AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೂ ಉದ್ಯಮಿ ಕೊಲೆ ಪ್ರಕರಣ: ಮಗನಿಂದಲೇ ಅಪ್ಪನ ಕಿಡ್ನಾಪ್​ & ಮರ್ಡರ್​

ಬೆಂಗಳೂರು: ರಾಮಮೂರ್ತಿ ನಗರದ ರಿಯಲ್ ಎಸ್ಟೇಟ್ ಉದ್ಯಮಿ ಪನ್ನೀರ್ ಸೆಲ್ವಂ ಹತ್ಯೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್​ ಸಿಕ್ಕಿದೆ. ಉದ್ಯಮಿಯ ಮಗನೇ ತನ್ನ ತಂದೆಯನ್ನ ಕಿಡ್ನಾಪ್ ಮಾಡಿ ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ. ಬೆಳಗ್ಗೆ 6 ಗಂಟೆಗೆ ದೇವಸ್ಥಾನಕ್ಕೆ ಅಂತಾ ಮನೆಯಿಂದ ಹೋದ ಪನ್ನೀರ್ ಸೆಲ್ವಂ ಮತ್ತೆ ಮನೆಗೆ ಬಂದಿರಲಿಲ್ಲ. ನಂತರ ಬೆಳಗ್ಗೆ 11 ಗಂಟೆಗೆ  ಉದ್ಯಮಿ ಕಾಣುತ್ತಿಲ್ಲ ಎಂದು ಯಾರೊ ಕಿಡ್ನಾಪ್ ಮಾಡಿದ್ದಾರೆ ಅಂತಾ ಪೊಲೀಸರ ಬಳಿ ದೂರು ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ನಾಲ್ಕು ವಿಷೇಶ ತಂಡಗಳನ್ನ […]

ಭೂ ಉದ್ಯಮಿ ಕೊಲೆ ಪ್ರಕರಣ: ಮಗನಿಂದಲೇ ಅಪ್ಪನ ಕಿಡ್ನಾಪ್​ & ಮರ್ಡರ್​
KUSHAL V
|

Updated on:Aug 09, 2020 | 1:36 PM

Share

ಬೆಂಗಳೂರು: ರಾಮಮೂರ್ತಿ ನಗರದ ರಿಯಲ್ ಎಸ್ಟೇಟ್ ಉದ್ಯಮಿ ಪನ್ನೀರ್ ಸೆಲ್ವಂ ಹತ್ಯೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್​ ಸಿಕ್ಕಿದೆ. ಉದ್ಯಮಿಯ ಮಗನೇ ತನ್ನ ತಂದೆಯನ್ನ ಕಿಡ್ನಾಪ್ ಮಾಡಿ ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ.

ಬೆಳಗ್ಗೆ 6 ಗಂಟೆಗೆ ದೇವಸ್ಥಾನಕ್ಕೆ ಅಂತಾ ಮನೆಯಿಂದ ಹೋದ ಪನ್ನೀರ್ ಸೆಲ್ವಂ ಮತ್ತೆ ಮನೆಗೆ ಬಂದಿರಲಿಲ್ಲ. ನಂತರ ಬೆಳಗ್ಗೆ 11 ಗಂಟೆಗೆ  ಉದ್ಯಮಿ ಕಾಣುತ್ತಿಲ್ಲ ಎಂದು ಯಾರೊ ಕಿಡ್ನಾಪ್ ಮಾಡಿದ್ದಾರೆ ಅಂತಾ ಪೊಲೀಸರ ಬಳಿ ದೂರು ದಾಖಲಾಗಿತ್ತು.

ತನಿಖೆ ಕೈಗೆತ್ತಿಕೊಂಡ ಪೊಲೀಸರು ನಾಲ್ಕು ವಿಷೇಶ ತಂಡಗಳನ್ನ ರಚಿಸಿ ಕಾರ್ಯಾಚರಣೆಗೆ ಮುಂದಾದರು. ತನಿಖೆ ವೇಳೆ ಉದ್ಯಮಿಯ ಮಗ ರಾಜೇಶ್ ತಾನೇ ಗ್ಯಾಂಗ್ ಕಟ್ಟಿಕೊಂಡು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಹೆತ್ತ ತಂದೆಯನ್ನೇ ಹತ್ಯೆ ಮಾಡಲು ಕಾರಣವೇನು? ಅಸಲಿಗೆ, ರಾಜೇಶ್​ಗೂ ಆತನ ತಂದೆ ಪನ್ನೀರ್ ಸೆಲ್ವಂಗೂ ಎಣ್ಣೆ ಸೀಗೆಕಾಯಿ. ಮಗನಿಗೆ ಸ್ವಂತವಾಗಿ ವ್ಯವಹಾರ ಮಾಡಲು ತಂದೆ ಬಿಡುತ್ತಿರಲಿಲ್ಲವಂತೆ. ಜೊತೆಗೆ, ಅಪ್ಪನಿಗಿದ್ದ ಅಕ್ರಮ ಸಂಬಂಧದಿಂದ ಮಗ ಬೇಸತ್ತಿದ್ದ. ಹಾಗಾಗಿ, ತಂದೆಯನ್ನ ಕೊಲೆಮಾಡಿದರೆ ದಾರಿ ಸಲೀಸಾಗುವುದು ಎಂದು ಮೂರು ತಿಂಗಳಿಂದ ಹೊಂಚು ಹಾಕಿ ಕಾಯುತ್ತಿದ್ದ.

ಈ ಬಾರಿ ವಿಷದ ಇಂಜೆಕ್ಷನ್ ನೀಡಲು ಮುಂದಾದ. ನಿನ್ನೆ ಬೆಳಗ್ಗೆ ದೇವಾಲಕ್ಕೆ ಹೋಗುವಾಗ ಕಿಡ್ನಾಪ್ ಮಾಡಿ ಕಾರಿನಲ್ಲೇ ವಿಷದ ಇಂಜೆಕ್ಷನ್ ನೀಡಿ ಸಾಯಿಸಿದ್ದರು. ಬಳಿಕ ದೇವನಹಳ್ಳಿ ರಸ್ತೆ ಮೂಲಕ ಕೋಲಾರದ ವೇಮಗಲ್​ನ ನೀಲಗಿರಿ ತೋಪಿನಲ್ಲಿ ಶವವನ್ನ ಬಿಸಾಡಿದ್ದರು.

ಇದನ್ನೂ ಓದಿ: ಕಾಣೆಯಾಗಿದ್ದ ಬೆಂಗಳೂರು ಭೂ ಉದ್ಯಮಿ ನೀಲಗಿರಿ ತೋಪಿನಲ್ಲಿ ಶವವಾಗಿ ಪತ್ತೆ

ಸದ್ಯ ಸೂಕ್ತ ಸಾಕ್ಷಿ ಆಧಾರದ ಮೇಲೆ ಅರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ. ರಾಜೇಶ್​, ಪಾರ್ತಿವನ್, ಸ್ಟಾನ್ಲಿ ಮತ್ತು ಆನಂದ್​ ಬಂಧಿತ ಆರೋಪಿಗಳು. ಜೊತೆಗೆ, ಕೃತ್ಯಕ್ಕೆ ಬಳಸಲಾಗಿದ್ದ ಕಾರು ಸಹ ವಶಪಡಿಸಿಕೊಳ್ಳಲಾಗಿದೆ. ರಾಜೇಶ್​ ತನ್ನ ಸ್ನೇಹಿತರಿಗೆ ಹತ್ತು ಲಕ್ಷಕ್ಕೆ ಸುಪಾರಿ ನೀಡಿದ್ದು ಮೂರು ಲಕ್ಷ ರೂಪಾಯಿ ಹಣ ಸಹ ಮುಂಗಡವಾಗಿ ಕೊಟ್ಟಿದನಂತೆ ಎಂಬ ಮಾಹಿತಿ ಸಹ ದೊರೆತಿದೆ.

Published On - 12:44 pm, Sun, 9 August 20