ಅಫ್ಘಾನ್​ದಿಂದ ಪೈಪ್​ಗಳಲ್ಲಿ ತಂದಿದ್ದ 1000 ಕೋಟಿ ರೂ. ಡ್ರಗ್ಸ್ ವಶ, ಎಲ್ಲಿ?

ಮುಂಬೈ: ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 1,000 ಕೋಟಿ ರೂ ಬೆಲೆಬಾಳುವ 191 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ನವೀ ಮುಂಬಯಿಯ ನವ ಶೇವಾ ಬಂದರಿನಲ್ಲಿ ಕಸ್ಟಮ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಪೈಪ್ ಒಳಗೆ ಇಟ್ಟು ಸಾಗಿಸಲಾಗುತ್ತಿದ್ದ 191 ಕೆಜಿಯ, 1,000 ಕೋಟಿ ಮೌಲ್ಯದ ಡ್ರಗ್ಸ್​ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಮಾದಕ ವಸ್ತುವನ್ನು ಅಫ್ಘಾನಿಸ್ತಾನದಿಂದ ತರಲಾಗಿದೆ ಎಂದು ತಿಳಿದುಬಂದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಲಾಗಿದೆ. ವಿಚಾರಣೆ ನಡೆಸಿದ […]

ಅಫ್ಘಾನ್​ದಿಂದ ಪೈಪ್​ಗಳಲ್ಲಿ ತಂದಿದ್ದ 1000 ಕೋಟಿ ರೂ. ಡ್ರಗ್ಸ್ ವಶ, ಎಲ್ಲಿ?

Updated on: Aug 10, 2020 | 12:27 PM

ಮುಂಬೈ: ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 1,000 ಕೋಟಿ ರೂ ಬೆಲೆಬಾಳುವ 191 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ನವೀ ಮುಂಬಯಿಯ ನವ ಶೇವಾ ಬಂದರಿನಲ್ಲಿ ಕಸ್ಟಮ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಪೈಪ್ ಒಳಗೆ ಇಟ್ಟು ಸಾಗಿಸಲಾಗುತ್ತಿದ್ದ 191 ಕೆಜಿಯ, 1,000 ಕೋಟಿ ಮೌಲ್ಯದ ಡ್ರಗ್ಸ್​ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಮಾದಕ ವಸ್ತುವನ್ನು ಅಫ್ಘಾನಿಸ್ತಾನದಿಂದ ತರಲಾಗಿದೆ ಎಂದು ತಿಳಿದುಬಂದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಲಾಗಿದೆ. ವಿಚಾರಣೆ ನಡೆಸಿದ ಕೋರ್ಟ್ ಇಬ್ಬರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ.