WPI Inflation: ಡಬ್ಲ್ಯುಪಿಐ ಹಣದುಬ್ಬರ ಡಿಸೆಂಬರ್​ನಲ್ಲಿ ಶೇ. 0.73ಕ್ಕೆ ಏರಿಕೆ; ಕಳೆದ 9 ತಿಂಗಳಲ್ಲೇ ಗರಿಷ್ಠ ಮಟ್ಟ

|

Updated on: Jan 15, 2024 | 2:54 PM

ಸಗಟು ಬೆಲೆ ಸೂಚಿ ಆಧಾರಿತ ಹಣದುಬ್ಬರ 2023ರ ಡಿಸೆಂಬರ್ ತಿಂಗಳಲ್ಲಿ 47 ಮೂಲಾಂಕಗಳಷ್ಟು ಏರಿದೆ. 2023ರ ನವೆಂಬರ್​ನಲ್ಲಿ 0.26 ಪ್ರತಿಶತದಷ್ಟಿದ್ದ ಡಬ್ಲ್ಯುಪಿಐ ಹಣದುಬ್ಬರ ಡಿಸೆಂಬರ್​ನಲ್ಲಿ 0.73 ಪ್ರತಿಶತಕ್ಕೆ ಏರಿದೆ. ಹೋಲ್​ಸೇಲ್ ಹಣದುಬ್ಬರ ಡಿಸೆಂಬರ್​ನಲ್ಲಿ ಹೆಚ್ಚಳವಾಗಿರುವುದು ಅನಿರೀಕ್ಷಿತವೇನಲ್ಲ. ಬಹುತೇಕ ಎಲ್ಲಾ ಆರ್ಥಿಕ ತಜ್ಞರೂ ನಿರೀಕ್ಷಿಸಿದ್ದರು.

WPI Inflation: ಡಬ್ಲ್ಯುಪಿಐ ಹಣದುಬ್ಬರ ಡಿಸೆಂಬರ್​ನಲ್ಲಿ ಶೇ. 0.73ಕ್ಕೆ ಏರಿಕೆ; ಕಳೆದ 9 ತಿಂಗಳಲ್ಲೇ ಗರಿಷ್ಠ ಮಟ್ಟ
ಹಣದುಬ್ಬರ
Follow us on

ನವದೆಹಲಿ, ಜನವರಿ 15: ರೀಟೇಲ್ ಹಣದುಬ್ಬರ ಹೆಚ್ಚಳದ ಬಳಿಕ ಈಗ ಹೋಲ್​ಸೇಲ್ ಬೆಲೆ ಹಣದುಬ್ಬರ ಏರಿರುವ ಸುದ್ದಿ ಬಂದಿದೆ ಸಗಟು ಮಾರಾಟ ದರ ಸೂಚಿ ಆಧಾರಿತ ಹಣದುಬ್ಬರ (WPI base Inflation) ಡಿಸೆಂಬರ್ ತಿಂಗಳಲ್ಲಿ 47 ಮೂಲಾಂಕಗಳಷ್ಟು ಹೆಚ್ಚಳಾಗಿದೆ. ಸಂಕ್ರಾಂತಿ ಹಬ್ಬದ ದಿನವಾದ ಇಂದು ಕೇಂದ್ರ ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಡಬ್ಲ್ಯುಪಿಐ ಆಧಾರಿತ ಹಣದುಬ್ಬರ 2023ರ ಡಿಸೆಂಬರ್ ತಿಂಗಳಲ್ಲಿ ಶೇ. 0.73ಕ್ಕೆ ಹೋಗಿದೆ. ನವೆಂಬರ್ ತಿಂಗಳಲ್ಲಿಇದು 0.26 ಪ್ರತಿಶತದಷ್ಟು ಇತ್ತು. ಈತ ಸತತ ಎರಡು ತಿಂಗಳು ಸಗಟು ಬೆಲೆ ಹಣದುಬ್ಬರ ಶೂನ್ಯಕ್ಕಿಂತ ಮೇಲಿದ್ದಾಂಗಿದೆ. ಡಿಸೆಂಬರ್ ತಿಂಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಕಡಿಮೆ ಆದರೂ ಹಣದುಬ್ಬರ ಏರಲು ಬೇಸ್ ಎಫೆಕ್ಟ್ ಕಾರಣ ಎನ್ನಲಾಗಿದೆ.

ಡಿಸೆಂಬರ್ ತಿಂಗಳಲ್ಲಿ ಇರುವ ಶೇ. 0.73ರ ಡಬ್ಲ್ಯುಪಿಐ ಹಣದುಬ್ಬರವು ಕಳೆದ 9 ತಿಂಗಳಲ್ಲೇ ಗರಿಷ್ಠ ಮಟ್ಟದ್ದಾಗಿದೆ. ನವೆಂಬರ್ ತಿಂಗಳಲ್ಲಿ 0.26 ಪ್ರತಿಶತದಷ್ಟು ಹಣದುಬ್ಬರ ಇದ್ದರೆ, 2022ರ ಡಿಸೆಂಬರ್ ತಿಂಗಳಲ್ಲಿ ಶೇ. 5.02ರಷ್ಟು ಇತ್ತು. ಈ ಹಣಕಾಸು ವರ್ಷದಲ್ಲಿ (2023-24) ಇಲ್ಲಿಯವರೆಗೆ ಅಂದರೆ ಮೂರು ತ್ರೈಮಾಸಿಕಗಳವರೆಗೆ ಸಗಟು ಮಾರಾಟ ದರ ಹಣದುಬ್ಬರದ ಪ್ರಮಾಣವನ್ನು ಸರಾಸರಿ ಪಡೆದರೆ ಮೈನಸ್ 1.1 ಪ್ರತಿಶತದಷ್ಟಿದೆ. ಅಂದರೆ ಶೂನ್ಯಕ್ಕಿಂತಲೂ ಕಡಿಮೆ ಇದೆ.

ಇದನ್ನೂ ಓದಿ: Inflation: ರೀಟೇಲ್ ಹಣದುಬ್ಬರ ಡಿಸೆಂಬರ್​ನಲ್ಲಿ ಶೇ. 5.69; ಸರ್ಕಾರದಿಂದ ಅಧಿಕೃತ ಮಾಹಿತಿ ಬಿಡುಗಡೆ

ಹೋಲ್​ಸೇಲ್ ದರದ ಹಣದುಬ್ಬರ ಡಿಸೆಂಬರ್ ತಿಂಗಳಲ್ಲಿ ಹೆಚ್ಚಳವಾಗಿರುವುದು ಅನಿರೀಕ್ಷಿತವೇನಲ್ಲ. ಬಹುತೇಕ ಎಲ್ಲಾ ಆರ್ಥಿಕ ತಜ್ಞರೂ ಇದನ್ನು ನಿರೀಕ್ಷಿಸಿದ್ದರು. ವಾಸ್ತವದಲ್ಲಿ ಮುಂದಿನ ಕೆಲ ತಿಂಗಳು ಈ ಏರಿಕೆಯ ಪ್ರವೃತ್ತಿ ಮುಂದುವರಿಯುವ ನಿರೀಕ್ಷೆ ಇದೆ. ಈ ಡಬ್ಲ್ಯುಪಿಐ ಇನ್​ಫ್ಲೇಶನ್ ಹೆಚ್ಚಿದರೂ ರೀಟೇಲ್ ಹಣದುಬ್ಬರದ ಇಳಿಕೆಗೆ ಹೆಚ್ಚಿನ ಪರಿಣಾಮ ಇರದು ಎನ್ನಲಾಗುತ್ತಿದೆ.

ಬೇಸ್ ಎಫೆಕ್ಟ್?

ನವೆಂಬರ್ ತಿಂಗಳಿಗೆ ಹೋಲಿಸಿದರೆ ಡಿಸೆಂಬರ್ ತಿಂಗಳಲ್ಲಿ ಆಹಾರ ವಸ್ತುಗಳ ಬೆಲೆ ಇಳಿಮುಖವಾಗಿದೆ. ಆದರೆ, ಹಣದುಬ್ಬರ ಮಾತ್ರ ಹೆಚ್ಚಾಗಿದೆ. 2022ರ ಡಿಸೆಂಬರ್ ತಿಂಗಳಲ್ಲಿ ಸಗಟು ಮಾರಾಟ ದರ ಸೂಚಿ 1.3 ಪ್ರತಿಶತದಷ್ಟು ಇಳಿಮುಖವಾಗಿತ್ತು. ಆ ಅವಧಿಯ ದರದ ಆಧಾರದ ಮೇಲೆ 2023ರ ಡಬ್ಲ್ಯುಪಿಐ ಹಣದುಬ್ಬರವನ್ನು ಗಣಿಸಲಾಗುತ್ತದೆ. ಹೀಗಾಗಿ, ಹಣದುಬ್ಬರ ಹೆಚ್ಚಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ