ಭಾರತದಾದ್ಯಂತ ಎಂಎಸ್‌ಎಂಇ ವಲಯಕ್ಕೆ ಮತ್ತೆ ಉತ್ತೇಜನ ನೀಡುವ ಸಲುವಾಗಿ ವಿಶ್ವ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿಯು 50 ಕೋಟಿ ಅಮೆರಿಕನ್ ಡಾಲರ್ ಅನ್ನು ಮಂಜೂರು ಮಾಡಿದೆ. ಅಂದ ಹಾಗೆ ಕೋವಿಡ್- 19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಎಂಎಸ್‌ಎಂಇ ವಲಯಕ್ಕೆ ಭಾರತಲ್ಲಿ ಭರ್ತಿ ಪೆಟ್ಟು ಬಿದ್ದಿದೆ. ಕಳೆದ ಶುಕ್ರವಾರದಂದು ವಿಶ್ವಬ್ಯಾಂಕ್ನಿಂದ ಈ ಬಗ್ಗೆ ಹೇಳಿಕೆ ನೀಡಿದ್ದು, 5,55,000 ಎಂಎಸ್ಎಂಇಗಳ ಪರ್ಫಾರ್ಮೆನ್ಸ್ ಉತ್ತಮಗೊಳಿಸುವ ಗುರಿಯೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಹಾಗೂ ಆ ನಿಟ್ಟಿನಲ್ಲಿ 1,550 ಕೋಟಿ ಅಮೆರಿಕನ್ ಡಾಲರ್ ಮೊತ್ತವನ್ನು ಸಂಗ್ರಹಿಸುವ ನಿರೀಕ್ಷೆ ಇದೆ. ಸರ್ಕಾರದ ಪಾಲಾಗಿ 340 ಕೋಟಿ ಅಮೆರಿಕನ್ ಡಾಲರ್ ಅನ್ನು ಎಂಸಿಆರ್ಆರ್ಪಿ ಅಡಿ ಮೀಸಲಿರಿಸಲಿದೆ. 50 ಕೋಟಿ ಅಮೆರಿಕನ್ ಡಾಲರ್ ಅನ್ನು ಎಂಎಸ್ಎಂಇಗಳ MSME ಎಮರ್ಜೆನ್ಸಿ ಪರ್ಫಾರ್ಮೆನ್ಸ್ಗಳಿಗೆ ಚಾಲನೆ ನೀಡಲು ಮತ್ತು ಉತ್ತೇಜಿಸಲು ಬಳಸಲಾಗುತ್ತದೆ. ಇದು ಎರಡನೇ ಬಾರಿಗೆ ವಿಶ್ವ ಬ್ಯಾಂಕ್ನಿಂದ ಎಂಎಸ್‌ಎಂಇ ವಲಯಗಳ ಉತ್ತೇಜನಕ್ಕೆ ಹಣ ಸಹಾಯ ಮಾಡಲಾಗುತ್ತಿದೆ. ಮೊದಲ ಬಾರಿಗೆ 2020ರ ಜುಲೈ ತಿಂಗಳಲ್ಲಿ 75 ಕೋಟಿ ಅಮೆರಿಕನ್ ಡಾಲರ್ ಅನ್ನು ಎಮರ್ಜೆನ್ಸಿ ರೆಸ್ಪಾನ್ಸ್ ಪ್ರೋಗ್ರಾಂ ಅಡಿಯಲ್ಲಿ ನೀಡಲಾಗಿತ್ತು. ತಕ್ಷಣದ ನಗದು ಅಗತ್ಯ ಮತ್ತು ಸಾಲದ ಅವಶ್ಯಕತೆಯನ್ನು ಗಮನದಲ್ಲಿ ಇರಿಸಿಕೊಂಡು ಈ ನೆರವು ನೀಡಲಾಗಿತ್ತು.
ಈ ತನಕ 50 ಲಕ್ಷ ಸಂಸ್ಥೆಗಳು ಸರ್ಕಾರದ ಕಾರ್ಯಕ್ರಮದ ಅನುಕೂಲ ಪಡೆದಿವೆ. ಈಗ ಮಂಜೂರಾಗಿರುವ ಕಾರ್ಯಕ್ರಮವು ವಿಶ್ವ ಬ್ಯಾಂಕ್ನ ಹಣಕಾಸು ನೆರವಿನ ಮೂಲಕ ನೀಡಲಾಗಿದೆ. ಎಂಎಸ್ಎಂಇಗಳ ಉತ್ಪಾದಕತೆ ಹಾಗೂ ಹಣಕಾಸು ಲಭ್ಯತೆಯನ್ನು ಕಳೆದ ವರ್ಷದಿಂದ 125 ಕೋಟಿ ಅಮೆರಿಕನ್ ಡಾಲರ್ಗೆ ಚೇತರಿಸಿಕೊಳ್ಳುವಂತೆ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಮೊದಲ ಹಂತವಾಗಿ, ಎಂಎಸ್ಎಂಇಗಳ ಸಾಲದ ಅಗತ್ಯ ಮತ್ತು ನಗದು ಪೂರೈಕೆಯನ್ನು ಬೆಂಬಲಿಸುವ ಉದ್ದೇಶ ಇದೆ ಎನ್ನಲಾಗಿದೆ. ಭಾರತ ಸರ್ಕಾರದ ಎಂಎಸ್ಎಂಇಗಳ ಉತ್ಪಾದಕತೆ ಮತ್ತು ಹಣಕಾಸು ನೆರವು ನೀಡಬೇಕು ಮತ್ತು ಆರ್ಥಿಕ ಚೇತರಿಕೆಗೆ ವೇಗ ನೀಡಬೇಕು ಎಂಬ ಪ್ರಯತ್ನಗಳನ್ನು RAMP ಕಾರ್ಯಕ್ರಮವು ಬೆಂಬಲಿಸುತ್ತದೆ ಎನ್ನಲಾಗಿದೆ.
ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವಂತೆ, ದೇಶದ ಆರ್ಥಿಕತೆಯ ಬೆನ್ನೆಲುಬಾದ ಎಂಎಸ್‌ಎಂಇ ವಲಯವು ಭಾರತದ ಜಿಡಿಪಿಗೆ ಶೇ 30ರಷ್ಟು ಹಾಗೂ ರಫ್ತಿಗೆ ಶೇ 40ರಷ್ಟು ಕೊಡುಗೆ ನೀಡುತ್ತದೆ. ಒಟ್ಟು 5.8 ಕೋಟಿ ಎಂಎಸ್ಎಂಗಳು ಭಾರತದಲ್ಲಿ ಇದ್ದು, ಆ ಪೈಕಿ ಶೇ 40ಕ್ಕೂ ಹೆಚ್ಚು ಸಂಸ್ಥೆಗಳಿಗೆ ಸಂಘಟಿತ ಹಣಕಾಸು ಮೂಲಕ್ಕೆ ಸಂಪರ್ಕವೇ ಇಲ್ಲ ಎಂದು ತಿಳಿಸಲಾಗಿದೆ. RAMP ಕಾರ್ಯಕ್ರಮವು ಎಂಎಸ್ಎಂಇಗಳಿಗೆ ಹಣಕಾಸು ಸಾಲ ಹಾಗೂ ವರ್ಕಿಂಗ್ ಕ್ಯಾಪಿಟಲ್ ಒದಗಿಸುತ್ತದೆ. ಆನ್ಲೈನ್ ವ್ಯಾಜ್ಯ ವಿಲೇವಾರಿಯನ್ನು ಹೆಚ್ಚಿಸುತ್ತದೆ; ಆ ಮೂಲಕ ಪಾವತಿ ವಿಳಂಬ ಆಗುತ್ತಿರುವ ಸಮಸ್ಯೆ ನಿವಾರಿಸುವುದಕ್ಕೆ ಯತ್ನಿಸುತ್ತದೆ. ಇದರಿಂದ ವೆಚ್ಚವನ್ನು ಇನ್ನಷ್ಟು ಕಡಿಮೆ ಮಾಡಿ, ಗುಣಮಟ್ಟ ಚೆನ್ನಾಗಿ ಆಗಲು ಸಹಾಯ ಆಗುತ್ತದೆ. ಜತೆಗೆ ಪರಿಣಾಮ, ಯೋಜನೆ ತಲುಪುವುದು ಕೂಡ ಸುಧಾರಣೆ ಕಾಣುತ್ತದೆ.
50 ಕೋಟಿ ಅಮೆರಿಕನ್ ಡಾಲರ್ ಸಾಲವನ್ನು ಇಂಟರ್ನ್ಯಾಷನಲ್ ಬ್ಯಾಂಕ್ ಫಾರ್ ರೀಕನ್ಸ್ಟ್ರಕ್ಷನ್ ಅಂಡ್ ಡೆವಲಪ್ಮೆಂಟ್ (ಐಬಿಆರ್ಡಿ) ನೀಡುತ್ತಿದ್ದು, ಮೆಚ್ಯೂರಿಟಿ (ಪಕ್ವತೆ) ಅವಧಿ 18.5 ವರ್ಷವಾಗಿದ್ದು, ಅದರಲ್ಲಿ 5.5 ವರ್ಷ ವಿನಾಯಿತಿ ಅವಧಿ ಸಹ ಸೇರಿದೆ.
ಇದನ್ನೂ ಓದಿ: ಕೇಂದ್ರದಿಂದ ಆರ್ಥಿಕ ಪ್ಯಾಕೇಜ್ ಘೋಷಣೆಗೆ ಸಿದ್ಧತೆ: ಪ್ರವಾಸೋದ್ಯಮ, ವಿಮಾನಯಾನ, ಎಂಎಸ್‌ಎಂಇ ಕ್ಷೇತ್ರಕ್ಕೆ ನೆರವು ಸಾಧ್ಯತೆ
(During covid 19 crisis World Bank approves finance program of 500 million USD to India’s MSME sector)
Published On - 7:03 pm, Mon, 7 June 21