ಬೆಂಗಳೂರು: ಅನೈತಿಕ ಸಂಬಂಧಕ್ಕೆ ಮಹಿಳೆ ಬಲಿಯಾಗಿರುವ ಘಟನೆ ಬೆಂಗಳೂರಿನ(Bengaluru) ಬಸವೇಶ್ವರ ನಗರ ಠಾಣಾ ವ್ಯಾಪ್ತಿಯ ಜೆಸಿ ನಗರದಲ್ಲಿ ನಡೆದಿದೆ. ಸರಗುಣಂ (35) ಮೃತ ಮಹಿಳೆ. ಈಕೆ ಮನೆ ಕೆಲಸ ಮಾಡುತ್ತಿದ್ದು, ಆಟೋ ಚಾಲಕ(Auto Driver)ನಾಗಿದ್ದ ಗಣೇಶ್ ಎಂಬ 22ರ ಯುವಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಇದಲ್ಲದೆ 50 ಸಾವಿರ ಹಣವನ್ನ ಯುವಕನಿಗೆ ನೀಡಿ, ಬಾಡಿಗೆ ಮನೆ ಕೂಡ ಮಾಡಿಕೊಟ್ಟಿದ್ದಳು. ಈ ಮಧ್ಯೆ ಬೇರೆ ಮಹಿಳೆ ಜೊತೆ ಗಣೇಶ್ ಆತ್ಮೀಯ ಸಲುಗೆಯಿಂದ ಇರುವ ಮಾಹಿತಿ ತಿಳಿದು ನಿನ್ನೆ(ಏ.26) ಯುವಕನ ಮನೆಗೆ ಬಂದಿದ್ದಳು.
ಇನ್ನು ಈ ವೇಳೆ ನಾನೇ ಹಣಕೊಟ್ಟು, ಮನೆ ಮಾಡಿಕೊಟ್ಟು ನಿನ್ನ ನೋಡಿಕೊಳ್ಳುತ್ತಿದ್ದೇನೆ. ನನ್ನ ಹಣ ವಾಪಸ್ ಕೊಡು, ಮಹಿಳೆ ಯಾರೆಂದು ಹೇಳು ಎಂದು ಪ್ರಶ್ನೆ ಮಾಡಿದ್ದು, ಗಲಾಟೆ ಜೋರಾಗಿದೆ. ಈ ವೇಳೆ ಗಣೇಶ್ ನಾನು ಸಾಯುವುದಾಗಿ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆ ಅಡ್ಡ ಬಂದಿದ್ದು, ಯುವಕ ಕೆಳ ಇಳಿದಿದ್ದ. ಇದೇ ಸಮಯದಲ್ಲಿ ತಾನು ಸಾಯುತ್ತಿನಿ ಎಂದು ಮಹಿಳೆ ನೇಣಿನ ಕುಣಿಕೆ ಹಾಕೊಂಡಿದ್ದಾಳೆ. ಇದೇ ವೇಳೆ ಗಣೇಶ್ ಹಗ್ಗ ಎಳೆದು ಚೇರ್ ಒದ್ದಿದ್ದು, ಹಗ್ಗ ಕತ್ತಿಗೆ ಬಿಗಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಳು.
ಇದನ್ನೂ ಓದಿ:ಮದುವೆ ನಿಶ್ಚಯವಾಗಿದ್ದ ಯುವಕನ ಬರ್ಬರ ಹತ್ಯೆ, ಅನೈತಿಕ ಸಂಬಂಧದ ವಾಸನೆ, ಫೋನ್ ಬಂತು ಅಂತಾ ಮನೆಯಿಂದ ಹೊರಹೋಗಿದ್ದ!
ನಂತರ ಗಣೇಶ್ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಪೊಲೀಸರ ದಿಕ್ಕು ತಪ್ಪಿಸಲು ಆತ್ಮಹತ್ಯೆ ಯತ್ನ ಮಾಡಿದ್ದಾಳೆಂದು ಡ್ರಾಮಾ ಮಾಡಿದ್ದ. ಸದ್ಯ ಬಸವೇಶ್ವರ ನಗರ ಪೊಲೀಸರಿಂದ ಆರೋಪಿ ಗಣೇಶ್ನನ್ನ ಬಂಧಿಸಲಾಗಿದೆ. ಇನ್ನು ಆ ಮಹಿಳೆಗೆ ಮದುಯವೆಯಾಗಿ 17 ವರ್ಷದ ಮಗು ಕೂಡ ಇದೆ. ಆದರೂ ಕೂಡ ಗಣೇಶ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದು, ಇದೀಗ ಸಾವಿನ ಮನೆ ಸೆರಿದ್ದಾಳೆ. ಈ ಕುರಿತು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ