ಡೆಹ್ರಾಡೂನ್: ಉತ್ತರಾಖಂಡ್ನ ಚಮೋಲಿ ಜಿಲ್ಲೆ ಜೋಶಿಮಠದ ಬಳಿ ವಾಹನವೊಂದು ಪ್ರಪಾತಕ್ಕೆ ಉರುಳಿ ಬಿದ್ದಿದ್ದು, ಇಬ್ಬರು ಮಹಿಳೆಯರು ಸೇರಿದಂತೆ 12 ಜನರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉರ್ಗಾಂ-ಪಲ್ಲಾ ಜಖೋಲಾ ಮಾರ್ಗ ಮಧ್ಯೆ 500-700 ಮೀಟರ್ ಆಳದ ಕಮರಿಗೆ ಉರುಳಿ ಬಿದ್ದಿದೆ. ಆದ್ರೆ, ಪ್ರಪಾತಕ್ಕೆ ಬಿದ್ದಿರುವ ವಾಹನ ಯಾವುದು ಎಂದು ತಿಳಿದುಬಂದಿಲ್ಲ. ಸ್ಥಳಕ್ಕೆ SDRF ಆಗಮಿಸಿ ರಕ್ಷಣಾ ಕಾರ್ಯ ನಡೆಸಿ ಇಬ್ಬರು ಮಹಿಳೆಯರು ಹಾಗೂ 10 ಪುರಷರ ಮೃತದೇಹಗಳನ್ನು ಹೊರತೆಗೆದಿದ್ದಾರೆ.
Uttarakhand CM PS Dhami has condoled vehicle accident in Chamoli. He spoke to DM Chamoli on phone & instructed him to conduct relief & rescue work at a fast pace. DM Himanshu Khurana, SP Pramendra Dobal along with SDRF, NDRF, police & administration teams engaged in rescue: CMO https://t.co/iytYIhCEkT
— ANI UP/Uttarakhand (@ANINewsUP) November 18, 2022
ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.