Pradhan Mantri Suraksha Bima Yojana: ಪಿಎಂಎಸ್​ಬಿವೈ ಇನ್ಷೂರೆನ್ಸ್​ಗೆ ಅರ್ಜಿ ಸಲ್ಲಿಸುವುದು, ಆ್ಕಕ್ಟಿವೇಟ್ ಮಾಡುವುದು ಹೇಗೆ?

| Updated By: Srinivas Mata

Updated on: Jun 07, 2021 | 1:17 PM

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನಾ ಅಡಿ ಇನ್ಷೂರೆನ್ಸ್ ಮಾಡಿಸುವುದು ಹೇಗೆ? ಆನ್​ಲೈನ್​ನಲ್ಲಿ ಅಪ್ಲೈ ಮಾಡುವುದು ಹೇಗೆ ಎಂಬಿತ್ಯಾದಿ ವಿವರಗಳು ಇಲ್ಲಿದೆ.

Pradhan Mantri Suraksha Bima Yojana: ಪಿಎಂಎಸ್​ಬಿವೈ ಇನ್ಷೂರೆನ್ಸ್​ಗೆ ಅರ್ಜಿ ಸಲ್ಲಿಸುವುದು, ಆ್ಕಕ್ಟಿವೇಟ್ ಮಾಡುವುದು ಹೇಗೆ?
ಪ್ರಾತಿನಿಧಿಕ ಚಿತ್ರ
Follow us on

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನಾ (PMSBY) ಎಂಬುದು ಅಪಘಾತ ವಿಮೆ ಯೋಜನೆ. ಇದರಿಂದ ಬಡವರು ಮತ್ತು ಕಡಿಮೆ ಆದಾಯದವರಿಗೆ ಅನುಕೂಲ ಆಗುತ್ತಿದೆ. ಇದಕ್ಕೆ ಭಾರತ ಸರ್ಕಾರದ ಬೆಂಬಲ ಇದೆ. ಅಪಘಾತದಲ್ಲಿ ಸಾವು ಸಂಭವಿಸಿದರೆ ಮತ್ತು ಅಂಗವೈಕಲ್ಯವಾದರೆ ಒಂದು ವರ್ಷದ ಅವಧಿಗೆ ಇನ್ಷೂರೆನ್ಸ್ ಕವರ್ ಆಗುತ್ತದೆ ಮತ್ತು ಈ ಯೋಜನೆ ವಾರ್ಷಿಕವಾಗಿ ನವೀಕರಣ ಮಾಡಬಹುದು. 18ರಿಂದ 70 ವರ್ಷ ವಯೋಮಾನದವರು, ಉಳಿತಾಯ ಖಾತೆಯನ್ನು ಹೊಂದಿರುವವರು ಈ ಯೋಜನೆಗೆ ಸೇರ್ಪಡೆ ಆಗಬಹುದು. ಒಂದು ವೇಳೆ ಅರ್ಜಿದಾರರು ಆತ್ಮಹತ್ಯೆ ಮಾಡಿಕೊಂಡಲ್ಲಿ ಮೃತರ ಸಂಬಂಧಿಕರಿಗೆ ಈ ಯೋಜನೆಯ ಅನುಕೂಲ ದೊರೆಯುವುದಿಲ್ಲ. ಆದರೆ ಕೊಲೆಯಾಗಿ, ಸಾವು ಸಂಭವಿಸಿದಲ್ಲಿ ಆಗ ಕವರ್ ಆಗುತ್ತದೆ ಮತ್ತು ಭಾಗಶಃ ಅಂಗವೈಕಲ್ಯವಾದಲ್ಲಿ ಆಗ ಕವರ್ ಆಗುವುದಿಲ್ಲ.

ಯೋಜನೆಯ ಅರ್ಹತಾ ಮಾನದಂಡಗಳು ಹೀಗಿವೆ:
* 18ರಿಂದ 70ರ ವಯೋಮಾನದವರು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನಾಗೆ (PMSBY) ಸೇರ್ಪಡೆ ಆಗಲು ಅರ್ಹರು.
* ಒಂದು ವೇಳೆ ಜಂಟಿ ಬ್ಯಾಂಕ್ ಖಾತೆ ಆಗಿದ್ದಲ್ಲಿ ಬ್ಯಾಂಕ್​ ಖಾತೆಯ ಎಲ್ಲರೂ ಈ ಯೋಜನೆಗೆ ಸೇರ್ಪಡೆ ಆಗಲು ಮುಕ್ತರು.
* ಈ ಯೋಜನೆ ಅಡಿಯಲ್ಲಿ ಅನಿವಾಸಿ ಭಾರತೀಯರು ಸಹ ಅರ್ಹರು. ಇನ್ನು ಕ್ಲೇಮ್ ವಿಚಾರಕ್ಕೆ ಬಂದಲ್ಲಿ ಭಾರತದ ಕರೆನ್ಸಿಯಲ್ಲಿ ನೀಡಲಾಗುತ್ತದೆ.
* ಹಲವು ಕಡೆ ಖಾತೆ ಇದ್ದಾಗ್ಯೂ ಒಂದು ಬ್ಯಾಂಕ್​ ಖಾತೆ ಮೂಲಕ ಮಾತ್ರ ಈ ಯೋಜನೆಗೆ ಸೇರ್ಪಡೆ ಆಗುವುದಕ್ಕೆ ಸಾಧ್ಯ.

ಏನೇನು ಒಳಗೊಳ್ಳುತ್ತವೆ ಮತ್ತು ಒಳಗೊಳ್ಳುವುದಿಲ್ಲ
* ಅಪಘಾತ, ಪಿಎಂಎಸ್​ಬಿವೈ ಅಡಿಯಲ್ಲಿ ಪ್ರಸ್ತಾಪಿಸಲಾದಂತೆ ಪ್ರಾಕೃತಿಕ ದುರಂತದಿಂದ ಸಾವು ಅಥವಾ ಅಂಗವೈಕಲ್ಯ ಸಂಭವಿಸಿದಲ್ಲಿ ಕವರ್ ಆಗುತ್ತದೆ.
* ಒಂದು ವೇಳೆ ಇನ್ಷೂರೆನ್ಸ್ ಮಾಡಿಸಿಕೊಂಡ ವ್ಯಕ್ತಿ ಆತ್ಮಹತ್ಯೆಗೆ ಶರಣಾದಲ್ಲಿ ಆಗ ಆ ವ್ಯಕ್ತಿಯ ಕುಟುಂಬಕ್ಕೆ ಇನ್ಷೂರೆನ್ಸ್ ದೊರೆಯುವುದಿಲ್ಲ.
* ಆದರೆ ಕೊಲೆಗೀಡಾದಲ್ಲಿ ಇನ್ಷೂರೆನ್ಸ್ ಕವರ್ ಆಗುತ್ತದೆ.
* ಭಾಗಶಃ ಅಂಗವೈಕಲ್ಯ ಸಂಭವಿಸಿದಲ್ಲಿ ಇನ್ಷೂರೆನ್ಸ್ ಕವರ್ ಆಗುವುದಿಲ್ಲ.

ಯಾವಾಗ ನೋಂದಣಿ ಆಗಬಹುದು?
ಈ ಯೋಜನೆ ಅಡಿಯಲ್ಲಿ ಜೂನ್ 1ರಿಂದ ಮೇ 31ರ ತನಕ ಕವರ್ ಆಗುತ್ತದೆ ಮತ್ತು ಸಾರ್ವಜನಿಕ ವಲಯದ ಜನರಲ್ ಇನ್ಷೂರೆನ್ಸ್ ಕಂಪೆನಿಗಳ ಮೂಲಕ ನಿಗಾ ವಹಿಸಲಾಗುತ್ತದೆ ಮತ್ತು ಬ್ಯಾಂಕ್​ಗಳಿಂದ ಆಫರ್​ ಮಾಡುತ್ತದೆ.

ಪಿಎಂಎಸ್​ಬಿವೈ ಅಡಿಯಲ್ಲಿ ಏನು ಕವರ್ ಆಗುತ್ತದೆ?
* ಒಂದು ವೇಳೆ ಶಾಶ್ವತ ಅಂಗವೈಕಲ್ಯ ಸಂಭವಿಸಿದಲ್ಲಿ ಮತ್ತು ಅಪಘಾತದಲ್ಲಿ ಮೃತಪಟ್ಟರೆ ರಿಸ್ಕ್ ಕವರ್ ರೂ. 2 ಲಕ್ಷ ಆಗುತ್ತದೆ.
* ಶಾಶ್ವತವಾಗಿ ಭಾಗಶಃ ವೈಕಲ್ಯವಾದಲ್ಲಿ ರಿಸ್ಕ್ ಕವರ್ ರೂ. 1 ಲಕ್ಷ ಆಗುತ್ತದೆ.
* ಅಪಘಾತ ಸಂಭವಿಸಿ ಆಸ್ಪತ್ರೆ ಖರ್ಚುಗಳು ಏರ್ಪಟ್ಟಲ್ಲಿ, ಆ ನಂತರ ಸಾವು ಅಥವಾ ವೈಕಲ್ಯ ಏರ್ಪಟ್ಟಲ್ಲಿ ಅದರ ರೀಎಂಬರ್ಸ್​ಮೆಂಟ್ ಆಗುವುದಿಲ್ಲ.

ಇನ್ಷೂರೆನ್ಸ್ ಪ್ರೀಮಿಯಂ
ಒಬ್ಬ ಸದಸ್ಯರಿಗೆ ವರ್ಷಕ್ಕೆ ರೂ. 12 ಆಗುತ್ತದೆ. ಅದರಲ್ಲಿ ಯಾವುದೇ ತೆರಿಗೆ ಸೇರುವುದಿಲ್ಲ. ಮೊತ್ತವು ಆಟೋ ಡೆಬಿಟ್ ಆಗುತ್ತದೆ. ಪ್ರತಿ ವರ್ಷದ ಜೂನ್ 1ನೇ ತಾರೀಕಿಗೂ ಮುಂಚೆ ಖಾತೆಯಿಂದ ಮೊತ್ತವು ಕಡಿತ ಆಗುತ್ತದೆ. ಪಿಎಂಎಸ್​ಬಿವೈನಿಂದ ಜಿಎಸ್​ಟಿಗೆ ಕೂಡ ವಿನಾಯಿತಿ ಇದೆ.

ಈ ಕೆಳಗಿನ ಸನ್ನಿವೇಶಗಳಲ್ಲಿ ಅಪಘಾತ ವಿಮೆ ಕವರ್ ನಿರ್ಬಂಧವಾಗಬಹುದು ಅಥವಾ ತೆಗೆಯಬಹುದು
* ಸದಸ್ಯರ ವಯಸ್ಸು 70 ವರ್ಷ ತಲುಪಿದ ಮೇಲೆ
* ಒಂದು ವೇಳೆ ಬ್ಯಾಂಕ್​ ಖಾತೆ ಕ್ಲೋಸ್ ಆದಲ್ಲಿ
* ಇನ್ಷೂರೆನ್ಸ್​ಗೆ ಬ್ಯಾಂಕ್​ ಖಾತೆಯಿಂದ ಹಣ ವರ್ಗಾವಣೆ ಆಗುವುದಕ್ಕೆ ಅಗತ್ಯ ಪ್ರಮಾಣದ ಮೊತ್ತ ಇಲ್ಲದಿದ್ದಲ್ಲಿ

ಈ ಯೋಜನೆ ಎಲ್ಲಿ ಖರೀದಿಸಬಹುದು?
ಈ ಯೋಜನೆಯ ಆಡಳಿತವನ್ನು ಈಗಾಗಲೇ ಪಿಎಸ್​ಜಿಐಸಿಗಳು ಮತ್ತು ಇನ್ಷೂರೆನ್ಸ್​ ಕಂಪೆನಿಗಳಿಂದ ನೋಡಲಾಗುತ್ತಿದೆ. ಎಸ್ಸೆಮ್ಮೆಸ್ ಅಥವಾ ನೆಟ್ ಬ್ಯಾಂಕಿಂಗ್​ನಿಂದ ಅಪ್ಲೈ ಮಾಡಬಹುದು. ಅಧಿಕೃತ ವೆಬ್​ಸೈಟ್​ನಿಂದ ಫಾರ್ಮ್ ಡೌನ್​ಲೋಡ್​ ಕೂಡ ಮಾಡಬಹುದು ಮತ್ತು ನಿಮ್ಮ ಬ್ಯಾಂಕರ್​ಗೆ ಅದನ್ನೇ ಸಲ್ಲಿಸಬಹುದು.

ಅರ್ಜಿ
ಈ ಸಾಮಾಜಿಕ ಭದ್ರತೆ ಯೋಜನೆಯನ್ನು ಆ್ಯಕ್ಟಿವೇಟ್ ಮಾಡುವುದಕ್ಕೆ ಮೊದಲಿಗೆ ಎಲ್ಲಿ ಉಳಿತಾಯ ಖಾತೆ ಇದೆಯೋ ಆ ಬ್ಯಾಂಕ್​ನ ಇಂಟರ್​ನೆಟ್ ಬ್ಯಾಂಕಿಂಗ್​ಗೆ ಲಾಗ್​ ಇನ್ ಆಗಬೇಕು. ಆ ನಂತರ ಅರ್ಜಿ ಪ್ರಕ್ರಿಯೆಯನ್ನು ಅದರ ಪ್ರಕಾರ ಮಾಡಿ ಮುಗಿಸಬೇಕು. ಬ್ಯಾಂಕ್ ಅಕೌಂಟ್ ಮೂಲಕವಷ್ಟೇ ಈ ಯೋಜನೆಯನ್ನು ಪಡೆದುಕೊಳ್ಳಲು ಸಾಧ್ಯ. ಒಂದು ವೇಳೆ ಜೂನ್ 1ರ ನಂತರ ಈ ಯೋಜನೆಗೆ ಸೇರ್ಪಡೆ ಆದಲ್ಲಿ ಯಾವ ದಿನದಿಂದ ಇನ್ಷೂರೆನ್ಸ್ ಕವರ್ ಶುರುವಾಗುತ್ತದೋ ಅಲ್ಲಿಂದ ಮುಂದಿನ ಮೇ 31ರ ತನಕ ಎಷ್ಟು ಪ್ರಮಾಣದ ಮೊತ್ತದ ಅಗತ್ಯವೋ ಅಷ್ಟು ಡೆಬಿಟ್ ಆಗುತ್ತದೆ.

ಇದನ್ನೂ ಓದಿ: LIC Micro Bachat Plan: ದಿನಕ್ಕೆ 28 ರೂಪಾಯಿ ಉಳಿಸಿದರೂ 2 ಲಕ್ಷ ಇನ್ಷೂರೆನ್ಸ್ ದೊರಕಿಸುವ ಮೈಕ್ರೋ ಬಚತ್ ಬಗ್ಗೆ ಗೊತ್ತೆ?

ಇದನ್ನೂ ಓದಿ: Bank deposit insurance: ಬ್ಯಾಂಕ್​ ಠೇವಣಿ ಮೇಲೆ ಗರಿಷ್ಠ ಇನ್ಷೂರೆನ್ಸ್ 5 ಲಕ್ಷ ರೂ.; ಅದಕ್ಕೂ ಹೆಚ್ಚು ಮೊತ್ತಕ್ಕೆ ಕವರೇಜ್ ಹೇಗೆ?

(What is Pradhan Mantri Suraksha Bima Yojana? How to apply and what are the benefits? Here is an explainer)

Published On - 1:15 pm, Mon, 7 June 21