ಗದಗ: ಕ್ಷಣ ಕ್ಷಣಕ್ಕೂ ಭಯ, ಆಂತಕ. ಕುತೂಹಲದಿಂದ ನೋಡುತ್ತಿರೋ ಜನರು. ಮನೆಯಂಗಳದಲ್ಲಿ ರಕ್ತದ ಕಲೆಗಳು. ಈ ಘನಘೋರ ಘಟನೆ ನಡೆದಿದ್ದು, ಗದಗ ನಗರದ 72 ಸಾಲು ಮನೆಗಳ ಪ್ರದೇಶದಲ್ಲಿ. ನಾಲ್ಕು ತಿಂಗಳ ಹಿಂದೆ ಗದಗ ಬೆಟಗೇರಿ(Gadag-Betageri) ಅವಳಿ ನಗರದಲ್ಲಿ ಪದೇ ಪದೇ ಚಾಕೂ ಇರಿತ ಘಟನೆಗಳು ನಡೆದಿವೆ. ಜನರು ಕ್ಷಣ ಕ್ಷಣಕ್ಕೂ ಭಯದಲ್ಲಿ ಜೀವನ ಮಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಎಸ್ಪಿ ಬಿಎಸ್ ನೇಮಗೌಡ್ ಅವರು ಗದಗಕ್ಕೆ ಬಂದ ಬಳಿಕ ಅವಳಿ ನಗರದಲ್ಲಿ ಕ್ರೈಂ ಸಂಖ್ಯೆ ಕಡಿಮೆಯಾಗಿದ್ದವು. ಆದರೀಗ ಮತ್ತೆ ವ್ಯಕ್ತಿಯೊಬ್ಬನನ್ನ ಭೀಕರವಾಗಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಹೌದು ಈ ಫೋಟೋದಲ್ಲಿ ವ್ಯಕ್ತಿ ಹೆಸರು ಇಮಾಮ್ ಹುಸೇನ್. ಎಂದಿನಂತೆ ಮನೆಯಲ್ಲಿ ಎಣ್ಣೆ ಹೊಡೆದು ಊಟ ಮಾಡಿ ಮಲಗಿದ್ದಾನೆ. ಎದುರು ಮನೆ ಯುವಕ ಕೆಂಚಪ್ಪಗೆ ಅದೆಲ್ಲಿಯ ಸಿಟ್ಟಿತ್ತೋ ಗೋತ್ತಿಲ್ಲ. ರಾತ್ರಿ ಏಕಾಏಕಿ ಚಾಲು ಹಿಡಿದು ಮನೆಗೆ ನುಗ್ಗಿ ಇಮಾಮ್ ಹುಸೇನ್ ಎಂಬಾತನ ಹೊಟ್ಟೆಗೆ ಚೂರಿಯಿಂದ ಇರಿದ್ದಾನೆ.
ಇನ್ನು ಹೊಟ್ಟೆ ಭಾಗದಲ್ಲಿ ನಾಲ್ಕೈದು ಬಾರಿ ಪದೇ ಪದೇ ಇರಿದಿದ್ದು, ರಕ್ತದ ಮಡುವಿನಲ್ಲಿ ಬಿದ್ದು ಮೆನಯಂಗಳದಲ್ಲಿ ವಿಲವಿಲ ಅಂತ ಒದ್ದಾಡುತ್ತಿದ್ದ. ಕೂಡಲೇ ವ್ಯಕ್ತಿಯನ್ನ ಸ್ಥಳೀಯರು, ಪೊಲೀಸರು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸ್ಥಿತಿ ಚಿಂತಾಜನಕ ಇದ್ದ ಕಾರಣ ಜಿಮ್ಸ್ ವೈದ್ಯರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ(ಮೇ.5) ನಸುಕಿನ ಜಾವ ಮೃತ ಪಟ್ಟಿದ್ದಾನೆ.
ಇದನ್ನೂ ಓದಿ:ಪ್ರವೀಣ್ ನೆಟ್ಟಾರು ಕೊಲೆ ಕೇಸ್: ಮತ್ತಿಬ್ಬರ ವಿರುದ್ದ ಚಾರ್ಜ್ಶೀಟ್, ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು
ಅಷ್ಟಕ್ಕೂ ಇಮಾಮ್ ಹುಸೇನ್ ಕೊಲೆಗೆ ಕಾರಣವೇನು?
ಅಷ್ಟಕ್ಕೂ ಇಮಾಮ್ ಹುಸೇನ್ ಕೊಲೆಗೆ ಕಾರಣ ಕೇಳಿದ್ರೆ, ನೀವು ಬೆಚ್ಚಿಬಿಳ್ತೀರಾ. ಇಮಾಮಾ ಸಾಬ್ ಒಬ್ಬನೆ ಮನೆಯಲ್ಲಿ ಇರ್ತಿದ್ದ. ಆಗಾಗ ಕುಡಿದು ಬಂದು ಪತ್ನಿಗೆ ಕಿರುಕುಳ ನೀಡ್ತಾಯಿದ್ದನಂತೆ. ಹೀಗಾಗಿ ಪತ್ನಿಯೂ ಎರಡು ದಿನಗಳ ಹಿಂದೆ ಊರಿಗೆ ಹೋಗಿದ್ದಾಳೆ. ಆಮೇಲೆ ಆರೋಪಿ ಕೆಂಚಪ್ಪ ಪತ್ನಿ ಕೂಡ ಮನೆಯಿಂದ ಹೋಗಿದ್ದಾಳೆ. ಹೀಗಾಗಿ ನನ್ನ ಪತ್ನಿ ಮನೆಬಿಟ್ಟು ಹೋಗಲು ಈತನೇ ಕಾರಣವೆಂದು ಅನುಮಾನಗೊಂಡ ಕಿರಾತಕ ಕೆಂಚಪ್ಪ ನಿನ್ನೆ(ಮೇ.4) ರಾತ್ರಿ ಏಕಾಏಕಿ ಮನೆಗೆ ನುಗ್ಗಿ ಚಾಕೂವಿನಿಂದ ಎರ್ಯಾಬಿರ್ರಿ ಇರಿದಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಅಮಾಯಕ ಇಮಾಮ್ ಹುಸೇನ್ನನ್ನು ಕೊಂದು ಹಾಕಿದ್ದಾನೆ. ಅನುಮಾನದ ಹುತ್ತ ತಲೆಯಲ್ಲಿ ಇಟ್ಟುಕೊಂಡ ಕೆಂಚಪ್ಪ, ಇಮಾಮ್ ಹುಸೇನ್ನನ್ನು ಕೊಂದು ಎಸ್ಕೇಪ್ ಆಗಿದ್ದ. ತಕ್ಷಣ ಅಲರ್ಟ್ ಆದ ಗದಗ ಶಹರ ಪೊಲೀಸ್ ಠಾಣೆ ಪೊಲೀಸರು ಕಿರಾತಕ ಕೆಂಚಪ್ಪನನ್ನು ಹೆಡೆಮುರಿ ಕಟ್ಟಿದ್ದಾರೆ.
ಇದನ್ನೂ ಓದಿ:Mukhtar Ansari: ಅಪಹರಣ, ಕೊಲೆ ಪ್ರಕರಣದಲ್ಲಿ ದೋಷಿ ಮುಖ್ತಾರ್ ಅನ್ಸಾರಿಗೆ 10 ವರ್ಷ ಜೈಲು ಶಿಕ್ಷೆ
ಇನ್ನು ಆರೋಪಿ ಕೆಂಚಪ್ಪನ ಪತ್ನಿ ನಂಬರ್ ಕೊಲೆಯಾದ ಇಮಾಮ್ ಹುಸೇನ್ ಮೊಬೈಲ್ನಲ್ಲಿ ಇತ್ತಂತೆ. ಇದು ಪೊಲೀಸ್ ತನಿಖೆಯ ವೇಳೆ ಗೊತ್ತಾಗಿದೆ. ಆದ್ರೆ, ಯಾವುದೇ ರೀತಿಯ ಸಂಬಂಧ ಕೊಲೆಯಾದ ವ್ಯಕ್ತಿ ಹಾಗೂ ಕೊಲೆಗಾರನ ಪತ್ನಿ ನಡುವೆ ಇರಲಿಲ್ಲವಂತೆ. ಆರೋಪಿ ಕೆಂಚಪ್ಪನ ತೆಲೆಯಲ್ಲಿ ಸಂಶಯವೇ ಇಮಾಮ್ ಹುಸೇನ್ ನನ್ನು ಕೊಂದು ಹಾಕುವಂತೆ ಮಾಡಿದೆ. ಏನೇ ಇರಲಿ ಇಮಾಮ್ ಹುಸೇನ್ ಕೊಲೆಗೆ ನಿಖರ ಕಾರಣ ಪೊಲೀಸ್ ತನಿಖೆಯಿಂದಲೇ ಗೋತ್ತಾಗಲಿದೆ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ