Byjus Valuation: ಬೈಜುಸ್​ಗೆ ಬ್ಲ್ಯಾಕ್​ರಾಕ್ ಹೊಡೆತ; ಶೇ. 95ರಷ್ಟು ಮೌಲ್ಯ ಕುಸಿತ; 22ರಿಂದ 1ಕ್ಕೆ ಕುಸಿದ ಬೈಜೂಸ್

Blackrock Cuts Byju's Valuation: ಸಾಕಷ್ಟು ವಿವಾದ, ಕಾನೂನು ಸಮಸ್ಯೆಗಳನ್ನು ಎದುರಿಸುತ್ತಿರುವ ಬೈಜುಸ್ ಸಂಸ್ಥೆಯ ಮೌಲ್ಯವನ್ನು ಗಣನೀಯವಾಗಿ ತಗ್ಗಿಸಲಾಗಿದೆ. ಬೈಜುಸ್​ನಲ್ಲಿ ಹೂಡಿಕೆ ಮಾಡಿರುವ ಬ್ಲ್ಯಾಕ್​ರಾಕ್ ಇದೀಗ ಬೈಜುಸ್​ನ ಮೌಲ್ಯ ಪರಿಷ್ಕರಿಸಿದೆ. 2022ರಲ್ಲಿ 22 ಬಿಲಿಯನ್ ಡಾಲರ್ ಇದ್ದ ಬೈಜುಸ್ ಮೌಲ್ಯವನ್ನು 1 ಬಿಲಿಯನ್ ಡಾಲರ್​ಗೆ ಇಳಿಸಲಾಗಿದೆ.

Byjus Valuation: ಬೈಜುಸ್​ಗೆ ಬ್ಲ್ಯಾಕ್​ರಾಕ್ ಹೊಡೆತ; ಶೇ. 95ರಷ್ಟು ಮೌಲ್ಯ ಕುಸಿತ; 22ರಿಂದ 1ಕ್ಕೆ ಕುಸಿದ ಬೈಜೂಸ್
ಬೈಜುಸ್
Follow us
|

Updated on: Jan 12, 2024 | 5:51 PM

ನವದೆಹಲಿ, ಜನವರಿ 11: ಒಂದು ಕಾಲದಲ್ಲಿ ಸ್ಟಾರ್ಟಪ್ ಲೋಕದ ಲಿವಿಂಗ್ ಲೆಜೆಂಡ್ ಎನಿಸಿದ್ದ, ಹಾಗೂ ಸ್ಟಾರ್ಟಪ್ ಎಂದರೆ ಹೀಗಿರಬೇಕಪ್ಪ ಎಂದು ಎಲ್ಲರೂ ಬೊಟ್ಟು ಮಾಡುತ್ತಿದ್ದ ಬೈಜುಸ್ ಸಂಸ್ಥೆ (Byju’s) ಈಗ ಬಹಳ ದುರ್ಗತಿಗೆ ಬಂದಿದೆ. ಸಾಲು ಸಾಲು ವಿವಾದಗಳು, ಕಾನೂನು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿರುವ ಬೈಜುಸ್​ನ ಮೌಲ್ಯ ಈಗ ಗಣನೀಯವಾಗಿ ಕುಸಿತ ಕಂಡಿದೆ. 2022ರಲ್ಲಿ ಅದರ ಮೌಲ್ಯ 22 ಬಿಲಿಯನ್ ಡಾಲರ್ ಇತ್ತು. ಅದು ಬೈಜೂಸ್ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದ ಸಂದರ್ಭ. ಆದರೆ, ಒಂದೇ ವರ್ಷದಲ್ಲಿ ಅದರ ಹಣೆಬರಹ ತಿರುವು ಮುರುವಾಗಿ ಹೋಗಿದೆ. ಬೈಜುಸ್​ನಲ್ಲಿ ಹೂಡಿಕೆ ಮಾಡಿರುವ ಬ್ಲ್ಯಾಕ್​ರಾಕ್ ಎಂಬ ಅಸೆಟ್ ಮ್ಯಾನೇಜಿಂಗ್ ಸಂಸ್ಥೆ ಬೈಜುಸ್​ನ ಮೌಲ್ಯಮಾಪನ ಮಾಡಿದ್ದು, ಒಂದು ಷೇರಿಗೆ 209.6 ರೂ ಮೌಲ್ಯ ಮಾತ್ರ ನೀಡಿದೆ. ಇದರೊಂದಿಗೆ ಬೈಜುಸ್​ನ ಒಟ್ಟಾರೆ ಮೌಲ್ಯ 1 ಬಿಲಿಯನ್ ಡಾಲರ್ ಎಂದು ಪರಿಗಣಿತವಾಗುತ್ತದೆ.

2022ರಲ್ಲಿ 22 ಬಿಲಿಯನ್ ಡಾಲರ್ ಮೌಲ್ಯದ ಕಂಪನಿ ಎಂದು ರೇಟಿಂಗ್ ಪಡೆದಿದ್ದ ಬೈಜುಸ್ ಈಗ 1 ಬಿಲಿಯನ್ ಡಾಲರ್​ಗೆ ಇಳಿದಿದೆ. ಶೇ. 95ಕ್ಕೂ ಹೆಚ್ಚು ಮೌಲ್ಯ ಕುಸಿತ ಆಗಿದೆ.

ಆದರೆ, ಬ್ಲ್ಯಾಕ್​ರಾಕ್ ಸಂಸ್ಥೆ ಬೈಜುಸ್​ನ ರೇಟಿಂಗ್ ಅಥವಾ ಮೌಲ್ಯ ಇಳಿಸಲು ಯಾವ ಮಾನದಂಡ ಅನುಸರಿಸಿದೆ ಎಂಬುದು ಗೊತ್ತಿಲ್ಲ. ಬೈಜುಸ್ ಇನ್ನೂ ಲಿಸ್ಟೆಡ್ ಕಂಪನಿಯಾಗಿಲ್ಲ. ಷೇರು ಮಾರುಕಟ್ಟೆಯಲ್ಲಿ ಇನ್ನೂ ಲಿಸ್ಟ್ ಆಗಿಲ್ಲ.

ಇದನ್ನೂ ಓದಿ: World’s Most Valuable Company: ವಿಶ್ವದ ಅತಿಹೆಚ್ಚು ಮೌಲ್ಯದ ಕಂಪನಿ; ಕ್ಷಣಿಕವಾದರೂ ಆ್ಯಪಲ್ ಅನ್ನು ಮತ್ತೆ ಹಿಂದಿಕ್ಕಿದ ಮೈಕ್ರೋಸಾಫ್ಟ್

ಬ್ಲ್ಯಾಕ್​ರಾಕ್ ಸಂಸ್ಥೆ ಬೈಜುಸ್​ನಲ್ಲಿ ಹೊಂದಿರುವ ಪಾಲು ಶೇ. 1ಕ್ಕಿಂತಲೂ ಕಡಿಮೆ. ಹೂಡಿಕೆ ಸಂಸ್ಥೆಗಳು ತನ್ನ ಪಾಲಿನ ಆಸ್ತಿಯ ಮೌಲ್ಯವನ್ನು ಆಗಾಗ ಪರಿಶೀಲನೆ ಮಾಡುತ್ತಿರುತ್ತವೆ. 2022ರಲ್ಲಿ ಬೈಜುಸ್​ನ ಒಂದು ಷೇರಿಗೆ 4,660 ರೂ ಬೆಲೆ ಇರಬಹುದು ಎಂದು ಅಂದಾಜಿಸಲಾಗಿತ್ತು. 2023ರ ಅಕ್ಟೋಬರ್​ನಲ್ಲಿ ಅದರ ಮೌಲ್ಯವನ್ನು 209.6 ರುಪಾಯಿಗೆ ಇಳಿಸಲಾಯಿತು. ಇದರಿಂದ ಬೈಜುಸ್​ನ ಒಟ್ಟಾರೆ ಮೌಲ್ಯ 1 ಬಿಲಿಯನ್ ಡಾಲರ್ ಆಗುತ್ತದೆ.

2023ರ ಮೇ ತಿಂಗಳಲ್ಲಿ ಬ್ಲ್ಯಾಕ್​ರಾಕ್ ಮಾಡಿದ ಮೌಲ್ಯಮಾಪನದ ಪ್ರಕಾರ ಬೈಜುಸ್ ಮೌಲ್ಯ 8.4 ಬಿಲಿಯನ್ ಡಾಲರ್ ಇತ್ತು. ಕೆಲವೇ ತಿಂಗಳಲ್ಲಿ ಅದರ ಮೌಲ್ಯವನ್ನು 1 ಬಿಲಿಯನ್ ಡಾಲರ್​ಗೆ ಇಳಿಸಿದೆ.

ಇದನ್ನೂ ಓದಿ: ಶತ್ರು ಆಸ್ತಿ, 2.91 ಲಕ್ಷ ಷೇರುಗಳನ್ನು ಮಾರಲು ಮುಂದಾದ ಭಾರತ ಸರ್ಕಾರ; ಎನಿಮಿ ಪ್ರಾಪರ್ಟಿಗಳೆಂದರೆ ಯಾವುವು?

ಬ್ಲ್ಯಾಕ್​ರಾಕ್ ಮಾತ್ರವಲ್ಲ, ಮತ್ತೊಂದು ಹೂಡಿಕೆ ಸಂಸ್ಥೆಯಾದ ಪ್ರೋಸಸ್ ಎನ್​ವಿ ಕೂಡ ಬೈಜುಸ್ ಮೌಲ್ಯವನ್ನು ತಗ್ಗಿಸಿದೆ. ಪ್ರೋಸಸ್ ಮಾಡಿದ ವ್ಯಾಲ್ಯುವೇಶನ್ ಪ್ರಕಾರ ಬೈಜುಸ್​ನ ಮೌಲ್ಯ 3 ಬಿಲಿಯನ್ ಡಾಲರ್​ಗಿಂತಲೂ ಕಡಿಮೆ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ