AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Bank: ಕೊರೊನಾ ಸಂಕಷ್ಟದಲ್ಲಿರುವ ಭಾರತದ ಎಂಎಸ್​ಎಂಇಗಳಿಗೆ ವಿಶ್ವಬ್ಯಾಂಕ್​ನಿಂದ 50 ಕೋಟಿ ಅಮೆರಿಕನ್ ಡಾಲರ್

ಕೋವಿಡ್- 19 ಹಿನ್ನೆಲೆಯಲ್ಲಿ ಭಾರತದ ಎಂಎಸ್​ಎಂಇ ವಲಯ ಬಿಕ್ಕಟ್ಟು ಎದುರಿಸುತ್ತಿದ್ದು, ಅದಕ್ಕೆ ಮತ್ತೆ ಚೈತನ್ಯ ತುಂಬ ಉದ್ದೇಶದಿಂದ ವಿಶ್ವಬ್ಯಾಂಕ್​ನಿಂದ 50 ಕೋಟಿ ಅಮೆರಿಕನ್ ಡಾಲರ್ ಸಾಲ ನೀಡಲಾಗುತ್ತಿದೆ.

World Bank: ಕೊರೊನಾ ಸಂಕಷ್ಟದಲ್ಲಿರುವ ಭಾರತದ ಎಂಎಸ್​ಎಂಇಗಳಿಗೆ ವಿಶ್ವಬ್ಯಾಂಕ್​ನಿಂದ 50 ಕೋಟಿ ಅಮೆರಿಕನ್ ಡಾಲರ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 07, 2021 | 7:04 PM

ಭಾರತದಾದ್ಯಂತ ಎಂಎಸ್​ಎಂಇ ವಲಯಕ್ಕೆ ಮತ್ತೆ ಉತ್ತೇಜನ ನೀಡುವ ಸಲುವಾಗಿ ವಿಶ್ವ ಬ್ಯಾಂಕ್​ನ ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿಯು 50 ಕೋಟಿ ಅಮೆರಿಕನ್ ಡಾಲರ್ ಅನ್ನು ಮಂಜೂರು ಮಾಡಿದೆ. ಅಂದ ಹಾಗೆ ಕೋವಿಡ್- 19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಎಂಎಸ್​ಎಂಇ ವಲಯಕ್ಕೆ ಭಾರತಲ್ಲಿ ಭರ್ತಿ ಪೆಟ್ಟು ಬಿದ್ದಿದೆ. ಕಳೆದ ಶುಕ್ರವಾರದಂದು ವಿಶ್ವಬ್ಯಾಂಕ್​ನಿಂದ ಈ ಬಗ್ಗೆ ಹೇಳಿಕೆ ನೀಡಿದ್ದು, 5,55,000 ಎಂಎಸ್​ಎಂಇಗಳ ಪರ್ಫಾರ್ಮೆನ್ಸ್ ಉತ್ತಮಗೊಳಿಸುವ ಗುರಿಯೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಹಾಗೂ ಆ ನಿಟ್ಟಿನಲ್ಲಿ 1,550 ಕೋಟಿ ಅಮೆರಿಕನ್ ಡಾಲರ್ ಮೊತ್ತವನ್ನು ಸಂಗ್ರಹಿಸುವ ನಿರೀಕ್ಷೆ ಇದೆ. ಸರ್ಕಾರದ ಪಾಲಾಗಿ 340 ಕೋಟಿ ಅಮೆರಿಕನ್ ಡಾಲರ್​ ಅನ್ನು ಎಂಸಿಆರ್​ಆರ್​ಪಿ ಅಡಿ ಮೀಸಲಿರಿಸಲಿದೆ. 50 ಕೋಟಿ ಅಮೆರಿಕನ್ ಡಾಲರ್ ಅನ್ನು ಎಂಎಸ್​ಎಂಇಗಳ MSME ಎಮರ್ಜೆನ್ಸಿ ಪರ್ಫಾರ್ಮೆನ್ಸ್​ಗಳಿಗೆ ಚಾಲನೆ ನೀಡಲು ಮತ್ತು ಉತ್ತೇಜಿಸಲು ಬಳಸಲಾಗುತ್ತದೆ. ಇದು ಎರಡನೇ ಬಾರಿಗೆ ವಿಶ್ವ ಬ್ಯಾಂಕ್​ನಿಂದ ಎಂಎಸ್​ಎಂಇ ವಲಯಗಳ ಉತ್ತೇಜನಕ್ಕೆ ಹಣ ಸಹಾಯ ಮಾಡಲಾಗುತ್ತಿದೆ. ಮೊದಲ ಬಾರಿಗೆ 2020ರ ಜುಲೈ ತಿಂಗಳಲ್ಲಿ 75 ಕೋಟಿ ಅಮೆರಿಕನ್ ಡಾಲರ್ ಅನ್ನು ಎಮರ್ಜೆನ್ಸಿ ರೆಸ್ಪಾನ್ಸ್ ಪ್ರೋಗ್ರಾಂ ಅಡಿಯಲ್ಲಿ ನೀಡಲಾಗಿತ್ತು. ತಕ್ಷಣದ ನಗದು ಅಗತ್ಯ ಮತ್ತು ಸಾಲದ ಅವಶ್ಯಕತೆಯನ್ನು ಗಮನದಲ್ಲಿ ಇರಿಸಿಕೊಂಡು ಈ ನೆರವು ನೀಡಲಾಗಿತ್ತು.

ಈ ತನಕ 50 ಲಕ್ಷ ಸಂಸ್ಥೆಗಳು ಸರ್ಕಾರದ ಕಾರ್ಯಕ್ರಮದ ಅನುಕೂಲ ಪಡೆದಿವೆ. ಈಗ ಮಂಜೂರಾಗಿರುವ ಕಾರ್ಯಕ್ರಮವು ವಿಶ್ವ ಬ್ಯಾಂಕ್​ನ ಹಣಕಾಸು ನೆರವಿನ ಮೂಲಕ ನೀಡಲಾಗಿದೆ. ಎಂಎಸ್​ಎಂಇಗಳ ಉತ್ಪಾದಕತೆ ಹಾಗೂ ಹಣಕಾಸು ಲಭ್ಯತೆಯನ್ನು ಕಳೆದ ವರ್ಷದಿಂದ 125 ಕೋಟಿ ಅಮೆರಿಕನ್ ಡಾಲರ್​ಗೆ ಚೇತರಿಸಿಕೊಳ್ಳುವಂತೆ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಮೊದಲ ಹಂತವಾಗಿ, ಎಂಎಸ್​ಎಂಇಗಳ ಸಾಲದ ಅಗತ್ಯ ಮತ್ತು ನಗದು ಪೂರೈಕೆಯನ್ನು ಬೆಂಬಲಿಸುವ ಉದ್ದೇಶ ಇದೆ ಎನ್ನಲಾಗಿದೆ. ಭಾರತ ಸರ್ಕಾರದ ಎಂಎಸ್​ಎಂಇಗಳ ಉತ್ಪಾದಕತೆ ಮತ್ತು ಹಣಕಾಸು ನೆರವು ನೀಡಬೇಕು ಮತ್ತು ಆರ್ಥಿಕ ಚೇತರಿಕೆಗೆ ವೇಗ ನೀಡಬೇಕು ಎಂಬ ಪ್ರಯತ್ನಗಳನ್ನು RAMP ಕಾರ್ಯಕ್ರಮವು ಬೆಂಬಲಿಸುತ್ತದೆ ಎನ್ನಲಾಗಿದೆ.

ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವಂತೆ, ದೇಶದ ಆರ್ಥಿಕತೆಯ ಬೆನ್ನೆಲುಬಾದ ಎಂಎಸ್​ಎಂಇ ವಲಯವು ಭಾರತದ ಜಿಡಿಪಿಗೆ ಶೇ 30ರಷ್ಟು ಹಾಗೂ ರಫ್ತಿಗೆ ಶೇ 40ರಷ್ಟು ಕೊಡುಗೆ ನೀಡುತ್ತದೆ. ಒಟ್ಟು 5.8 ಕೋಟಿ ಎಂಎಸ್​ಎಂಗಳು ಭಾರತದಲ್ಲಿ ಇದ್ದು, ಆ ಪೈಕಿ ಶೇ 40ಕ್ಕೂ ಹೆಚ್ಚು ಸಂಸ್ಥೆಗಳಿಗೆ ಸಂಘಟಿತ ಹಣಕಾಸು ಮೂಲಕ್ಕೆ ಸಂಪರ್ಕವೇ ಇಲ್ಲ ಎಂದು ತಿಳಿಸಲಾಗಿದೆ. RAMP ಕಾರ್ಯಕ್ರಮವು ಎಂಎಸ್​ಎಂಇಗಳಿಗೆ ಹಣಕಾಸು ಸಾಲ ಹಾಗೂ ವರ್ಕಿಂಗ್ ಕ್ಯಾಪಿಟಲ್ ಒದಗಿಸುತ್ತದೆ. ಆನ್​ಲೈನ್ ವ್ಯಾಜ್ಯ ವಿಲೇವಾರಿಯನ್ನು ಹೆಚ್ಚಿಸುತ್ತದೆ; ಆ ಮೂಲಕ ಪಾವತಿ ವಿಳಂಬ ಆಗುತ್ತಿರುವ ಸಮಸ್ಯೆ ನಿವಾರಿಸುವುದಕ್ಕೆ ಯತ್ನಿಸುತ್ತದೆ. ಇದರಿಂದ ವೆಚ್ಚವನ್ನು ಇನ್ನಷ್ಟು ಕಡಿಮೆ ಮಾಡಿ, ಗುಣಮಟ್ಟ ಚೆನ್ನಾಗಿ ಆಗಲು ಸಹಾಯ ಆಗುತ್ತದೆ. ಜತೆಗೆ ಪರಿಣಾಮ, ಯೋಜನೆ ತಲುಪುವುದು ಕೂಡ ಸುಧಾರಣೆ ಕಾಣುತ್ತದೆ.

50 ಕೋಟಿ ಅಮೆರಿಕನ್ ಡಾಲರ್ ಸಾಲವನ್ನು ಇಂಟರ್​ನ್ಯಾಷನಲ್ ಬ್ಯಾಂಕ್ ಫಾರ್ ರೀಕನ್​ಸ್ಟ್ರಕ್ಷನ್ ಅಂಡ್ ಡೆವಲಪ್​ಮೆಂಟ್ (ಐಬಿಆರ್​ಡಿ) ನೀಡುತ್ತಿದ್ದು, ಮೆಚ್ಯೂರಿಟಿ (ಪಕ್ವತೆ) ಅವಧಿ 18.5 ವರ್ಷವಾಗಿದ್ದು, ಅದರಲ್ಲಿ 5.5 ವರ್ಷ ವಿನಾಯಿತಿ ಅವಧಿ ಸಹ ಸೇರಿದೆ.

ಇದನ್ನೂ ಓದಿ: ಕೇಂದ್ರದಿಂದ ಆರ್ಥಿಕ ಪ್ಯಾಕೇಜ್ ಘೋಷಣೆಗೆ ಸಿದ್ಧತೆ: ಪ್ರವಾಸೋದ್ಯಮ, ವಿಮಾನಯಾನ, ಎಂಎಸ್‌ಎಂಇ ಕ್ಷೇತ್ರಕ್ಕೆ ನೆರವು ಸಾಧ್ಯತೆ

(During covid 19 crisis World Bank approves finance program of 500 million USD to India’s MSME sector)

Published On - 7:03 pm, Mon, 7 June 21

ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್