ಪುಣೆಯಲ್ಲಿ ಟೆಂಪೋಗೆ ಟ್ರಕ್ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ; 9 ಮಂದಿ ಸಾವು

ಮಹಾರಾಷ್ಟ್ರದ ಪುಣೆ-ನಾಸಿಕ್ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ 9 ಜನರು ಸಾವನ್ನಪ್ಪಿದ್ದಾರೆ. ಪೊಲೀಸರ ಪ್ರಕಾರ, ಟೆಂಪೋ​ವೊಂದು ಟ್ರಕ್​ಗೆ ಡಿಕ್ಕಿ ಹೊಡೆದು ರಸ್ತೆಯ ಪಕ್ಕದಲ್ಲಿ ನಿಂತಿದ್ದ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಇಂದು ಬೆಳಗ್ಗೆ ಅಪಘಾತ ನಡೆದ ಸಮಯದಲ್ಲಿ ಕಾರು ನಾರಾಯಣಗಾಂವ್ ಕಡೆಗೆ ಹೋಗುತ್ತಿತ್ತು.

ಪುಣೆಯಲ್ಲಿ ಟೆಂಪೋಗೆ ಟ್ರಕ್ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ; 9 ಮಂದಿ ಸಾವು
Road Accident
Follow us
ಸುಷ್ಮಾ ಚಕ್ರೆ
|

Updated on: Jan 17, 2025 | 5:11 PM

ಪುಣೆ: ಪುಣೆ-ನಾಸಿಕ್ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಟೆಂಪೋವೊಂದು ಟ್ರಕ್​ಗೆ ಡಿಕ್ಕಿ ಹೊಡೆದು, ನಂತರ ಪಕ್ಕದಲ್ಲಿ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ 9 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನಾರಾಯಣಗಾಂವ್ ಬಳಿ ಈ ಘಟನೆ ಸಂಭವಿಸಿದೆ. ಟೆಂಪೋ ನಾರಾಯಣಗಾಂವ್ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಟ್ರಕ್​​ಗೆ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಬ್ಯಾಲೆನ್ಸ್ ತಪ್ಪಿ ಖಾಲಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಭಾರೀ ಅಪಘಾತ ಸಂಭವಿಸಿದೆ.

ಪುಣೆ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ದೇಶಮುಖ್, ಟೆಂಪೋದಲ್ಲಿದ್ದ 9 ಪ್ರಯಾಣಿಕರು ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ. ಈ ಘಟನೆಯ ಕುರಿತು ಹೆಚ್ಚಿನ ವಿವರಗಳಿಗಾಗಿ ಅಧಿಕಾರಿಗಳು ಇನ್ನೂ ಕಾಯುತ್ತಿದ್ದಾರೆ. ಸ್ಥಳೀಯ ಅಧಿಕಾರಿಗಳು ಅವಶೇಷಗಳನ್ನು ತೆರವುಗೊಳಿಸಲು ಮತ್ತು ಆ ಪ್ರದೇಶದಲ್ಲಿ ಸಂಚಾರ ಅಡಚಣೆಗಳನ್ನು ನಿರ್ವಹಿಸಲು ಪ್ರಯತ್ನಗಳನ್ನು ಪ್ರಾರಂಭಿಸಿದ್ದಾರೆ.

ಬೆಳಿಗ್ಗೆ 10 ಗಂಟೆ ಸುಮಾರಿಗೆ ನಾರಾಯಣಗಾಂವ್ ಬಳಿ ಈ ಅಪಘಾತ ಸಂಭವಿಸಿದೆ. ಪಿಟಿಐ ವರದಿಗಳ ಪ್ರಕಾರ, ನಾರಾಯಣಗಾಂವ್ ಕಡೆಗೆ ಹೋಗುತ್ತಿದ್ದ ಟ್ರಕ್​ಗೆ ಹಿಂದಿನಿಂದ ಟೆಂಪೋ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ಪರಿಣಾಮ ಟ್ರಕ್ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಖಾಲಿ ಬಸ್‌ಗೆ ಡಿಕ್ಕಿ ಹೊಡೆದಿದೆ.

ಈ ಘಟನೆ ಬಗ್ಗೆ ತಮ್ಮ ಸಂತಾಪ ವ್ಯಕ್ತಪಡಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಘಟನೆಯನ್ನು “ತುಂಬಾ ದುರದೃಷ್ಟಕರ” ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. “ಪುಣೆ-ನಾಸಿಕ್ ಹೆದ್ದಾರಿಯ ನಾರಾಯಣಗಾಂವ್ ಬಳಿ ನಡೆದ ಭೀಕರ ಅಪಘಾತದಲ್ಲಿ 9 ಕಾರ್ಮಿಕರು ಸಾವನ್ನಪ್ಪಿದ ದುರಂತ ಘಟನೆ ಅತ್ಯಂತ ದುರದೃಷ್ಟಕರ. ಅವರ ಕುಟುಂಬಗಳ ದುಃಖದಲ್ಲಿ ನಾವು ಭಾಗಿಯಾಗುತ್ತೇವೆ” ಎಂದು ಅವರು ಬರೆದಿದ್ದಾರೆ.

ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿಗಳು 5 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ಘೋಷಿಸಿದ್ದಾರೆ. ಈ ಪರಿಹಾರವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಮೂಲಕ ಒದಗಿಸಲಾಗುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ
ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯನ್ನು ಪೂರ್ತಿಗೊಳಿಸಲ್ಲ: ವಿಜಯೇಂದ್ರ
ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯನ್ನು ಪೂರ್ತಿಗೊಳಿಸಲ್ಲ: ವಿಜಯೇಂದ್ರ
ನಾನೇ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ: ವಿಜಯೇಂದ್ರ
ನಾನೇ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ: ವಿಜಯೇಂದ್ರ
ಸುರ್ಜೆವಾಲಾ ರಾಜ್ಯದಲ್ಲಿರುವಾಗಲೇ ನಡೆದಿರುವ ಬೆಳವಣಿಗೆ ಕುತೂಹಲಕಾರಿ
ಸುರ್ಜೆವಾಲಾ ರಾಜ್ಯದಲ್ಲಿರುವಾಗಲೇ ನಡೆದಿರುವ ಬೆಳವಣಿಗೆ ಕುತೂಹಲಕಾರಿ
ಸುತ್ತೂರು ಮಠದಲ್ಲೇ ವಿಜಯೇಂದ್ರ ಮತ್ತು ಸಂಗಡಿಗರಿಗೆ ಉಪಹಾರ
ಸುತ್ತೂರು ಮಠದಲ್ಲೇ ವಿಜಯೇಂದ್ರ ಮತ್ತು ಸಂಗಡಿಗರಿಗೆ ಉಪಹಾರ
ಆಕಾಶದಲ್ಲಿ ಸ್ಫೋಟಗೊಂಡ ಸ್ಪೇಸ್​ಎಕ್ಸ್​ ಸ್ಟಾರ್​ಶಿಪ್
ಆಕಾಶದಲ್ಲಿ ಸ್ಫೋಟಗೊಂಡ ಸ್ಪೇಸ್​ಎಕ್ಸ್​ ಸ್ಟಾರ್​ಶಿಪ್
ಕೆನಡಾ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿ ಕನ್ನಡದಲ್ಲೇ ಮಾತನಾಡಿದ ಚಂದ್ರ
ಕೆನಡಾ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿ ಕನ್ನಡದಲ್ಲೇ ಮಾತನಾಡಿದ ಚಂದ್ರ
ಈ ಸೀಸನ್​ನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಗಳ ಮರು ಎಂಟ್ರಿ; ಜಗದೀಶ್​ ಕಥೆ ಏನು?
ಈ ಸೀಸನ್​ನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಗಳ ಮರು ಎಂಟ್ರಿ; ಜಗದೀಶ್​ ಕಥೆ ಏನು?
ತಪ್ಪಾದ ಬಸ್ ಹತ್ತಿ ಹೋದ 5 ವರ್ಷದ ಬಾಲಕ, ಮುಂದೇನಾಯ್ತು?
ತಪ್ಪಾದ ಬಸ್ ಹತ್ತಿ ಹೋದ 5 ವರ್ಷದ ಬಾಲಕ, ಮುಂದೇನಾಯ್ತು?