ಶತ್ರು ಆಸ್ತಿ, 2.91 ಲಕ್ಷ ಷೇರುಗಳನ್ನು ಮಾರಲು ಮುಂದಾದ ಭಾರತ ಸರ್ಕಾರ; ಎನಿಮಿ ಪ್ರಾಪರ್ಟಿಗಳೆಂದರೆ ಯಾವುವು?

Enemy Property Shares: ಭಾರತದಲ್ಲಿರುವ ಶತ್ರು ಆಸ್ತಿ ಷೇರುಗಳನ್ನು ಸರ್ಕಾರ ಮಾರಲು ಹೊರಟಿದೆ. ಒಟ್ಟು 2.91 ಲಕ್ಷ ಎನಿಮಿ ಪ್ರಾಪರ್ಟಿ ಷೇರುಗಳು ಮಾರಾಟಕ್ಕಿವೆ. ಮೊದಲ ಹಂತದಲ್ಲಿ ಸರ್ಕಾರ 1.88 ಲಕ್ಷ ಎನಿಮಿ ಷೇರುಗಳನ್ನು ಮಾರಲು ಬಿಡ್ ಕರೆದಿದೆ. 1947ರಿಂದ 1962ರ ಅವಧಿಯಲ್ಲಿ ಭಾರತದಿಂದ ಪಾಕಿಸ್ತಾನ ಮತ್ತು ಚೀನಾಗೆ ವಲಸೆ ಹೋಗಿ ಅಲ್ಲಿನ ಪೌರತ್ವ ಪಡೆದವರ ಆಸ್ತಿ ಮಾರಲಾಗುತ್ತಿದೆ.

ಶತ್ರು ಆಸ್ತಿ, 2.91 ಲಕ್ಷ ಷೇರುಗಳನ್ನು ಮಾರಲು ಮುಂದಾದ ಭಾರತ ಸರ್ಕಾರ; ಎನಿಮಿ ಪ್ರಾಪರ್ಟಿಗಳೆಂದರೆ ಯಾವುವು?
ಷೇರು
Follow us
|

Updated on: Jan 12, 2024 | 5:10 PM

ನವದೆಹಲಿ, ಜನವರಿ 12: ಶತ್ರುವೆಂದು ಪರಿಗಣಿಸಲಾದ ದೇಶಕ್ಕೆ ಹೋಗಿ ನೆಲಸಿರುವ ವ್ಯಕ್ತಿ ಅಥವಾ ಸಂಸ್ಥೆಗಳ ಆಸ್ತಿ ಪಾಲನ್ನು (Enemy property shares) ಸರ್ಕಾರ ಮಾರುತ್ತಿದೆ. ಮೊದಲ ಹಂತದಲ್ಲಿ 84 ಕಂಪನಿಗಳಲ್ಲಿರುವ 2.91 ಲಕ್ಷ ಶತ್ರು ಷೇರುಗಳನ್ನು ಹರಾಜಿಗಿಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ 20 ಕಂಪನಿಗಳ 1.88 ಲಕ್ಷ ಷೇರುಗಳನ್ನು ಗುರುತಿಸಿ ಮಾರಲು ಮುಂದಾಗಿದೆ. ಸರ್ಕಾರ ಈಗಾಗಲೇ ಬಿಡ್​ಗೆ ಆಹ್ವಾನಿಸಿ ಪಬ್ಲಿಕ್ ನೋಟೀಸ್ ಪ್ರಕಟಿಸಿದೆ.

ಏನಿದು ಶತ್ರು ಆಸ್ತಿ?

ಭಾರತದ ನಾಗರಿಕರು ತಮ್ಮ ಆಸ್ತಿಪಾಸ್ತಿಗಳನ್ನು ಬಿಟ್ಟು ಪಾಕಿಸ್ತಾನ ಮತ್ತು ಚೀನಾಗೆ ವಲಸೆ ಹೋಗಿ ಅಲ್ಲಿ ಪೌರತ್ವ ಪಡೆದಿದ್ದರೆ, ಅಂಥವರ ಆಸ್ತಿಯನ್ನು ಎನಿಮಿ ಪ್ರಾಪರ್ಟಿ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ 1947ರಿಂದ 1962ರ ಅವಧಿಯಲ್ಲಿ ವಲಸೆ ಹೋದವರು ವಿವಿಧ ಕಂಪನಿಗಳಲ್ಲಿ ಹೊಂದಿದ್ದ ಷೇರುಪಾಲು ಇದಾಗಿದೆ. ಇಂಥ 2,91,536 ಷೇರುಗಳು ಸದ್ಯಕ್ಕೆ ಕಸ್ಟಡಿಯನ್ ಆಫ್ ಎನಿಮಿ ಪ್ರಾಪರ್ಟೀಸ್ ಆಫ್ ಇಂಡಿಯಾ (ಸಿಇಪಿಐ) ಸಂಸ್ಥೆಯ ಸುಪರ್ದಿಯಲ್ಲಿದೆ. ಇದರಲ್ಲಿ ಮೊದಲ ಹಂತದಲ್ಲಿ 1.88 ಲಕ್ಷ ಷೇರುಗಳನ್ನು ಮಾರಲಾಗುತ್ತಿದೆ. ಇಲ್ಲಿ ಕಂಪನಿಗಳ ಷೇರುಗಳು ಮಾತ್ರವಲ್ಲ ಜಮೀನು, ಕಟ್ಟಡ, ಒಡವೆ ಇತ್ಯಾದಿ ಆಸ್ತಿಯೂ ಸೇರಿರಬಹುದು.

ಇದನ್ನೂ ಓದಿ: ಚೀನಾಗೆ ಈ ಅನುಕೂಲ ಸಿಗಲು ಬಹಳ ವರ್ಷ ಬೇಕಾಯಿತು; ಭಾರತಕ್ಕೆ ಈಗಲೇ ಸಿಕ್ಕಿದೆ: ಆರ್ಥಿಕತೆಯ ಒಳನೋಟ ಬಿಚ್ಚಿಟ್ಟ ಫೇರ್​ಫ್ಯಾಕ್ಸ್ ಮುಖ್ಯಸ್ಥ ಪ್ರೇಮ್ ವತ್ಸ

ಸರ್ಕಾರ ಕರೆದಿರುವ ಬಿಡ್​ನಲ್ಲಿ ರಿಸರ್ವ್ ಪ್ರೈಸ್ ನಿಗದಿ ಮಾಡಿದೆ. ಇದಕ್ಕಿಂತ ಕಡಿಮೆ ದರ ಕೋಟ್ ಮಾಡುವ ಬಿಡ್​ಗಳನ್ನು ತಿರಸ್ಕರಿಸಲಾಗುತ್ತದೆ. ಅತಿ ಹೆಚ್ಚು ಬೆಲೆ ಕೋಟ್ ಮಾಡುವ ಬಿಡ್ಡರ್​ಗಳಿಗೆ ಷೇರುಗಳನ್ನು ಕೊಡಲಾಗುತ್ತದೆ.

ಮಾರುತ್ತಿರುವುದು ಯಾಕೆ?

ನಿರ್ಗತಿಕವಾಗಿ ಬಿದ್ದಿದ್ದ ಈ ಆಸ್ತಿಗಳಿಂದ ಯಾವ ಅನುಕೂಲಗಳು ಆಗುತ್ತಿಲ್ಲ. ಚರಾಸ್ತಿಗಳನ್ನು ಮಾರಿದರೆ ಸರ್ಕಾರಕ್ಕೂ ಆದಾಯ ಬಂದಂತಾಗುತ್ತದೆ. ಈ ಹಿಂದೆ ಕೆಲ ಬಾರಿ ಶತ್ರು ಆಸ್ತಿಗಳನ್ನು ಸರ್ಕಾರ ಮಾರಿ ನೂರಾರು ಕೋಟಿ ರೂ ಹಣ ಆದಾಯ ಪಡೆದಿದೆ. ಇದನ್ನು ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ