ಓಲಾಗೆ ಟೋಪಿ ಹಾಕಿ ಲಕ್ಷಾಂತರ ರೂ ಇನ್ಸೆಂಟೀವ್ ಪಡೆದಿದ್ದರು.. ಅವರಲ್ಲಿ ಒಬ್ಬನಿಗೆ ಕೊರೊನಾ!

|

Updated on: Jun 11, 2020 | 5:21 PM

ಬೆಂಗಳೂರು: ನಿಗದಿತ ಟ್ರಿಪ್​ಗಳನ್ನ ನಿರ್ವಹಿಸದೆ ಇರುವುದರ ಜೊತೆಗೆ 50ಕ್ಕೂ ಹೆಚ್ಚು ಟ್ರಿಪ್​ ಮಾಡಿರುವಂಥೆ ದಾಖಲೆಗಳನ್ನ ತೋರಿಸಿ ಇನ್ಸೆಂಟೀವ್ ಪಡೆಯುತ್ತಿದ್ದ ನಾಲ್ವರು ಚಾಲಕರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರನ್ನು ರವಿ, ಮನು‌, ಸತೀಶ್ ಮತ್ತು ನಾಗೇಶ್ ಎಂದು ಗುರುತಿಸಲಾಗಿದೆ. ಓಲಾ ಕಂಪನಿಯಲ್ಲಿ ಕ್ಯಾಬ್ ಚಾಲಕರಾಗಿ ಕೆಲಸ ಮಾತುತ್ತಿದ್ದ ಇವರು 50ಕ್ಕೂ ಹೆಚ್ಚು ಟ್ರಿಪ್ ಮಾಡಿದರೆ ಇನ್ಸೆಂಟೀವ್ ಸಿಗುತ್ತೆ ಎಂಬ ಕಂಪನಿ ನಿಯಮವನ್ನೇ ಬಂಡವಾಳ ಮಾಡಿಕೊಂಡು ಈ ಕೃತ್ಯ ಎಸಗಲು ಮುಂದಾದರು. ಟೋಪಿ ಹಾಕಿದ್ದು ಹೇಗೆ? ಬಂಧಿತ ನಾಲ್ವರು ಆರೋಪಿಗಳು […]

ಓಲಾಗೆ ಟೋಪಿ ಹಾಕಿ ಲಕ್ಷಾಂತರ ರೂ ಇನ್ಸೆಂಟೀವ್ ಪಡೆದಿದ್ದರು.. ಅವರಲ್ಲಿ ಒಬ್ಬನಿಗೆ  ಕೊರೊನಾ!
Follow us on

ಬೆಂಗಳೂರು: ನಿಗದಿತ ಟ್ರಿಪ್​ಗಳನ್ನ ನಿರ್ವಹಿಸದೆ ಇರುವುದರ ಜೊತೆಗೆ 50ಕ್ಕೂ ಹೆಚ್ಚು ಟ್ರಿಪ್​ ಮಾಡಿರುವಂಥೆ ದಾಖಲೆಗಳನ್ನ ತೋರಿಸಿ ಇನ್ಸೆಂಟೀವ್ ಪಡೆಯುತ್ತಿದ್ದ ನಾಲ್ವರು ಚಾಲಕರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರನ್ನು ರವಿ, ಮನು‌, ಸತೀಶ್ ಮತ್ತು ನಾಗೇಶ್ ಎಂದು ಗುರುತಿಸಲಾಗಿದೆ. ಓಲಾ ಕಂಪನಿಯಲ್ಲಿ ಕ್ಯಾಬ್ ಚಾಲಕರಾಗಿ ಕೆಲಸ ಮಾತುತ್ತಿದ್ದ ಇವರು 50ಕ್ಕೂ ಹೆಚ್ಚು ಟ್ರಿಪ್ ಮಾಡಿದರೆ ಇನ್ಸೆಂಟೀವ್ ಸಿಗುತ್ತೆ ಎಂಬ ಕಂಪನಿ ನಿಯಮವನ್ನೇ ಬಂಡವಾಳ ಮಾಡಿಕೊಂಡು ಈ ಕೃತ್ಯ ಎಸಗಲು ಮುಂದಾದರು.
ಟೋಪಿ ಹಾಕಿದ್ದು ಹೇಗೆ?
ಬಂಧಿತ ನಾಲ್ವರು ಆರೋಪಿಗಳು ಬೇರೆ ಬೇರೆ ಸಿಮ್​ಕಾರ್ಡ್​ಗಳನ್ನು ಬಳಸಿ ಅವರೇ ಟ್ರಿಪ್​ ಬುಕ್​ ಮಾಡುತ್ತಿದ್ದರು. ನಂತ್ರ Mock ಲೊಕೇಶನ್​ ಎಂಬ ಌಪ್​ ಒಂದನ್ನು ಬಳಸಿ ಗಾಡಿ ಟ್ರಿಪ್ ನಿರ್ವಹಿಸಿದೆ ಎಂದು ಕಿಲೋಮೀಟರ್​ಗಳನ್ನ ಸ್ಕಿಪ್ ಮಾಡುತ್ತಿದ್ದರು. ಇದರಿಂದ ಪ್ರತಿ ದಿನವೂ 50ಕ್ಕಿಂತ ಹೆಚ್ಚು ಟ್ರಿಪ್​ಗಳನ್ನು ಮಾಡಿರುವ ಹಾಗೆ ಬಿಂಬಿಸಿ ಕಂಪನಿಯಿಂದ ಈವರೆಗೆ ಲಕ್ಷಾಂತರ ರೂಪಾಯಿ ಇನ್ಸೆಂಟೀವ್ ಪಡೆದಿದ್ದರು. ಸದ್ಯ ನಾಲ್ವರನ್ನು ಬಂಧಿಸಿರುವ ಸಿಸಿಬಿ ಅಧಿಕಾರಿಗಳು ಇವರಿಂದ 500 ಸಿಮ್​​ಕಾರ್ಡ್ ಮತ್ತು 3 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಒರ್ವ ಅರೋಪಿಗೆ ಕೋವಿಡ್ ಸೋಂಕು ದೃಢ:
ನಾಲ್ಕು ಅರೋಪಿಗಳಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ಒರ್ವ ಅರೋಪಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಆರೋಪಿಗಳನ್ನು ಬಂಧಿಸಿ ತನಿಖೆ ಮಾಡಿದ್ದ ಇಬ್ಬರು ಇನ್​ಸ್ಪೆಕ್ಟರ್​ಗಳಿಗೆ ಮತ್ತು ಐದು ಪೊಲೀಸ್ ಸಿಬ್ಬಂದಿಗೆ ಕ್ವಾರಂಟೈನ್ ಮಾಡಲಾಗಿದೆ. ಸಿಸಿಬಿ ಕಚೇರಿಗೆ ಸ್ಯಾನಿಟೈಜ್ ಮಾಡಲಾಗತ್ತದೆ. ಸೋಂಕಿತ ಆರೋಪಿಯನ್ನು ವಿಕ್ಟೋರಿಯಾ ಅಸ್ಪತ್ರೆಗೆ ರವಾನೆ ಮಾಡಲಾಗುವುದು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.