ಮೈಸೂರು: ಕುಡಿದ ಅಮಲಿನಲ್ಲಿ ಕೊಲೆ; ಗರ್ಭಿಣಿ ಪತ್ನಿ ಸೇರಿ ಆರು ಜನರ ಮೇಲೆ ಮಾರಣಾಂತಿಕ ಹಲ್ಲೆ

TV9 Digital Desk

| Edited By: sandhya thejappa

Updated on:Dec 02, 2021 | 12:40 PM

ಈರಯ್ಯ ಅಲಿಯಾಸ್ ಕುಂಡ ಎಂಬುವವನು ಎದುರುಗಡೆ ಮನೆಯವನ ಮೇಲಿನ ಸಿಟ್ಟಿಗೆ ಆತನ ತಂದೆ, ತಾಯಿಯನ್ನು ಕೊಂದಿದ್ದಾನೆ. ಅಡ್ಡ ಬಂದ ಗರ್ಭಿಣಿ ಪತ್ನಿ ಹಾಗೂ ಅತ್ತೆ, ಮಾವನ ಮೇಲೂ ಹಲ್ಲೆ ನಡೆಸಿದ್ದಾನೆ.

ಮೈಸೂರು: ಕುಡಿದ ಅಮಲಿನಲ್ಲಿ ಕೊಲೆ; ಗರ್ಭಿಣಿ ಪತ್ನಿ ಸೇರಿ ಆರು ಜನರ ಮೇಲೆ ಮಾರಣಾಂತಿಕ ಹಲ್ಲೆ
ಸಾಂದರ್ಭಿಕ ಚಿತ್ರ

ಮೈಸೂರು: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಓರ್ವ ಮಹಿಳೆ ಹತ್ಯೆಗೈದು, ಆರು ಜನರ ಮೇಲೆ ಹಲ್ಲೆ ನಡೆಸಿದ್ದಾನೆ. ಈರಯ್ಯ ಅಲಿಯಾಸ್ ಕುಂಡ ಎಂಬುವವನು ಎದುರುಗಡೆ ಮನೆಯವನ ಮೇಲಿನ ಸಿಟ್ಟಿಗೆ ಆತನ  ತಾಯಿಯನ್ನು ಕೊಂದಿದ್ದಾನೆ. ಅಡ್ಡ ಬಂದ ಗರ್ಭಿಣಿ ಪತ್ನಿ ಹಾಗೂ ಅತ್ತೆ, ಮಾವ ಸೇರಿ ಒಟ್ಟು ಆರು ಜನರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ನವಿಲೂರು ಎಂಬಲ್ಲಿ ನಡೆದಿದೆ.

ನವಿಲೂರಿನ ನಿಂಗಮ್ಮ(50) ಕೊಲೆಯಾದ ಮಹಿಳೆ. ಈರಯ್ಯ ತಡೆಯಲು ಹೋಗಿದ್ದ ಗರ್ಭಿಣಿ ಪತ್ನಿ ಮಹದೇವಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ. ಇನ್ನು ಹಲ್ಲೆಗೊಳಗಾದ ಅತ್ತೆ ಗೌರಮ್ಮ ಮತ್ತು ಮಾವ ಸುರೇಶ್ ಅಲಿಯಾಸ್ ಕೂಸು ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ಸದ್ಯ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಂತಕ ಈರಯ್ಯನನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ.

ಈರಯ್ಯ ಮೊದಲ ಪತ್ನಿಯನ್ನು ಕೊಂದು ಜೈಲಿಗೆ ಹೋಗಿದ್ದ. ಜಾಮೀನಿನ ಮೇಲೆ ಬಿಡುಗಡೆಯಾಗಿ 2ನೇ ಮದುವೆಯಾಗಿದ್ದ. ಆದರೆ ಇದೀಗ ಮತ್ತೆ ಇಬ್ಬರ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಎಸ್​ಪಿ ಆರ್.ಚೇತನ್, ಡಿವೈಎಎಸ್​ಪಿ ಗೋವಿಂದರಾಜ್, ಸರ್ಕಲ್ ಇನ್ಸ್​ಪೆಕ್ಟರ್ ಲಕ್ಷ್ಮಿಕಾಂತ ತಳವಾರ್, ಇನ್ಸ್​ಪೆಕ್ಟರ್ ಶಿವನಂಜಶೆಟ್ಟಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಪತ್ನಿ ಪ್ರಿಯಕರ ತಾಯಿ ಸಾವು ಪತ್ನಿ ಪ್ರಿಯಕರನ ಮೇಲಿನ ಕೋಪಕ್ಕೆ ಆರೋಪಿ 7 ಜನರ ಮೇಲೆ ಮಚ್ಚಿನಿಂದ ದಾಳಿ ಮಾಡಿದ್ದಾನೆ. ಪತ್ನಿ ಪ್ರಿಯಕರನ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೊದಲಿಗೆ ಮನೆಯಲ್ಲಿ ಊಟ ಮಾಡುತ್ತಿದ್ದ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಅಡ್ಡ ಹೋಗಿದ್ದ ಅತ್ತೆ ಗೌರಮ್ಮ ಮೇಲೂ ಹಲ್ಲೆ ಮಾಡಿದ್ದಾನೆ. ಬಳಿಕ ಪತ್ನಿ ಪ್ರಿಯಕರ ರವಿಯನ್ನು ಹುಡುಕಾಡಿದ್ದ ಈರಯ್ಯ, ರವಿ ಸಿಗದ ಹಿನ್ನೆಲೆ ಪೋಷಕರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದಾಗಿ ನಿಂಗಮ್ಮ ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಇದನ್ನೂ ಓದಿ

ತುಮಕೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆ ನೇಮಕ ವಿವಾದ; 22 ದಿನಗಳಿಂದ ಅಂಗನವಾಡಿ ಬಂದ್

India vs New Zealand Test: 2ನೇ ಟೆಸ್ಟ್​ಗೆ ಟೀಮ್ ಇಂಡಿಯಾದಲ್ಲಿ ಎರಡು ಮಹತ್ವದ ಬದಲಾವಣೆ: ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada