ಶಿಷ್ಯಂದಿರಿಂದಲೇ ರೌಡಿಶೀಟರ್ ಕೊಲೆ, 7 ಆರೋಪಿಗಳ ಬಂಧನ

|

Updated on: May 17, 2020 | 11:56 AM

ಬೆಂಗಳೂರು: ರೌಡಿಶೀಟರ್ ಅಶೋಕ್ ಅಲಿಯಾಸ್ ದಡಿಯಾ ಅಶೋಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬ್ಯಾಟರಾಯನಪುರ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದಾರೆ. ಚೇತನ್ ಅಲಿಯಾಸ್ ಚೇತು, ಅಭಿಷೇಕ್ ಅಲಿಯಾಸ್ ಕುಳ್ಳ, ಅಭಿ‌, ಅಂದಾನಿ, ಯಶ್ವಂತ್ ಅಲಿಯಾಸ್ ಕರಿಯ, ರಾಜು ಅಲಿಯಾಸ್ ಸೈಕೋಪೂಮಾ, ಕೌಶಿಕ್ ಬಂಧಿತ ಆರೋಪಿಗಳು. ಶಿಷ್ಯಂದಿರಿಂದಲೇ ಗುರುವಿನ ಕೊಲೆ: ಮೇ 7ರಂದು ರಾತ್ರಿ ಮಾರುತಿ ನಗರದಲ್ಲಿ ರೌಡಿಶೀಟರ್ ಅಶೋಕ್ ಅಲಿಯಾಸ್ ದಡಿಯಾ ಅಶೋಕ್​ನನ್ನು ಆರೋಪಿಗಳು ಕೊಚ್ಚಿ ಕೊಲೆ ಮಾಡಿದ್ದರು. ಇವರೆಲ್ಲಾ ಮೃತ ರೌಡಿಶೀಟರ್ ಅಶೋಕ್ ಸ್ನೇಹಿತರು ಹಾಗೂ ಶಿಷ್ಯಂದಿರು. […]

ಶಿಷ್ಯಂದಿರಿಂದಲೇ ರೌಡಿಶೀಟರ್ ಕೊಲೆ, 7 ಆರೋಪಿಗಳ ಬಂಧನ
Follow us on

ಬೆಂಗಳೂರು: ರೌಡಿಶೀಟರ್ ಅಶೋಕ್ ಅಲಿಯಾಸ್ ದಡಿಯಾ ಅಶೋಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬ್ಯಾಟರಾಯನಪುರ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದಾರೆ. ಚೇತನ್ ಅಲಿಯಾಸ್ ಚೇತು, ಅಭಿಷೇಕ್ ಅಲಿಯಾಸ್ ಕುಳ್ಳ, ಅಭಿ‌, ಅಂದಾನಿ, ಯಶ್ವಂತ್ ಅಲಿಯಾಸ್ ಕರಿಯ, ರಾಜು ಅಲಿಯಾಸ್ ಸೈಕೋಪೂಮಾ, ಕೌಶಿಕ್ ಬಂಧಿತ ಆರೋಪಿಗಳು.

ಶಿಷ್ಯಂದಿರಿಂದಲೇ ಗುರುವಿನ ಕೊಲೆ:
ಮೇ 7ರಂದು ರಾತ್ರಿ ಮಾರುತಿ ನಗರದಲ್ಲಿ ರೌಡಿಶೀಟರ್ ಅಶೋಕ್ ಅಲಿಯಾಸ್ ದಡಿಯಾ ಅಶೋಕ್​ನನ್ನು ಆರೋಪಿಗಳು ಕೊಚ್ಚಿ ಕೊಲೆ ಮಾಡಿದ್ದರು. ಇವರೆಲ್ಲಾ ಮೃತ ರೌಡಿಶೀಟರ್ ಅಶೋಕ್ ಸ್ನೇಹಿತರು ಹಾಗೂ ಶಿಷ್ಯಂದಿರು.

ರೌಡಿಶೀಟರ್ ಅಶೋಕ್ ತನ್ನ ಸಹಚರರ ಬಳಿಯಲ್ಲೇ ಹಪ್ತಾ ವಸೂಲಿ, ಹಣ ಸುಲಿಗೆ ಮಾಡ್ತಿದ್ದ. ಅಶೋಕ್ ನೀಡ್ತಿದ್ದ ಹಾವಳಿಗೆ ಬೇಸತ್ತು ಕೊಲೆ ಮಾಡಿ‌ದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧಿಸಿ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.