World Bank Loan: ಭಾರತದ ಆರೋಗ್ಯಕ್ಷೇತ್ರದ ಆರೋಗ್ಯಕ್ಕೆ ವಿಶ್ವಬ್ಯಾಂಕ್​ನಿಂದ 8,200 ಕೋಟಿ ರೂ ಸಾಲ

|

Updated on: Mar 03, 2023 | 7:01 PM

Indian Health Infrastructure To Get Boost From World Bank: ಸಾರ್ವಜನಿಕ ಆರೋಗ್ಯ ಸೌಕರ್ಯವೃದ್ಧಿಗಾಗಿ ಭಾರತಕ್ಕೆ ವಿಶ್ವಬ್ಯಾಂಕ್​ನಿಂದ ಎರಡು ಸಾಲಗಳು ಸಿಕ್ಕಿವೆ. ಪಿಎಂ ಆಯುಷ್ಮಾನ್ ಭಾರತ್ ಹೆಲ್ತ್ ಇನ್​ಫ್ರಾಸ್ಟ್ರಕ್ಚರ್ ಯೋಜನೆಗೆ ಈ ಸಾಲದ ಮುಖ್ಯಭಾಗದ ಹಣ ಬಳಕೆಯಾಗಲಿದೆ.

World Bank Loan: ಭಾರತದ ಆರೋಗ್ಯಕ್ಷೇತ್ರದ ಆರೋಗ್ಯಕ್ಕೆ ವಿಶ್ವಬ್ಯಾಂಕ್​ನಿಂದ 8,200 ಕೋಟಿ ರೂ ಸಾಲ
ವರ್ಲ್ಡ್ ಬ್ಯಾಂಕ್
Follow us on

ನವದೆಹಲಿ: ವರ್ಲ್ಡ್ ಬ್ಯಾಂಕ್ ಸಿಇಒ ಆಗಿ ಭಾರತೀಯ ಮೂಲದ ಅಜಯ್ ಬಾಂಗಾ (World Bank CEO Ajay Banga) ನಾಮನಿರ್ದೇಶನಗೊಂಡಿದ್ದೇ ಬಂತು ಭಾರತಕ್ಕೆ ವಿಶ್ವಬ್ಯಾಂಕ್​ನಿಂದ ಎರಡು ಪ್ರಮುಖ ಸಾಲಗಳು ಸಿಕ್ಕಿವೆ. ಆರೋಗ್ಯಕ್ಷೇತ್ರದ ಸೌಕರ್ಯವೃದ್ಧಿಗೆ ತಲಾ 500 ಮಿಲಿಯನ್ ಡಾಲರ್ ಮೊತ್ತದ ಎರಡು ಪೂರಕ ಸಾಲಗಳಿಗೆ ಭಾರತ ಮತ್ತು ವಿಶ್ವ ಬ್ಯಾಂಕ್ ಸಹಿ ಹಾಕಿವೆ. ಕೇಂದ್ರ ಆರ್ಥಿಕ ವ್ಯವಹಾರಗಳ ವಿಭಾಗದ ಹೆಚ್ಚುವರಿ ಕಾರ್ಯದರ್ಶಿ ರಜತ್ ಕುಮಾರ್ ಮಿಶ್ರಾ ಮತ್ತು ವಿಶ್ವಬ್ಯಾಂಕ್ ಇಂಡಿಯಾ ಕಂಟ್ರಿ ಡೈರೆಕ್ಟರ್ ಆಗಸ್ಟೆ ಟಾನೋ ಕೌವಾಮೆ ಅವರು ಮಾರ್ಚ್ 3ರಂದು ಒಪ್ಪಂದಕ್ಕೆ ಸಹಿಹಾಕಿದ್ದಾರೆ. ಇದರೊಂದಿಗೆ ಭಾರತಕ್ಕೆ ವಿಶ್ವಬ್ಯಾಂಕ್​ನಿಂದ (World Bank Loan) ಒಟ್ಟು 1 ಬಿಲಿಯನ್ ಡಾಲರ್ (ಸುಮಾರು 8,200 ಕೋಟಿ ರೂ) ಸಾಲ ಪ್ರಾಪ್ತಿಯಾಗಲಿದೆ.

ದೇಶಾದ್ಯಂತ ಸಾರ್ವಜನಿಕ ಆರೋಗ್ಯ ಸೌಕರ್ಯ ಹೆಚ್ಚಿಸಲೆಂದು 2021ರ ಅಕ್ಟೋಬರ್​ನಲ್ಲಿ ಶುರುವಾದ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಫ್ರಾಸ್ಟ್ರಕ್ಚರ್ ಮಿಷನ್ (ಪಿಎಂ ಅಭಿಮ್) ಯೋಜನೆಗೆ ಈ ಹಣವನ್ನು ಬಳಸಿಕೊಳ್ಳಲಾಗುತ್ತದೆ.

ಆಂಧ್ರಪ್ರದೇಶ, ಕೇರಳ, ಮೇಘಾಲಯ, ಒಡಿಶಾ, ಪಂಜಾಬ್, ತಮಿಳುನಾಡು ಮತ್ತು ಉತ್ತರಪ್ರದೇಶ ಈ ಏಳು ರಾಜ್ಯಗಳಲ್ಲಿ ಆರೋಗ್ಯ ಸೇವೆ ಉತ್ತಮಗೊಳ್ಳುವಂತೆ ಮಾಡುವ ಉದ್ದೇಶ ಇದೆ.

ಕೋವಿಡ್ ಬಂದ ಬಳಿಕ ಆರೋಗ್ಯ ಕ್ಷೇತ್ರದ ಮಹತ್ವ ಸರ್ಕಾರದ ಅರಿವಿಗೂ ಬಂದಿದೆ. ಭವಿಷ್ಯದಲ್ಲಿ ಎದುರಾಗಬಹುದಾದ ಬೇರೆ ಸಾಂಕ್ರಾಮಿಕ ಪರಿಸ್ಥಿತಿಗಳನ್ನು ಎದುರಿಸಲು ಭಾರತದ ಆರೋಗ್ಯ ವ್ಯವಸ್ಥೆ ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಮಾಡಲು ಭಾರತ ಯೋಜನೆ ಹಾಕಿದೆ.

ಇದನ್ನೂ ಓದಿAmazon Pay: ಅಮೇಜಾನ್​ಗೆ 3 ಕೋಟಿ ದಂಡ ವಿಧಿಸಿದ ಭಾರತೀಯ ರಿಸರ್ವ್ ಬ್ಯಾಂಕ್

ಈ ಸಾಲ ಯೋಜನೆಯಲ್ಲಿ ಒಳಗೊಂಡಿರುವ ರಾಜ್ಯಗಳ ಜನರಿಗೆ ಭಾರೀ ಅನುಕೂಲವಾಗಲಿದೆ. ಹಾಗೆಯೇ, ಬೇರೆ ರಾಜ್ಯಗಳ ಮೇಲೂ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ವಿಶ್ವಬ್ಯಾಂಕ್ ನಿರೀಕ್ಷಿಸಿದೆ.

ಭಾರತದಲ್ಲಿ ಇತ್ತೀಚಿನ ಕೆಲ ದಶಕಗಳಿಂದ ಉತ್ತಮ ಆರೋಗ್ಯ ವ್ಯವಸ್ಥೆ ಇದೆ. 1990ರಲ್ಲಿ ಭಾರತದಲ್ಲಿ ವ್ಯಕ್ತಿಗಳ ಸರಾಸರಿ ಲೈಫ್ ಎಕ್ಸ್​ಪೆಕ್ಟೆನ್ಸಿ (ಜೀವಿತಾವಧಿ) 58 ವರ್ಷ ಇತ್ತು. ಇದು 2020ರಲ್ಲಿ 69.8 ವರ್ಷಕ್ಕೆ ಏರಿದೆ. ದೇಶದ ಆದಾಯ ಮಟ್ಟದ ಸರಾಸರಿಗಿಂತಲೂ ಇದು ಹೆಚ್ಚು. ಶಿಶು ಮರಣ ದರ ಕೂಡ ಕಡಿಮೆ ಆಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ಫಲ ಇದು. ಆದರೂ ಕೂಡ ಕೋವಿಡ್​​ನಂತಹ ತೀವ್ರ ಬಿಕ್ಕಟ್ಟು ಸಂದರ್ಭಗಳನ್ನು ಎದುರಿಸುವಲ್ಲಿ ನಮ್ಮ ವೈದ್ಯಕೀಯ ವ್ಯವಸ್ಥೆಯ ಕೆಲ ನ್ಯೂನತೆಗಳು ವೇದ್ಯಗೊಂಡಿದ್ದವು.

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:01 pm, Fri, 3 March 23