇಗ ಆಗುತ್ತದೆ. ಒಂದು ದೊಡ್ಡ ತಂಡವಾಗಿ ಕಾರ್ಯನಿರ್ವಹಿಸಬಹುದು ಎಂದು ಹೇಳಿದೆ. ಮಾನವ ಸಂಪನ್ಮೂಲ ವಿಶ್ಲೇಷಕರು ಇತ್ತೀಚಿನ ದಿನಗಳಲ್ಲಿ ಕಂಪನಿಗಳು ಉದ್ಯೋಗಿಗಳನ್ನು ಮತ್ತೆ ಕಚೇರಿಗಳಿಗೆ ಕರೆಸುವುದು ಮೂನ್‌ಲೈಟಿಂಗ್ ಮತ್ತು ವಲಯದಲ್ಲಿ ಹೆಚ್ಚಿನ ಕ್ಷೀಣತೆಯ ಸಮಸ್ಯೆಗೆ ಪರಿಹಾರ ಮಾಡಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.