Crime News: ಬೆಳ್ಳಂಬೆಳಗ್ಗೆ ಮನೆ ಬೀಗ ಮುರಿದು ಲಕ್ಷ ಲಕ್ಷ ಹಣ ಮತ್ತು ಚಿನ್ನಾಭರಣ ಕದಿದ್ದ ಖದೀಮರು ಅರೆಸ್ಟ್
ಸಂಡೂರು ಪಟ್ಟಣದ ಜ್ಯುವೇಲರಿ ಶಾಪನಲ್ಲಿ 825 ಗ್ರಾಂ ಬಂಗಾರವಿದ್ದ ಬ್ಯಾಗ ಕಳ್ಳತನ ಮಾಡಿ ಕಳ್ಳರು ಪರಾರಿಯಾಗಿರುವಂತಹ ಘಟನೆ ಸಂಡೂರಿನ SSV ಜ್ಯುವೇಲರಿ ಶಾಪನಲ್ಲಿ ನಡೆದಿದೆ.
ಬೆಂಗಳೂರು: ಬೆಳ್ಳಂಬೆಳಗ್ಗೆ ಮನೆ ಬೀಗ ಮುರಿದು ಲಕ್ಷ ಲಕ್ಷ ಹಣ ಕದ್ದಿದ್ದ ಖದೀಮರನ್ನು ಪೊಲೀಸರು ಅರೆಸ್ಟ್ ಮಾಡಿರುವಂತಹ ಘಟನೆ ಗಿರಿನಗ ಠಾಣೆ ವ್ಯಾಪ್ತಿಯ ವೀರಭದ್ರ ನಗರದಲ್ಲಿ ನಡೆದಿದೆ. ನಾಗರಾಜ್ ಮತ್ತು ಶೇಖರ ಬಂಧಿತ ಆರೋಪಿಗಳು. ಮನೆಗೆ ಬೀಗ ಹಾಕಿ ತಮಿಳುನಾಡಿಗೆ ತೆರಳಿದ ರಮೇಶ ಕುಂಟುಬ, ಮೇ.2 ರಂದು ಮನೆಗೆ ಹಾಕಲಾಗಿದ್ದ ಎಗ್ಸಾಸ್ಟರ್ ಮುರಿದು ನುಗ್ಗಿದ್ದಾರೆ. ಮನೆಯಲ್ಲಿದ್ದ 2.35 ಲಕ್ಷ ಹಣ ಹಾಗೂ 50 ಗ್ರಾಂ ಚಿನ್ನಾಭರಣ ಕದ್ದು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಆರೋಪಿ ವಿರುದ್ಧ ಗಿರಿನಗರ ಠಾಣೆಯಲ್ಲಿ ಮನೆ ಮಾಲೀಕ ರಮೇಶ್ ದೂರು ನೀಡಿದ್ದರು. ಕೇಸ್ ದಾಖಲಾಗುತ್ತಿದ್ದಂತೆ ಆರೋಪಿಯನ್ನು ಪತ್ತೆ ಹಚ್ಚಿದ ಖಾಕಿ ಹೆಡೆಮುರಿಕಟ್ಟಿದೆ. ಆರೋಪಿಗಳಿಂದ 25 ಗ್ರಾಂ ಚಿನ್ನಾಭರಣ ಹಾಗೂ ನಗದು ವಶ ಪಡಿಸಿಕೊಳ್ಳಲಾಗಿದೆ. ಗುರುತು ಪತ್ತೆ ಆಗಬಾರದೆಂದು ಪ್ಲಾನ್ ಮಾಡಿದ್ದ ಆರೋಪಿಗಳು, ಕಳ್ಳತನ ಮಾಡಿ ಮನೆಯಲ್ಲಿ ಖಾರದ ಪುಡಿ ಎರಚಿ ಹೋಗಿದ್ರು. ಆದ್ರೆ ಆರೋಪಿಗಳ ಪ್ಲಾನ್ ಉಲ್ಟಾ ಹೊಡೆದಿತ್ತು. ಎಗ್ಸಾಸ್ಟರ್ ಬಳಿ ಇವರ ಫಿಂಗರ್ ಪ್ರಿಂಟ್ ಗೊತ್ತಾಗಿದೆ. ಇಬ್ಬರ ಮೇಲೆ ಈ ಹಿಂದೆ ಕೂಡ ಕಳ್ಳತನ ಪ್ರಕರಣ ಇದೆ. ಫಿಂಗರ್ ಪ್ರಿಂಟ್ ಮ್ಯಾಚ್ ಆಗಿದ್ದರಿಂದ ಆರೋಪಿ ಬಂಧನ ಮಾಡಲಾಗಿದೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ 25 ವರ್ಷದ ಹಿಮಾಲಯದ ಕಪ್ಪು ಕರಡಿ ಸಾವು
ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ 25 ವರ್ಷದ ಕರಡಿ ಸಾವನ್ನಪ್ಪಿದೆ. ಮೋಹನ್ ಎಂಬ ಹೆಸರಿನ ಹಿಮಾಲಯದ ಕಪ್ಪು ಕರಡಿ ಮೃತಪಟ್ಟಿದ್ದು, 2002ರಲ್ಲಿ ಬೆಳಗಾವಿಯಿಂದ ರಕ್ಷಿಸಿ ಬನ್ನೇರುಘಟ್ಟಕ್ಕೆ ಕರೆತರಲಾಗಿತ್ತು. ಅಂದಿನಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿದ್ದ ಕರಡಿ ಮೋಹನ್, ಕಳೆದ 15 ದಿನಗಳಿಂದ ವಯೋಸಹಜ ಸಮಸ್ಯೆಯಿಂದ ಬಳಲುತ್ತಿತ್ತು. ನಿನ್ನೇ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಕರಡಿ ಸಾವನ್ನಪ್ಪಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳಿಂದ ಮಾಹಿತಿ ಪಡೆದು ಮೃತ ಕರಡಿಯ ಮಾದರಿಯನ್ನು ವೈದ್ಯಾಧಿಕಾರಿಗಳು ಸಂಗ್ರಹಿಸಿದ್ದಾರೆ.
ಮನೆಯ ಗೋಡೆ ಕುಸಿದು 10 ಕುರಿಗಳು ಸಾವು
ಚಾಮರಾಜನಗರ: ರಾತ್ರಿ ಇಡೀ ಜಿಟಿಜಿಟಿ ಮಳೆ ಹಿನ್ನಲೆ ಮನೆಯ ಗೋಡೆ ಕುಸಿದು 10 ಕುರಿಗಳು ಸಾವನ್ನಪ್ಪಿರುವಂತಹ ಘಟನೆ ತಾಲೂಕು ಕೆಸ್ತೂರು ಗ್ರಾಮದಲ್ಲಿ ನಡೆದಿದೆ. ಮನೆಯೊಳಗಿದ್ದ ಜಯಮ್ಮ ಎಂಬಾಕೆ ಅಪಾಯದಿಂದ ಪಾರಾಗಿದ್ದಾರೆ. ಕುಸಿದ ಗೋಡೆಯ ಅಡಿಯಲ್ಲಿ ಕುರಿಗಳು ಸಿಲುಕಿದ್ದು, ಒಂದು ಲಕ್ಷ ರೂಪಾಯಿಗೂ ಹೆಚ್ಚು ನಷ್ಟವಾಗಿದೆ. ಕುಸಿದ ಮನೆಯೊಳಗೆ ಸಿಲುಕಿದ್ದ ಜಯಮ್ಮಳನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.
ಬಂಗಾರವಿದ್ದ ಬ್ಯಾಗ ಕಳ್ಳತನ ಮಾಡಿ ಕಳ್ಳರು ಪರಾರಿ
ಬಳ್ಳಾರಿ: ಸಂಡೂರು ಪಟ್ಟಣದ ಜ್ಯುವೇಲರಿ ಶಾಪನಲ್ಲಿ 825 ಗ್ರಾಂ ಬಂಗಾರವಿದ್ದ ಬ್ಯಾಗ ಕಳ್ಳತನ ಮಾಡಿ ಕಳ್ಳರು ಪರಾರಿಯಾಗಿರುವಂತಹ ಘಟನೆ ಸಂಡೂರಿನ SSV ಜ್ಯುವೇಲರಿ ಶಾಪನಲ್ಲಿ ನಡೆದಿದೆ. ಮಾಲೀಕ ಒಂದು ಬಾಗಿಲಿನ ಬೀಗ ತೆಗೆದು ಶಾಪ ಒಳಗೆ ಚಿನ್ನವಿದ್ದ ಚೀಲವನ್ನಿಟ್ಟು ಇನ್ನೊಂದು ಬಾಗಿಲು ತಗೆಯುವ ವೇಳೆ ಕಳ್ಳರು ಬ್ಯಾಗ ಎಗರಿಸಿದ್ದಾರೆ. 32,54,000 ಮೌಲ್ಯದ 825 ಗ್ರಾಂ ಬಂಗಾರ ಕಳ್ಳತನವಾಗಿದ್ದು, ಚಿನ್ನದಂಗಡಿ ಮಾಲೀಕ ಮೆಹಬೂಬಬಾಷಾರಿಂದ ದೂರು ದಾಖಲು ಮಾಡಲಾಗಿದೆ. ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಚಿನ್ನದ ಬ್ಯಾಗ ಕದ್ದು ಬೈಕ್ನಲ್ಲಿ ಮೂವರು ಕಳ್ಳರು ಪರಾರಿಯಾಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಿನ್ನ ಕದ್ದು ಪೊಲೀಸ ಠಾಣೆಯ ಮುಂದಿನ ರಸ್ತೆಯಲ್ಲೇ ಪರಾರಿಯಾಗಿದ್ದಾರೆ. ಪ್ರಕರಣ ಕುರಿತು ಸಂಡೂರು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಸಂಚಾರಿ ನಿಯಮಗಳ ಉಲ್ಲಂಘನೆ ಪರಿಶೀಲನೆ ವೇಳೆ ಬೈಕ್ ಅಪಘಾತ
ಚಿಕ್ಕಬಳ್ಳಾಪುರ: ಸಂಚಾರಿ ನಿಯಮಗಳ ಉಲ್ಲಂಘನೆ ಪರಿಶೀಲನೆ ವೇಳೆ ಬೈಕ್ ಅಪಘಾತ ಸಂಭವಿಸಿರುವಂತಹ ಘಟನೆ ಚಿಂತಾಮಣಿ ನಗರದ ಬಾಗೇಪಲ್ಲಿ ವೃತ್ತದ ಬಳಿ ನಡೆದಿದೆ. ಅಪಘಾತದಲ್ಲಿ ಓರ್ವ ಬೈಕ್ ಸವಾರನಿಗೆ ಕಾಲು ಮುರಿದಿದ್ದು, ಗಾಯಗಳು ಚಿಂತಾಮಣಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪೊಲೀಸರು ಬೈಕ್ ತಡೆಯಲು ಮುಂದಾದಾಗ ಬೈಕ್ ಅಪಘಾತವಾಗಿದ್ದು, ಚಿಂತಾಮಣಿ ನಗರ ಠಾಣೆ ಪೊಲೀಸರ ವಿರುದ್ದ ಸಾರ್ವಜನಿಕರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಚಾರಿ ನಿಯಮಗಳ ಉಲ್ಲಂಘನೆ ಪರಿಶೀಲನೆ ವೇಳೆ ಘಟನೆ ನಡೆದಿದೆ.
ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.