AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಟ್ಟಿದ ಕೆಲವೇ ದಿನಗಳಲ್ಲಿ ಷೇರು ಮಾರುಕಟ್ಟೆಗೆ ಎಂಟ್ರಿ: 28 ದಿನದ ಕಂದಮ್ಮನ ಹೆಸರಲ್ಲಿ ಜೆರೋಧಾ ಖಾತೆ

ಜೆರೋಧಾದಲ್ಲಿ ಕೇವಲ 28 ದಿನದ ಮಗುವಿನ ಹೆಸರಿನಲ್ಲಿ ಡಿಮ್ಯಾಟ್ ಖಾತೆ ತೆರೆದು ಹೊಸ ದಾಖಲೆ ನಿರ್ಮಿಸಲಾಗಿದೆ. ಇದು ಭಾರತೀಯ ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಚಿಕ್ಕ ವಯಸ್ಸಿನಲ್ಲೇ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿರುವುದನ್ನು ಸೂಚಿಸುತ್ತದೆ. ಆರ್ಥಿಕ ಸಾಕ್ಷರತೆ ಮತ್ತು ಸ್ವಾವಲಂಬನೆಗೆ ಇದು ಮೊದಲ ಹೆಜ್ಜೆಯಾಗಿದೆ. ಜೆರೋಧಾ ಮೈನರ್ ಖಾತೆಗಳು 18 ವರ್ಷಕ್ಕೆ ಸಾಮಾನ್ಯ ಖಾತೆಯಾಗಿ ಪರಿವರ್ತನೆಯಾಗಿ, ಭವಿಷ್ಯಕ್ಕೆ ಭದ್ರತೆ ನೀಡುತ್ತವೆ.

ಹುಟ್ಟಿದ ಕೆಲವೇ ದಿನಗಳಲ್ಲಿ ಷೇರು ಮಾರುಕಟ್ಟೆಗೆ ಎಂಟ್ರಿ: 28 ದಿನದ ಕಂದಮ್ಮನ ಹೆಸರಲ್ಲಿ ಜೆರೋಧಾ ಖಾತೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Oct 09, 2026 | 9:29 AM

Share

ಷೇರು ಮಾರುಕಟ್ಟೆ ಹಾಗೂ ಹೂಡಿಕೆ ಕ್ಷೇತ್ರದಲ್ಲಿ ಭಾರತದಲ್ಲಿ ಹೊಸದೊಂದು ಕ್ರಾಂತಿ ಆರಂಭವಾಗಿದೆ. ಹುಟ್ಟಿದ ಕೇವಲ 28 ದಿನಗಳಾಗಿರುವ ಪುಟ್ಟ ಕಂದಮ್ಮನ ಹೆಸರಿನಲ್ಲಿ ಡಿಮ್ಯಾಟ್ ಖಾತೆ ತೆರೆಯುವ ಮೂಲಕ ಜೆರೋಧಾ ಸಂಸ್ಥೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಈ ಕುರಿತು ಜೆರೋಧಾ ಸಹ-ಸಂಸ್ಥಾಪಕ ನಿತಿನ್ ಕಾಮತ್ ಅವರು ಸೋಶಿಯಲ್ ಮೀಡಿಯಾ ಎಕ್ಸ್​​​​​ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ, ಅಕೌಂಟ್ ತೆರೆದ ಕೇವಲ ಒಂದೇ ವಾರದಲ್ಲಿ ಪೋಷಕರು ಆ ಮಗುವಿನ ಹೆಸರಿನಲ್ಲಿ ಮೊದಲ ಹೂಡಿಕೆಯನ್ನು ಸಹ ಪೂರ್ಣಗೊಳಿಸಿದ್ದಾರೆ.

ಸರಿಯಾಗಿ ಒಂದು ವರ್ಷದ ಹಿಂದೆ, ಅಂದರೆ 2025 ರಲ್ಲಿ ನಿತಿನ್ ಕಾಮತ್ ಅವರು ಜೆರೋಧಾದಲ್ಲಿ 64 ದಿನಗಳ ಮಗುವಿನ ಹೆಸರಿನಲ್ಲಿ ಅಕೌಂಟ್ ತೆರೆಯಲಾಗಿತ್ತು ಎಂದು ಟ್ವೀಟ್ ಮಾಡಿದ್ದರು. ಆದರೆ ಈ ಬಾರಿ ಕೇವಲ ಒಂದೇ ವರ್ಷದಲ್ಲಿ ಆ ವಯಸ್ಸಿನ ಮಿತಿ ಅರ್ಧಕ್ಕಿಂತಲೂ ಕಡಿಮೆಯಾಗಿದ್ದು, 28 ದಿನಗಳ ಮಗುವಿನ ಹೆಸರಿನಲ್ಲೇ ಖಾತೆ ತೆರೆಯಲಾಗಿದೆ.

ಮಕ್ಕಳು ಹುಟ್ಟಿದ ವರ್ಷಗಳ ನಂತರ ಅವರ ಭವಿಷ್ಯಕ್ಕಾಗಿ ಉಳಿತಾಯ ಯೋಜಿಸುವ ಬದಲು, ಹುಟ್ಟಿದ ಕೆಲವೇ ದಿನಗಳಲ್ಲಿ ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಭಾರತೀಯ ಪೋಷಕರು ಹೆಚ್ಚು ಆಸಕ್ತಿ ತೋರುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.

ಇಲ್ಲಿದೆ ನೋಡಿ ಎಕ್ಸ್​ ಪೋಸ್ಟ್​:

ಜೆರೋಧಾ ಮೈನರ್ ಅಕೌಂಟ್ ಹೇಗೆ ಕೆಲಸ ಮಾಡುತ್ತದೆ?

1.18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಪೋಷಕರು ಅಥವಾ ಕಾನೂನುಬದ್ಧ ಪೋಷಕರು ಈ ಅಕೌಂಟ್ ತೆರೆಯಬಹುದು.

2.ಮಗುವಿನ ಹೆಸರಿನಲ್ಲಿ ಷೇರುಗಳು , ಮ್ಯೂಚುವಲ್ ಫಂಡ್‌ಗಳು ಹಾಗೂ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಅವಕಾಶವಿರುತ್ತದೆ.

3. ಜೆರೋಧಾದ ‘ಕೈಟ್’ ಆಪ್ ಮೂಲಕ ಈ ಖಾತೆ ತೆರೆಯಬಹುದು. ಇದಕ್ಕೆ ಯಾವುದೇ ಖಾತೆ ತೆರೆಯುವ ಶುಲ್ಕ ಅಥವಾ ವಾರ್ಷಿಕ ನಿರ್ವಹಣಾ ಶುಲ್ಕ ಇರುವುದಿಲ್ಲ.

4. ಮಗುವಿಗೆ 18 ವರ್ಷ ವಯಸ್ಸಾದ ತಕ್ಷಣ, ಈ ಮೈನರ್ ಅಕೌಂಟ್ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸಾಮಾನ್ಯ ವ್ಯಕ್ತಿಗತ ಖಾತೆಯಾಗಿ ಪರಿವರ್ತನೆಯಾಗುತ್ತದೆ.

ಇದನ್ನೂ ಓದಿ: ಏರ್‌ಹೋಸ್ಟೆಸ್ ತರಬೇತಿ ಬಿಟ್ಟು ಟ್ರಕ್ ಚಾಲಕಿಯಾದ ಹಿಮಾಚಲದ ಯುವತಿ: ದೇಶದ ಮೊದಲ ಮಹಿಳಾ ಟ್ರಕ್ ಡ್ರೈವರ್ ನೇಹಾ ಠಾಕೂರ್

ಮಕ್ಕಳಿಗೆ ಆರ್ಥಿಕ ಸಾಕ್ಷರತೆ ನೀಡುವ ಪೋಷಕರ ಉದ್ದೇಶ:

ಕಳೆದ ವರ್ಷ 64 ದಿನದ ಮಗುವಿನ ಅಕೌಂಟ್ ಕುರಿತು ವಿಡಿಯೋ ಹಂಚಿಕೊಂಡಿದ್ದ ನಿತಿನ್ ಕಾಮತ್, ಪೋಷಕರ ಆಲೋಚನಾ ಶೈಲಿ ಬಗ್ಗೆ ವಿವರಿಸಿದ್ದರು. “ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಹಣಕಾಸಿನ ನಿರ್ವಹಣೆ ಮತ್ತು ಆರ್ಥಿಕ ಸಾಕ್ಷರತೆ ಬಗ್ಗೆ ಹೇಳಿಕೊಡಲಾಗುವುದಿಲ್ಲ. ಹಾಗಾಗಿ ಮಗುವಿನ ಬಾಲ್ಯದಿಂದಲೇ ಹೂಡಿಕೆ ಆರಂಭಿಸಿದರೆ, ಬೆಳೆಯುತ್ತಾ ಅವರಿಗೆ ಆರ್ಥಿಕ ಸ್ವಾವಲಂಬನೆ ಅರ್ಥವಾಗುತ್ತದೆ” ಎಂಬುದು ಪೋಷಕರ ಅಭಿಪ್ರಾಯವಾಗಿತ್ತು. ಪ್ರಸ್ತುತ 28 ದಿನದ ಮಗುವಿಗೆ ಖಾತೆ ತೆರೆದಿರುವುದು ಈ ಟ್ರೆಂಡ್ ಮತ್ತಷ್ಟು ಗಟ್ಟಿಯಾಗುತ್ತಿರುವುದನ್ನು ತೋರಿಸುತ್ತದೆ.

ವಾಣಿಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:23 am, Fri, 9 October 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More