ಚೀನಾಗೆ ಈ ಅನುಕೂಲ ಸಿಗಲು ಬಹಳ ವರ್ಷ ಬೇಕಾಯಿತು; ಭಾರತಕ್ಕೆ ಈಗಲೇ ಸಿಕ್ಕಿದೆ: ಆರ್ಥಿಕತೆಯ ಒಳನೋಟ ಬಿಚ್ಚಿಟ್ಟ ಫೇರ್​ಫ್ಯಾಕ್ಸ್ ಮುಖ್ಯಸ್ಥ ಪ್ರೇಮ್ ವತ್ಸ

Fairfax Financial Holdings Chairman: ಭಾರತದ ಮೂರನೇ ಎರಡು ಭಾಗದಷ್ಟು ಆರ್ಥಿಕತೆಯು ಗ್ರಾಹಕ ಕೇಂದ್ರಿತವಾಗಿದೆ. ಇದು ಬಹಳ ದೊಡ್ಡ ಅನುಕೂಲ ಎಂದು ಫೇರ್​ಫ್ಯಾಕ್ಸ್ ಮುಖ್ಯಸ್ಥ ಹೇಳಿದ್ದಾರೆ. ಮೋದಿ ಅವರು ಪ್ರಧಾನಿ ಆಗಿರುವವರೆಗೂ ಆರ್ಥಿಕ ಪರಿಸ್ಥಿತಿ ಬಗ್ಗೆ ಹೂಡಿಕೆದಾರರಿಗೆ ಚಿಂತೆ ಇದ್ದಂತಿಲ್ಲ ಎಂದು ಪ್ರೇಮ್ ವತ್ಸ ತಿಳಿಸಿದ್ದಾರೆ. ಬಿಐಎಎಲ್​ನಲ್ಲಿ ಶೇ. 64ರಷ್ಟು ಪಾಲು ಹೊಂದಿರುವ ಫೇರ್ ಫ್ಯಾಕ್ಸ್ ಸಂಸ್ಥೆ ಭಾರತದಲ್ಲಿ ಇನ್ನಷ್ಟು ಏರ್ಪೋರ್ಟ್ ಅಭಿವೃದ್ದಿಗೆ ಬಿಡ್ ಸಲ್ಲಿಸಲು ಯೋಜಿಸಿದೆ.

ಚೀನಾಗೆ ಈ ಅನುಕೂಲ ಸಿಗಲು ಬಹಳ ವರ್ಷ ಬೇಕಾಯಿತು; ಭಾರತಕ್ಕೆ ಈಗಲೇ ಸಿಕ್ಕಿದೆ: ಆರ್ಥಿಕತೆಯ ಒಳನೋಟ ಬಿಚ್ಚಿಟ್ಟ ಫೇರ್​ಫ್ಯಾಕ್ಸ್ ಮುಖ್ಯಸ್ಥ ಪ್ರೇಮ್ ವತ್ಸ
ಪ್ರೇಮ್ ವತ್ಸ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 12, 2024 | 12:09 PM

ನವದೆಹಲಿ, ಜನವರಿ 12: ಬೆಂಗಳೂರಿನ ಏರ್ಪೋರ್ಟ್ ಸಂಸ್ಥೆ ಬಿಎಐಎಲ್​ನಲ್ಲಿ ಹೂಡಿಕೆ ಹೆಚ್ಚಿಸಿರುವ ಕೆನಡಾ ಮೂಲದ ಫೇರ್​​ಫ್ಯಾಕ್ಸ್ ಸಂಸ್ಥೆಯ (Fairfax Financial Holdings) ಮುಖ್ಯಸ್ಥ ಪ್ರೇಮ್ ವತ್ಸ (Prem Watsa) ಅವರು ಭಾರತದ ಆರ್ಥಿಕತೆ ಪರಿಸ್ಥಿತಿ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತದ ಆರ್ಥಿಕ ಮುನ್ನಡೆಯ ದಾರಿಯಲ್ಲಿರುವ ಅನುಕೂಲತೆ ಬಗ್ಗೆ ವಿಶದ ಪಡಿಸಿದ್ದಾರೆ.

‘ಭಾರತದ ಮೂರನೇ ಎರಡು ಭಾಗದಷ್ಟು ಆರ್ಥಿಕತೆಯು ಗ್ರಾಹಕ ಕೇಂದ್ರಿತವಾಗಿದೆ (consumer oriented). ಇದು ಈ ದೇಶಕ್ಕಿರುವ ಬಹಳ ದೊಡ್ಡ ಅನುಕೂಲ. ಚೀನಾದಂತಹ ದೇಶಗಳಿಗೆ ಈ ಅನುಕೂಲ ಒದಗಿ ಬರಲು ಬಹಳ ಕಾಲ ಹಿಡಿಯಿತು. ಸೌಕರ್ಯ ಅಭಿವೃದ್ಧಿ, ಸರ್ಕಾರೀ ವೆಚ್ಚ ಎಲ್ಲವೂ ಆಗುತ್ತಿದೆ. ಆರ್ಥಿಕತೆ ಆಗಿಷ್ಟು ಈಗಿಷ್ಟು ಕಡಿಮೆ ಆಗಬಹುದಾದರೂ ಒಟ್ಟಾರೆ ಆರ್ಥಿಕತೆಗೆ ಸ್ಥಿರತೆ ತರುತ್ತದೆ’ ಎಂದು ಪ್ರೇಮ್ ವತ್ಸ ಹೇಳಿದ್ದಾರೆ.

ಇದನ್ನೂ ಓದಿ: Infosys-InSemi: ಬೆಂಗಳೂರಿನ ಸೆಮಿಕಂಡಕ್ಟರ್ ಡಿಸೈನ್ ಕಂಪನಿ ಇನ್​ಸೆಮಿಯನ್ನು ಖರೀದಿಸಲು ಮುಂದಾದ ಇನ್ಫೋಸಿಸ್

ಮೋದಿ ಇರುವವರೆಗೂ ಭಾರತದ ಆರ್ಥಿಕತೆಯ ಬಗ್ಗೆ ಚಿಂತೆ ಇಲ್ಲ…

ಭಾರತದಲ್ಲಿ ಸಮೀಕ್ಷೆಗಳ ಪ್ರಕಾರ ಪ್ರಧಾನಿ ಮೋದಿ ಮೇಲೆ ಶೇ. 70-80ರಷ್ಟು ಜನರಿಗೆ ವಿಶ್ವಾಸ ಇದೆ. ಹೂಡಿಕೆದಾರರಿಗೆ ಮೋದಿ ಬಗ್ಗೆ ವಿಶ್ವಾಸ ಇದೆ. ಮೋದಿ ಇದ್ದರೆ ಆರ್ಥಿಕ ಬೆಳವಣಿಗೆ ಹೀಗೇ ಮುಂದುವರಿಯುತ್ತದೆ. ವ್ಯವಹಾರ ಸ್ನೇಹಿ ನೀತಿಗಳು ಜಾರಿಯಲ್ಲಿರುತ್ತವೆ. ಅಸಮರ್ಪಕ ತೆರಿಗೆ ವಿಧಿಸುವುದಿಲ್ಲ ಎನ್ನುವ ಭಾವನೆ ಇದೆ,’ ಎಂದು ಫೇರ್​ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಸಂಸ್ಥೆಯ ಛೇರ್ಮನ್ ಆದ ಅವರು ಅಭಿಪ್ರಾಯಪಟ್ಟಿದ್ದಾರೆ.

15 ವರ್ಷದ ಹಿಂದಿನ ಚೀನಾದಂತಿದೆ ಭಾರತ…

‘ಭಾರತ ಮುನ್ನುಗ್ಗುತ್ತಿದೆ. ಅಮೆರಿಕದಲ್ಲಿ ಆರ್ಥಿಕತೆ ಮಂದಗೊಂಡಿರಬಹುದು. ಚೀನಾದಲ್ಲಿ ಸಾಲದ ಪ್ರಮಾಣ ಹೆಚ್ಚಿದೆ. ರಿಯಲ್ ಎಸ್ಟೇಟ್ ಬಿಕ್ಕಟ್ಟು ಇತ್ಯಾದಿ ಸಮಸ್ಯೆಗಳಿವೆ. ಆದರೆ, ಭಾರತಲ್ಲಿ ಇಂತಹ ಸಮಸ್ಯೆಗಳಿಲ್ಲ. ಇಲ್ಲಿ ಷೇರುಪೇಟೆಯಲ್ಲಿ ಬೆಲೆ ಅಧಿಕವಾಗಿರಬಹುದು. 15 ಅಥವಾ 20 ವರ್ಷಗಳ ಹಿಂದೆ ಚೀನಾ ಇದ್ದಂತಹ ಸ್ಥಿತಿಯಲ್ಲಿ ಭಾರತ ಇದೆ. ಹೀಗಾಗಿ, ಆರ್ಥಿಕ ಬೆಳವಣಿಗೆಯಲ್ಲಿ ಭಾರತದ ಹಾದಿ ಬಹಳ ದೂರ ಹೋಗಬಹುದು,’ ಎಂದು ಪ್ರೇಮ್ ವತ್ಸ ತಿಳಿಸಿದ್ದಾರೆ.

ಇದನ್ನೂ ಓದಿ: World’s Most Valuable Company: ವಿಶ್ವದ ಅತಿಹೆಚ್ಚು ಮೌಲ್ಯದ ಕಂಪನಿ; ಕ್ಷಣಿಕವಾದರೂ ಆ್ಯಪಲ್ ಅನ್ನು ಮತ್ತೆ ಹಿಂದಿಕ್ಕಿದ ಮೈಕ್ರೋಸಾಫ್ಟ್

ಟೊರಾಂಟೋದಲ್ಲಿ ಮುಖ್ಯಕಚೇರಿ ಹೊಂದಿರುವ ಫೇರ್​ಫ್ಯಾಕ್ಸ್ ಬೆಂಗಳೂರಿನ ಏರ್​ಪೋರ್ಟ್​ನ ಮಾಲೀಕ ಸಂಸ್ಥೆ ಬಿಐಎಎಲ್​ನಲ್ಲಿ ಹೆಚ್ಚಿನ ಷೇರು ಖರೀದಿಸಿದೆ. ಬಿಐಎಎಲ್​ನಲ್ಲಿ ಫೇರ್​ಫ್ಯಾಕ್ಸ್ ಷೇರು ಪ್ರಮಾಣ ಶೇ. 64ಕ್ಕೆ ಏರಿದೆ. ಬೆಂಗಳೂರು ಏರ್​ಪೋರ್ಟ್​ನ ಯಶಸ್ಸನ್ನು ಮುಂದಿಟ್ಟುಕೊಂಡು ಭಾರತದಲ್ಲಿ ಇನ್ನಷ್ಟು ಏರ್​ಪೋರ್ಟ್​ಗಳಿಗೆ ಬಿಡ್ ಸಲ್ಲಿಸಲು ಫೇರ್​ಫ್ಯಾಕ್ಸ್ ಆಲೋಚಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು