AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC Micro Bachat Plan: ದಿನಕ್ಕೆ 28 ರೂಪಾಯಿ ಉಳಿಸಿದರೂ 2 ಲಕ್ಷ ಇನ್ಷೂರೆನ್ಸ್ ದೊರಕಿಸುವ ಮೈಕ್ರೋ ಬಚತ್ ಬಗ್ಗೆ ಗೊತ್ತೆ?

LIC Micro Bachat Plan: ಜೇಬಿಗೆ ವಜ್ಜೆ ಆಗದಂತೆ ಸುರಕ್ಷತೆ ಮತ್ತು ಉಳಿತಾಯ ಎರಡೂ ಬಗೆಯ ಅನುಕೂಲ ದೊರಕಿಸಿ ಕೊಡುವ ಮೈಕ್ರೋ ಬಚತ್ ಯೋಜನೆ ಬಗೆಗಿನ ವಿವರ ಇಲ್ಲಿದೆ.

LIC Micro Bachat Plan: ದಿನಕ್ಕೆ 28 ರೂಪಾಯಿ ಉಳಿಸಿದರೂ 2 ಲಕ್ಷ ಇನ್ಷೂರೆನ್ಸ್ ದೊರಕಿಸುವ ಮೈಕ್ರೋ ಬಚತ್ ಬಗ್ಗೆ ಗೊತ್ತೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 03, 2021 | 9:03 PM

ಜೇಬಿಗೆ ಭಾರ ಆಗದಂತೆ ಬದುಕಿಗೆ ಭದ್ರತೆ ಒದಸುವಂಥ ಹಲವು ಯೋಜನೆಗಳು ಎಲ್​ಐಸಿಯಲ್ಲಿ (ಜೀವ ವಿಮಾ ನಿಗಮ) ಇವೆ. ಕಡಿಮೆ ಆದಾಯದವರಿಗೆ ಅಂತ ನೀವು ಯಾವುದಾದರೂ ಎಲ್​ಐಸಿ ಯೋಜನೆ ಹುಡುಕುತ್ತಿದ್ದಲ್ಲಿ ಈ ಲೇಖನದಿಂದ ಸಹಾಯ ಆಗುತ್ತದೆ. ಏಕೆಂದರೆ ಈಗ ತಿಳಿಸಲು ಹೊರಟಿರುವುದು ಅಂಥದ್ದೇ ಒಂದು ಯೋಜನೆಯಾದ ಮೈಕ್ರೋ ಬಚತ್ ಇನ್ಷೂರೆನ್ಸ್ ಪಾಲಿಸಿ (Micro Bachat Insurance Scheme). ಯಾರಿಗೆ ಆದಾಯ ಕಡಿಮೆ ಇರುತ್ತದೋ ಅಂಥವರು ಮೈಕ್ರೋ ಇನ್ಷೂರೆನ್ಸ್ ಪ್ಲಾನ್ ಆರಿಸಿಕೊಳ್ಳಬಹುದು. ಇದರಿಂದ ಬಹಳ ಅನುಕೂಲವೂ ಇದೆ. ಈ ಯೋಜನೆಯ ವೈಶಿಷ್ಟ್ಯ ಏನೆಂದರೆ, ಭದ್ರತೆ ಹಾಗೂ ಉಳಿತಾಯ ಎರಡಕ್ಕೂ ಇದು ಸೂಕ್ತವಾದದ್ದು. ಇನ್ಷೂರೆನ್ಸ್ ಮಾಡಿಸಿದ ವ್ಯಕ್ತಿ ಮೃತಪಟ್ಟಲ್ಲಿ ಕುಟುಂಬಕ್ಕೆ ಆರ್ಥಿಕ ಬೆಂಬಲ ದೊರಕಿಸುತ್ತದೆ. ಇದರ ಜತೆಗೆ ಪಾಲಿಸಿ ಮೆಚ್ಯೂರ್ (ಪಕ್ವತೆ) ನಂತರ ಇಡಿಗಂಟು ಮೊತ್ತವನ್ನು ದೊರಕಿಸುತ್ತದೆ. ಈ ಪ್ಲಾನ್​ ಬಗ್ಗೆ ಇನ್ನಷ್ಟು ಮಾಹಿತಿಗಳು ನಿಮಗಾಗಿ ಇಲ್ಲಿದೆ.

ಸಾಲ ದೊರೆಯುತ್ತದೆ ಮೈಕ್ರೋ ಬಚತ್ ಪ್ಲಾನ್​ನ ಈ ಸಾಮಾನ್ಯ ಪ್ರೀಮಿಯಂ ಪಾವತಿ ಸ್ಕೀಮ್​ನಲ್ಲಿ ಹಲವು ಬಗೆಯ ವೈಶಿಷ್ಟ್ಯಗಳಿವೆ. 50 ಸಾವಿರ ರೂಪಾಯಿಯಿಂದ 2 ಲಕ್ಷದ ತನಕ ವಿಮೆ ದೊರೆಯುತ್ತದೆ. ಅಮದಹಾಗೆ ಇದು ಯಾವುದೇ ಮಾರ್ಕೆಟ್ ಜತೆ ಜೋಡಣೆಯಾದದ್ದಲ್ಲ. ಹೀಗಂದರೆ, ನೀವು ಹೂಡಿದ ಹಣವನ್ನು ಷೇರು ಮಾರುಕಟ್ಟೆಯಲ್ಲೋ ಮತ್ಯಾವ ಮಾರ್ಕೆಟ್​ನಲ್ಲೋ ಹೂಡಿಕೆ ಮಾಡಲ್ಲ. ಈ ಪಾಲಿಸಿಯಲ್ಲಿ ಲಾಯಲ್ಟಿಯ ಲಾಭ ದೊರೆಯುತ್ತದೆ. ಯಾರು 3 ವರ್ಷಗಳ ಕಾಲ ಪ್ರೀಮಿಯಂ ಕಟ್ಟಿರುತ್ತಾರೋ ಅಂಥವರಿಗೆ ಮೈಕ್ರೋ ಬಚತ್​ ಪ್ಲಾನ್​ನಲ್ಲಿ ಸಾಲ ಕೂಡ ದೊರೆಯುತ್ತದೆ.

ಈ ಎಲ್​ಐಸಿ ಯೋಜನೆಯನ್ನು ಯಾರು ಖರೀದಿಸಬಹುದು? 18ರಿಂದ 55 ವರ್ಷದೊಳಗಿನವರು ಈ ಸ್ಕೀಮ್​ ಅನ್ನು ಖರೀದಿಸಲು ಅರ್ಹರು. ಯಾವುದೇ ವೈದ್ಯಕೀಯ ಪರೀಕ್ಷೆ ಅಗತ್ಯ ಇಲ್ಲ. ಯಾರು 3 ವರ್ಷದ ತನಕ ನಿರಂತರವಾಗಿ ಪ್ರೀಮಿಯಂ ಪಾವತಿ ಮಾಡಿರುತ್ತಾರೋ ಅಂಥವರು ಆ ನಂತರ ಒಂದು ವೇಳೆ ಪ್ರೀಮಿಯಂ ಕಟ್ಟದಿದ್ದಲ್ಲಿ 6 ತಿಂಗಳ ತನಕ ವಿಮೆ ಹಾಗೇ ಇರುತ್ತದೆ. ಒಂದು ವೇಳೆ 5 ವರ್ಷದ ತನಕ ಪ್ರೀಮಿಯಂ ಕಟ್ಟಿದಲ್ಲಿ 2 ವರ್ಷಗಳ ಕಾಲ ತಾನಾಗಿಯೇ ಕವರ್ ಆಗುತ್ತದೆ. ಈ ಯೋಜನೆಯ ಸಂಖ್ಯೆ 851.

ಪಾಲಿಸಿ ಅವಧಿ ಎಷ್ಟು ವರ್ಷ? ಮೈಕ್ರೋ ಬಚತ್ ಇನ್ಷೂರೆನ್ಸ್ ಪ್ಲಾನ್​ನ ಅವಧಿ 10ರಿಂದ 15 ವರ್ಷಗಳಾಗಿರುತ್ತದೆ. ಇದರ ಪ್ರೀಮಿಯಂ ಅನ್ನು ವರ್ಷಕ್ಕೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ಪಾವತಿಸಬಹುದು. ಇದರಲ್ಲಿ ಅಪಘಾತ ವಿಮೆ ಜೋಡಣೆ ಮಾಡುವ ಅವಕಾಶ ಸಹ ಇದೆ. ಆದರೆ ಇದಕ್ಕಾಗಿ ಪ್ರತ್ಯೇಕ ಪ್ರೀಮಿಯಂ ಕಟ್ಟಬೇಕು.

ಪ್ರತಿ ದಿನ 28 ರೂಪಾಯಿ ಲೆಕ್ಕದಲ್ಲಿ 2 ಲಕ್ಷದ ಇನ್ಷೂರೆನ್ಸ್ 18 ವರ್ಷದ ವ್ಯಕ್ತಿಯೊಬ್ಬರು ಈ ಪ್ಲಾನ್​ ಅನ್ನು 15 ವರ್ಷದ ಅವಧಿಗೆ ತೆಗೆದುಕೊಂಡರೆ ಪ್ರತಿ ಸಾವಿರ ರೂಪಾಯಿಗೆ 51.5 ರೂಪಾಯಿ ಪ್ರೀಮಿಯಂ ಪಾವತಿಸಬೇಕು. ಅದೇ 25 ವರ್ಷದ ವ್ಯಕ್ತಿ ಇದೇ ಅವಧಿಗೆ 51.60 ರೂಪಾಯಿ, 35 ವರ್ಷದವರು ರೂ. 52.20 ಅನ್ನು ಪ್ರತಿ 1 ಸಾವಿರ ಇನ್ಷೂರೆನ್ಸ್ ಮೊತ್ತಕ್ಕೆ ಕಟ್ಟಬೇಕಾಗುತ್ತದೆ. ಇನ್ನು 10 ವರ್ಷದ ಅವಧಿಗಾದರೆ ಪ್ರೀಮಿಯಂ ಮೊತ್ತ ರೂ. 85.45ರಿಂದ ರೂ 91.9 ಆಗುತ್ತದೆ. ಇದು ಪ್ರತಿ ಸಾವಿರ ರೂಪಾಯಿ ಇನ್ಷೂರೆನ್ಸ್​ಗೆ ಕಟ್ಟಬೇಕಾದ ಪ್ರೀಮಿಯಂ. ಇದರಲ್ಲಿ ಶೇ 2ರಷ್ಟು ರಿಯಾಯಿತಿ ಸಿಗುತ್ತದೆ. ಒಂದು ವೇಳೆ ಖರೀದಿ ಮಾಡಿದ ಮೇಲೆ ಈ ಪ್ಲಾನ್ ಇಷ್ಟವಾಗಲಿಲ್ಲ ಅಂತಾದರೆ ಹದಿನೈದು ದಿನದೊಳಗೆ ಸರೆಂಡರ್ ಮಾಡಬಹುದು. ಒಬ್ಬರು 35 ವರ್ಷದ ವ್ಯಕ್ತಿ 1 ಲಕ್ಷ ರೂಪಾಯಿ ಸಮ್ ಅಶ್ಯೂರ್ಡ್ ಮಾಡಿಸಬೇಕು ಎಂದಾದಲ್ಲಿ 15 ವರ್ಷಗಳ ಅವಧಿಗೆ ಎಂದಾದರೆ ವರ್ಷಕ್ಕೆ 5116 ರೂಪಾಯಿ ಪ್ರೀಮಿಯಂ ಬರುತ್ತದೆ. ಸದ್ಯಕ್ಕೆ ಇರುವ ನಿಯಮಾವಳಿ ಪ್ರಕಾರ, ಪಾಲಿಸಿಯಲ್ಲಿ ಶೇ 70ರಷ್ಟು ಹಣ ತೆಗೆದುಕೊಳ್ಳಬಹುದು. ಈಗಾಗಲೇ ಕಟ್ಟಿದ ಒಟ್ಟು ಮೊತ್ತದಲ್ಲಿ ಶೇ 60ರಷ್ಟು ಸಾಲವನ್ನು ಪಡೆಯಬಹುದು.

ಇದನ್ನೂ ಓದಿ: LIC Jeevan Saathi: ಗಂಡ- ಹೆಂಡತಿಗೆ ಇನ್ಷೂರೆನ್ಸ್ ಪಾಲಿಸಿ; ದಿನಕ್ಕೆ 120ರಂತೆ ಪಾವತಿಸಿ, 27 ಲಕ್ಷ ಉಳಿಸಿ

(LIC Micro Bachat Insurance plan for low income groups. Here is the complete details about plan)

Published On - 11:54 am, Thu, 3 June 21

‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್