ವಿಜಯನಗರದಲ್ಲಿ ಅಕ್ರಮವಾಗಿ ಮಧ್ಯ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ, ಹುಬ್ಬಳ್ಳಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ಮಾಡಿ, ದುಷ್ಕರ್ಮಿಗಳು ಪರಾರಿ

| Updated By: ವಿವೇಕ ಬಿರಾದಾರ

Updated on: May 14, 2022 | 11:00 AM

ಹೊಸಪೇಟೆ ಯ ಬಳ್ಳಾರಿ ರಸ್ತೆಯ HLC ಕಾಲುವೆ ಬಳಿ ಅಕ್ರಮವಾಗಿ ಮಧ್ಯ ಸಾಗಿಸುತ್ತಿದ್ದ ಓರ್ವನನ್ನು ಹೊಸಪೇಟೆ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ವಿಜಯನಗರದಲ್ಲಿ ಅಕ್ರಮವಾಗಿ ಮಧ್ಯ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ, ಹುಬ್ಬಳ್ಳಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ಮಾಡಿ, ದುಷ್ಕರ್ಮಿಗಳು ಪರಾರಿ
ಅಕ್ರಮವಾಗಿ ಮಧ್ಯ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ
Follow us on

ವಿಜಯನಗರ: ಹೊಸಪೇಟೆ (Hospet)ಯ ಬಳ್ಳಾರಿ ರಸ್ತೆಯ HLC ಕಾಲುವೆ ಬಳಿ ಅಕ್ರಮವಾಗಿ ಮಧ್ಯ ಸಾಗಿಸುತ್ತಿದ್ದ ಓರ್ವನನ್ನು ಹೊಸಪೇಟೆ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹೊಸಪೇಟೆಯ ಕೊಂಡನಾಯಕನಹಳ್ಳಿಯ ರವಿ ಅಕ್ರಮವಾಗಿ ಮಧ್ಯ ಸಾಗಿಸುತ್ತಿದ್ದ ವೇಳೆ ಹೊಸಪೇಟೆ ಗ್ರಾಮೀಣ ಠಾಣೆಯ ಪೊಲೀಸರ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ 3,372,48 ರೂಪಾಯಿ ಮೌಲ್ಯದ 8,640 ಲೀಟರ್ ಮಧ್ಯವನ್ನು ಜಪ್ತಿ ಮಾಡಲಾಗಿದೆ. ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಹುಬ್ಬಳ್ಳಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ (Hubli) ತಾಲೂಕಿನ ಅದರಗುಂಚಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಶಂಭುಲಿಂಗ ಕಮಡೊಳ್ಳಿ(35) ಕೊಲೆಯಾದ ಯುವಕ. ಶಂಭುಲಿಂಗ ಕಮಡೊಳ್ಳಿಗೆ ಕಳೆದ ಒಂದು ವರ್ಷದ ಹಿಂದೆ ಅಷ್ಟೇ ಮದುವೆಯಾಗಿತ್ತು. ಯುವಕನನ್ನು ಕೊಲೆ ಮಾಡಿ ಬಿಸಾಕಿ ದುಷ್ಕರ್ಮಿಗಳು ಪರಾರಿ‌ಯಾಗಿದ್ದಾರೆ. ಇನ್ನು ಕೊಲೆಗೆ ಕಾರಣ ತಿಳಿದು ಬಂದಿಲ್ಲ.ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ರೌಡಿ ಶೀಟರ್ ಕೊಲೆ ಆರೋಪಿಯ ಬರ್ಬರ ಹತ್ಯೆ

ಹಾಸನ: ಲಾಂಗು ಮಚ್ಚುಗಳಿಂದ ಹೊಡೆದು ರೌಡಿ ಶೀಟರ್ ಕೊಲೆ ಆರೋಪಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಿರೀಸಾವೆ ಸಮೀಪದ ಚೋಳಂಬಳ್ಳಿ ಗ್ರಾಮದ ಬಳಿ ನೆನ್ನೆ (13 ಮೇ) ರಾತ್ರಿ ನಡೆದಿದೆ. ಕಮರವಳ್ಳಿ ಗ್ರಾಮದ ಸುದೀಪ್‌ (25) ಕೊಲೆಯಾದ ವ್ಯಕ್ತಿ. ಸುದೀಪ್ ಹಾಗೂ ಮಂಜುನಾಥ್ ಹಿರೀಸಾವೆಯಿಂದ ಕಮರವಳ್ಳಿ ಗ್ರಾಮಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದರು.

ಬೈಕ್ ಚೋಳಂಬಳ್ಳಿ ಗ್ರಾಮದ ಸಮೀಪ ಬಂದಾಗ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಬಂದ ಹಂತಕರು ಯುವಕನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಸುದೀಪ್ ರೌಡಿ ಶೀಟರ್ ಲಿಂಗರಾಜು ಹತ್ಯೆ ಕೇಸ್ ನಲ್ಲಿ ಆರೋಪಿಯಾಗಿದ್ದ. ರೌಡಿ ಶೀಟರ್ ಲಿಂಗರಾಜು ಹತ್ಯೆಗೆ ಮಾಹಿತಿ ನೀಡಿದ್ದ ಎಂಬ ಕಾರಣಕ್ಕೆ ಸುದೀಪ್ ಹತ್ಯೆಯಾಗಿರೋ ಶಂಕೆ ವ್ಯಕ್ತವಾಗುತ್ತಿದೆ. ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರಣ್ಯ ಸಿಬ್ಬಂದಿ ಮೇಲೆ ಕತ್ತಿಯಿಂದ ಹಲ್ಲೆ

ಮಡಿಕೇರಿ: ದುಷ್ಕಕರ್ಮಿಯೊಬ್ಬ ಅರಣ್ಯ (Forest) ಸಿಬ್ಬಂದಿ ಮೇಲೆ ಕತ್ತಿಯಿಂದ ಹಲ್ಲೆ ಮಾಡಿರುವ ಘಟನೆ ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದಲ್ಲಿ ನಡೆದಿದೆ. ಅರಣ್ಯ ರಕ್ಷಕ ಸಂಜೀವ (59) ಹಲ್ಲೆಗೊಳಗಾದ ಸಿಬ್ಬಂದಿಯಾಗಿದ್ದು, ತಿಮ್ಮಯ್ಯ(52) ಎಂಬಾತನಿಂದ ಸಂಜೀವ್ ಮೇಲೆ‌ ಹಲ್ಲೆ ಮಾಡಿದ್ದಾನೆ.

ಗಾಯಾಳು ಸಂಜೀವರನ್ನ ಮಂಗಳೂರು ಆಸ್ಪತ್ರೆ ರವಾನೆ ಮಾಡಲಾಗಿದೆ. ಹಲ್ಲೆ ಮಾಡಿದ ಆರೋಪಿ ತಿಮ್ಮಯ್ಯ ಅರಣ್ಯದಲ್ಲಿ ಪರಾರಿಯಾಗಿದ್ದಾನೆ. ಕಸವಿಲೇವಾರಿ ಸ್ಥಳಕ್ಕೆ ಸಂಬಂಧಪಟ್ಟಂತೆ ಇಬ್ಬರ ನಡುವೆ ವಿವಾದ ಬುಗಿಲೆದ್ದಿತ್ತು. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿಗೆ ಡಿಕ್ಕಿಯಾಗಿ ಕ್ಯಾಂಟರ್‌ನಲ್ಲಿ ಸಿಲುಕಿದ್ದ ಚಾಲಕನ ರಕ್ಷಣೆ

ಬೆಳಗಾವಿ: ಬೆಳಗಾವಿಯಿಂದ ಹುಬ್ಬಳ್ಳಿಯತ್ತ ತೆರಳುತ್ತಿದ್ದ ಲಾರಿಗೆ ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಬೆಳಗಾವಿ ತಾಲೂಕಿನ ಹಲಗಾ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಘಟನೆ ನಡೆದಿದೆ. ಸ್ಥಳದಲ್ಲೇ ಲಾರಿ ನಿಲ್ಲಿಸಿ ಲಾರಿ ಚಾಲಕ ಪರಾರಿಯಾಗಿದ್ದಾನೆ. ಲಾರಿಗೆ ಡಿಕ್ಕಿಯಾಗಿ ಕ್ಯಾಂಟರ್‌ನಲ್ಲಿ ಸಿಲುಕಿದ್ದ ಚಾಲಕ ಭೀಮಪ್ಪ ಕನ್ನಪ್ಪನವರ್ ಕ್ಯಾಂಟರ್‌ನಲ್ಲಿ ಸಿಲುಕಿ ಒದ್ದಾಡುತ್ತಿದ್ದನು.

ಚಾಲಕನನ್ನು ಕಂಡು ಸ್ಥಳಿಯರು ಆ್ಯಂಬುಲೆನ್ಸ್ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆ್ಯಂಬುಲೆನ್ಸ್‌ ಚಾಲಕ ಬಸವರಾಜ ಮತ್ತು ಸ್ಥಳೀಯರು ಸೇರಿ ಚಾಲಕನನ್ನು ಕ್ಯಾಂಟರ್ ದಿಂದ ಹೊರತೆಗೆಯಲು ಯತ್ನಿಸಿದ್ದಾರೆ. ಆದರೆ ಚಾಲಕನನ್ನು ಹೊರ ತೆಗೆಯಲು ಆಗದಿದ್ದಾಗ ಸ್ಥಳಿಯರು SDRF ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ SDRF ಸಿಬ್ಬಂದಿ ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಚಾಲಕನನ್ನು ರಕ್ಷಿಸಿದ್ದಾರೆ. ಚಾಲಕ ಭೀಮಪ್ಪನ ರಕ್ಷಿಸಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ