ಲಾಕ್​ಡೌನ್​ ಸಮಯದಲ್ಲಿ ಖದೀಮರ ಕೈಚಳಕ, ದೇಗುಲದ ಬೀಗ ಒಡೆದು ಚಿನ್ನಾಭರಣ ಕಳವು

ಲಾಕ್​ಡೌನ್​ ಸಮಯದಲ್ಲಿ ಖದೀಮರ ಕೈಚಳಕ, ದೇಗುಲದ ಬೀಗ ಒಡೆದು ಚಿನ್ನಾಭರಣ ಕಳವು

ನೆಲಮಂಗಲ: ಕೊರೊನಾ ಹೆಮ್ಮಾರಿಯಿಂದ ಎಲ್ಲಾ ದೇವಾಲಯಗಳನ್ನು ಬಂದ್ ಮಾಡಲಾಗಿದೆ. ದೇವಾಲಯಗಳಿಗೆ ಪ್ರವೇಶವಿಲ್ಲದ ಕಾರಣ ಇದೇ ಸಮಯವನ್ನು ಬಳಸಿಕೊಂಡು ದೇವಿಯ ವಿಗ್ರಹದ ಮೇಲಿದ್ದ ಚಿನ್ನಾಭರಣವನ್ನು ಕೊದ್ದೊಯ್ದಿರುವ ಘಟನೆ ನೆಲಮಂಗಲ ತಾಲೂಕಿನ ಹೊಸಪಾಳ್ಯದಲ್ಲಿ ನಡೆದಿದೆ. ಚೌಡೇಶ್ವರಿ ದೇವಾಲಯದ ಬೀಗ ಮುರಿದು ದೇವಿ ವಿಗ್ರಹದ ಮೇಲಿದ್ದ ಚಿನ್ನಾಭರಣವನ್ನು ಖದೀಮರು ಎಗರಿಸಿದ್ದಾರೆ. ದೇವಿಯ ಚಿನ್ನದ ತಾಳಿ, ಗುಂಡು, ಡಾಬು, ಸರ ಸೇರಿದಂತೆ ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಆಭರಣ ಕಳವು ಮಾಡಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

sadhu srinath

|

May 18, 2020 | 10:56 AM

ನೆಲಮಂಗಲ: ಕೊರೊನಾ ಹೆಮ್ಮಾರಿಯಿಂದ ಎಲ್ಲಾ ದೇವಾಲಯಗಳನ್ನು ಬಂದ್ ಮಾಡಲಾಗಿದೆ. ದೇವಾಲಯಗಳಿಗೆ ಪ್ರವೇಶವಿಲ್ಲದ ಕಾರಣ ಇದೇ ಸಮಯವನ್ನು ಬಳಸಿಕೊಂಡು ದೇವಿಯ ವಿಗ್ರಹದ ಮೇಲಿದ್ದ ಚಿನ್ನಾಭರಣವನ್ನು ಕೊದ್ದೊಯ್ದಿರುವ ಘಟನೆ ನೆಲಮಂಗಲ ತಾಲೂಕಿನ ಹೊಸಪಾಳ್ಯದಲ್ಲಿ ನಡೆದಿದೆ.

ಚೌಡೇಶ್ವರಿ ದೇವಾಲಯದ ಬೀಗ ಮುರಿದು ದೇವಿ ವಿಗ್ರಹದ ಮೇಲಿದ್ದ ಚಿನ್ನಾಭರಣವನ್ನು ಖದೀಮರು ಎಗರಿಸಿದ್ದಾರೆ. ದೇವಿಯ ಚಿನ್ನದ ತಾಳಿ, ಗುಂಡು, ಡಾಬು, ಸರ ಸೇರಿದಂತೆ ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಆಭರಣ ಕಳವು ಮಾಡಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada