ದೆಹಲಿ: 16ರ ಹರೆಯದ ಬಾಲಕಿಯನ್ನು ಇರಿದು ಕೊಂದು ಬಂಡೆ ಕಲ್ಲು ಎತ್ತಿಹಾಕಿದ ಯುವಕ; ಬರ್ಬರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ನೀಲಿ ಟೀ ಶರ್ಟ್ ಮತ್ತು ಕಪ್ಪು ಟ್ರ್ಯಾಕ್ ಪ್ಯಾಂಟ್ ಧರಿಸಿದ್ದ ಸಾಹಿಲ್, ನೆಲಕ್ಕೆ ಬಿದ್ದ ಹುಡುಗಿ ಮೇಲೆ ಅತಿ ಕ್ರೂರ ರೀತಿಯಲ್ಲಿ ಇರಿಯುತ್ತಿರುವುದನ್ನು ತೋರಿಸುತ್ತದೆ. ಅಷ್ಟಕ್ಕೆ ತೃಪ್ತನಾಗದ ಆತ ಆಕೆ ಮೇಲೆ ಬಂಡೆ ಕಲ್ಲು ಎತ್ತಿಹಾಕಿದ್ದಾನೆ

ದೆಹಲಿ: 16ರ ಹರೆಯದ ಬಾಲಕಿಯನ್ನು ಇರಿದು ಕೊಂದು ಬಂಡೆ ಕಲ್ಲು ಎತ್ತಿಹಾಕಿದ ಯುವಕ; ಬರ್ಬರ ಕೃತ್ಯ ಸಿಸಿಟಿವಿಯಲ್ಲಿ ಸೆರೆ
ದೆಹಲಿಯಲ್ಲಿ ಕೊಲೆ ಪ್ರಕರಣ

Updated on: May 29, 2023 | 2:15 PM

ದೆಹಲಿ: ದೆಹಲಿ (Delhi) 16 ವರ್ಷದ ಬಾಲಕಿಯೊಬ್ಬಳನ್ನು ನಿರ್ದಯವಾಗಿ ಇರಿದು ಕೊಲೆಗೈದಿರುವ (Delhi Murder) ಘಟನೆ ವರದಿ ಆಗಿದೆ. ಶಹಬಾದ್ ಡೇರಿ ಪ್ರದೇಶದ ರಸ್ತೆಯೊಂದರಲ್ಲಿ ಬಿದ್ದಿದ್ದ ಬಾಲಕಿಯ ಮೃತದೇಹದ ಮೇಲೆ ಯುವಕನೊಬ್ಬ ಬಂಡೆ ಕಲ್ಲು ಎತ್ತಿ ಹಾಕಿದ್ದಾನೆ. ಈ ಭೀಕರ ಕೃತ್ಯವನ್ನು ರಸ್ತೆ ದಾಟುತ್ತಿದ್ದ ಜನರು ನೋಡಿದ್ದರೂ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ಆರೋಪಿಯನ್ನು ಸಾಹಿಲ್ ಎಂದು ಗುರುತಿಸಲಾಗಿದ್ದು, ಬಾಲಕಿಯೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ 8.45 ರ ಸುಮಾರಿಗೆ ತನ್ನ ಸ್ನೇಹಿತನನ್ನು ಭೇಟಿ ಮಾಡಲು ಹೋಗುತ್ತಿದ್ದಾಗ ಇಬ್ಬರ ನಡುವೆ ಜಗಳ ನಡೆದಿದ್ದು, ರಸ್ತೆಯಲ್ಲಿ ಯುವತಿ ಮೇಲೆ ಹಲ್ಲೆ ಮಾಡಿದ್ದಾನೆ

ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ನೀಲಿ ಟೀ ಶರ್ಟ್ ಮತ್ತು ಕಪ್ಪು ಟ್ರ್ಯಾಕ್ ಪ್ಯಾಂಟ್ ಧರಿಸಿದ್ದ ಸಾಹಿಲ್, ನೆಲಕ್ಕೆ ಬಿದ್ದ ಹುಡುಗಿ ಮೇಲೆ ಅತಿ ಕ್ರೂರ ರೀತಿಯಲ್ಲಿ ಇರಿಯುತ್ತಿರುವುದನ್ನು ತೋರಿಸುತ್ತದೆ. ಅಷ್ಟಕ್ಕೆ ತೃಪ್ತನಾಗದ ಆತ ಆಕೆ ಮೇಲೆ ಬಂಡೆ ಕಲ್ಲು ಎತ್ತಿಹಾಕಿದ್ದಾನೆ. ಆಮೇಲೆ ಸ್ಥಳದಿಂದ ದೂರ ಹೋಗಿ ಮತ್ತೆ ವಾಪಸ್ ಬಂದು ಕಲ್ಲು ಎತ್ತಿ ಹಾಕುತ್ತಿರುವುದು ವಿಡಿಯೊದಲ್ಲಿದೆ,


ಈ ಭಯಾನಕ ಕೃತ್ಯವನ್ನು ಹಲವಾರು ಜನರು ನೋಡಿದ್ದರೂ ಯಾರೊಬ್ಬರೂ ಮಧ್ಯಪ್ರವೇಶಿಸಲಿಲ್ಲ. ಕೆಲವೇ ನಿಮಿಷಗಳಲ್ಲಿ ಹುಡುಗ ಹೊರಟುಹೋದ ನಂತರ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Gangster Death: ಕೆನಡಾದಲ್ಲಿ ಪಂಜಾಬ್ ಮೂಲದ ಗ್ಯಾಂಗ್​ಸ್ಟರ್​ನನ್ನು ಗುಂಡಿಕ್ಕಿ ಹತ್ಯೆ

ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಶಹಬಾದ್ ಡೈಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸಾಹಿಲ್ ನಿನ್ನೆಯಿಂದ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು  ಕ್ರೈಂ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:14 pm, Mon, 29 May 23