Inflation: ರೀಟೇಲ್ ಹಣದುಬ್ಬರ ಡಿಸೆಂಬರ್​ನಲ್ಲಿ ಶೇ. 5.69; ಸರ್ಕಾರದಿಂದ ಅಧಿಕೃತ ಮಾಹಿತಿ ಬಿಡುಗಡೆ

2023 December Inflation Rate: 2023ರ ಡಿಸೆಂಬರ್ ತಿಂಗಳಲ್ಲಿ ಭಾರತದ ಹಣದುಬ್ಬರ ಶೇ. 5.69ರಷ್ಟು ಇದೆ ಎಂದು ಎನ್​ಎಸ್​ಒ ವರದಿಯಲ್ಲಿ ತಿಳಿಸಲಾಗಿದೆ. 2022ರ ಡಿಸೆಂಬರ್​ನಲ್ಲಿ ಹಣದುಬ್ಬರ ಶೇ 8.7ರಷ್ಟಿತ್ತು. 2023ರ ನವೆಂಬರ್​ನಲ್ಲಿ ಶೇ. 5.55ರಷ್ಟಿತ್ತು. ಡಿಸೆಂಬರ್ ತಿಂಗಳ ಔದ್ಯಮಿಕ ಉತ್ಪನ್ನ (ಐಐಪಿ) ಶೇ. 2.4ರಷ್ಟು ಹೆಚ್ಚಿದೆ.

Inflation: ರೀಟೇಲ್ ಹಣದುಬ್ಬರ ಡಿಸೆಂಬರ್​ನಲ್ಲಿ ಶೇ. 5.69; ಸರ್ಕಾರದಿಂದ ಅಧಿಕೃತ ಮಾಹಿತಿ ಬಿಡುಗಡೆ
ಹಣದುಬ್ಬರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 12, 2024 | 6:26 PM

ನವದೆಹಲಿ, ಜನವರಿ 12: ಡಿಸೆಂಬರ್ ತಿಂಗಳ ರೀಟೇಲ್ ಹಣದುಬ್ಬರದ (retail inflation) ದತ್ತಾಂಶವನ್ನು ಸರ್ಕಾರ ಬಿಡುಗಡೆ ಮಾಡಿದೆ. ಅದರ ಪ್ರಕಾರ ಭಾರತದ ರೀಟೇಲ್ ಹಣದುಬ್ಬರ ಡಿಸೆಂಬರ್ 2023ರಲ್ಲಿ ಶೇ. 5.69ಕ್ಕೆ ಏರಿದೆ. ನವೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ. 5.55ರಷ್ಟಿತ್ತು. ಕಳೆದ ವರ್ಷದ (2022) ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಈ ಬಾರಿ ಹಣದುಬ್ಬರ ಕಡಿಮೆ ಆಗಿದೆ. 2022ರ ಡಿಸೆಂಬರ್​ನಲ್ಲಿ ರೀಟೇಲ್ ಇನ್​ಫ್ಲೇಶನ್ ಶೇ. 5.72ರಷ್ಟಿತ್ತು. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್​ಎಸ್​ಒ) ಇಂದು ಶುಕ್ರವಾರ (ಜ. 12) ಬಿಡುಗಡೆ ಮಾಡಿದ ದತ್ತಾಂಶದಲ್ಲಿ ಈ ವಿವರಗಳು ಇವೆ.

ನವೆಂಬರ್​ಗೆ ಹೋಲಿಸಿದರೆ ಡಿಸೆಂಬರ್ ತಿಂಗಳಲ್ಲಿ ಹಣದುಬ್ಬರ ಹೆಚ್ಚಲು ಪ್ರಮುಖ ಕಾರಣವಾಗಿದ್ದು ಆಹಾರ ಬೆಲೆ ಹೆಚ್ಚಳ. ಕಳೆದ ವರ್ಷದ (2022) ಡಿಸೆಂಬರ್​ನಲ್ಲಿ ಆಹಾರ ಹಣದುಬ್ಬರ ಶೇ. 4.9ರಷ್ಟಿತ್ತು. ಈ ಬಾರಿ ಅದು ಶೇ. 9.53ರಷ್ಟಾಗಿದೆ. ನವೆಂಬರ್ ತಿಂಗಳಲ್ಲಿ ಶೇ. 8.7ರಷ್ಟು ಇತ್ತು.

ಇದನ್ನೂ ಓದಿ: Byjus Valuation: ಬೈಜುಸ್​ಗೆ ಬ್ಲ್ಯಾಕ್​ರಾಕ್ ಹೊಡೆತ; ಶೇ. 95ರಷ್ಟು ಮೌಲ್ಯ ಕುಸಿತ; 22ರಿಂದ 1ಕ್ಕೆ ಕುಸಿದ ಬೈಜೂಸ್

ಮೊನ್ನೆ ಮನಿಕಂಟ್ರೋಲ್ ಸಂಸ್ಥೆ ನಡೆಸಿದ 18 ಆರ್ಥಿಕ ತಜ್ಞರ ಅಭಿಪ್ರಾಯ ಸಮೀಕ್ಷೆ ಪ್ರಕಾರ ಡಿಸೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ. 6ಕ್ಕೆ ಸಮೀಪ ಇರಬಹುದು ಎಂದು ಅಂದಾಜಿಸಲಾಗಿತ್ತು. ಅದಕ್ಕಿಂತಲೂ ತುಸು ಕಡಿಮೆ ಹಣದುಬ್ಬರ ದಾಖಲಾಗಿದೆ.

ಭಾರತದಲ್ಲಿ ಹಣದುಬ್ಬರವನ್ನು ಶೇ. 4ಕ್ಕೆ ನಿಯಂತ್ರಿಸಬೇಕೆನ್ನುವುದು ಆರ್​ಬಿಐನ ಮೂಲ ಗುರಿ. ಈ ಶೇ. 4ಕ್ಕೆ 2 ಪ್ರತಿಶತದಷ್ಟು ಆಸುಪಾಸಿನಲ್ಲಿ ಹಣದುಬ್ಬರವನ್ನು ಹಿಡಿದಿಡುವುದು ಆರ್​ಬಿಐಗೆ ಸದ್ಯದ ಗುರಿ. ಅಂದರೆ, ಶೇ. 2ರಿಂದ 6 ಅನ್ನು ಆರ್​ಬಿಐ ಹಣದುಬ್ಬರ ಗುರಿಯ ತಾಳಿಕೆ ಮಿತಿಯಾಗಿ ನಿಗದಿ ಮಾಡಿದೆ. ಅಂದರೆ, ಹಣದುಬ್ಬರ ಶೇ. 2ಕ್ಕಿಂತ ಕೆಳಗೆ ಕುಸಿಯದಂತೆ, ಮತ್ತು ಶೇ. 6ಕ್ಕಿಂತ ಮೇಲೆ ಏರದಂತೆ ನೋಡಿಕೊಳ್ಳುವುದು ಆರ್​ಬಿಐಗೆ ಸವಾಲಾಗಿದೆ. ಸದ್ಯಕ್ಕೆ ಈ ತಾಳಿಕೆಯ ಮಿತಿಯಲ್ಲಿ ಹಣದುಬ್ಬರ ಇದೆ.

ಇದನ್ನೂ ಓದಿ: Chip factory: ಮೈಕ್ರೋನ್, ಎಎಂಡಿ ಬಳಿಕ ಈಗ ಟಾಟಾ ಗ್ರೂಪ್​ನಿಂದ ಚಿಪ್ ಫ್ಯಾಕ್ಟರಿ ಸ್ಥಾಪನೆಗೆ ಅರ್ಜಿ; ಈ ವರ್ಷವೇ ಘಟಕ ನಿರ್ಮಾಣ ಸಾಧ್ಯತೆ

ಔದ್ಯಮಿಕ ಉತ್ಪಾದನೆ ಶೇ. 2.4ರಷ್ಟು ಮಾತ್ರ ಹೆಚ್ಚಳ

ಇದೇ ವೇಳೆ, 2023ರ ನವೆಂಬರ್ ತಿಂಗಳಲ್ಲಿ ಭಾರತದ ಔದ್ಯಮಿಕ ಉತ್ಪಾದನೆ (ಐಐಪಿ) ಶೇ. 2.4ರಷ್ಟು ಹೆಚ್ಚಾಗಿದೆ. ಹಿಂದಿನ ವರ್ಷದಲ್ಲಿ ಇದು ಶೇ. 7.6ರಷ್ಟು ಹೆಚ್ಚಾಗಿತ್ತು. ಉತ್ಪಾದನಾ ವಲಯದ ಔಟ್​ಪುಟ್ ಶೇ 1.2ರಷ್ಟು ಹೆಚ್ಚಿರುವುದು ಈ ದತ್ತಾಂಶದಿಂದ ತಿಳಿದುಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ