ಪ್ರವೀಣ್ ನೆಟ್ಟಾರು ಕೊಲೆ ಕೇಸ್​: ಮತ್ತಿಬ್ಬರ ವಿರುದ್ದ ಚಾರ್ಜ್​ಶೀಟ್​, ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

2022 ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ನಡೆದ ಒಂದು ಕೊಲೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಹಿಂದೂ ಪರ ಹೋರಾಟಗಾಗರು ಸ್ವತಃ ಬಿಜೆಪಿ ವಿರುದ್ದ ರೊಚ್ಚಿಗೇಳುವಂತೆ ಮಾಡಿತ್ತು, ಅವತ್ತಿನ ಸ್ಥಿತಿ. ಹೌದು ಇದೀಗ ಪ್ರವೀಣ್ ನೆಟ್ಟಾರು ಕೊಲೆ ಕೇಸ್ ತನಿಖೆ ನಡೆಸುತ್ತಿರುವ ಎನ್ ಐ ಎ ಮತ್ತಷ್ಟು ಸ್ಪೋಟಕ ಮಾಹಿತಿಗಳನ್ನು ಬಯಲಿಗೆ ತಂದಿದೆ.

ಪ್ರವೀಣ್ ನೆಟ್ಟಾರು ಕೊಲೆ ಕೇಸ್​: ಮತ್ತಿಬ್ಬರ ವಿರುದ್ದ ಚಾರ್ಜ್​ಶೀಟ್​, ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು
ಪ್ರವೀಣ್​ ನೆಟ್ಟಾರು
Follow us
ಕಿರಣ್ ಹನುಮಂತ್​ ಮಾದಾರ್
|

Updated on:May 05, 2023 | 8:22 AM

ಬೆಂಗಳೂರು: ಜುಲೈ 26, 2022 ರಂದು ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ನಡೆದ ಒಂದು ಕೊಲೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಹಿಂದೂ ಪರ ಹೋರಾಟಗಾಗರು ಸ್ವತಃ ಬಿಜೆಪಿ ವಿರುದ್ದ ರೊಚ್ಚಿಗೇಳುವಂತಾಗಿತ್ತು ಅವತ್ತಿನ ಸ್ಥಿತಿ. ಹೌದು ಪ್ರವೀಣ್ ನೆಟ್ಟಾರು(Praveen Nettaru) ಕೊಲೆ ಕೇಸ್ ತನಿಖೆ ನಡೆಸುತ್ತಿರುವ ಎನ್ ಐ ಎ(NIA) ಮತ್ತಷ್ಟು ಸ್ಪೋಟಕ ಮಾಹಿತಿಗಳನ್ನು ಬಯಲಿಗೆ ತಂದಿದೆ. ಪ್ರವೀಣ್ ನೆಟ್ಟಾರು ಕೊಲೆ ಕೇಸ್​ನಲ್ಲಿ ಇದುವರೆಗೆ ಎನ್​ಐಎ 21 ಅರೋಪಿಗಳನ್ನು ಅರೆಸ್ಟ್ ಮಾಡಿ, ಆರೋಪಿಗಳ ವಿರುದ್ದ ಚಾರ್ಶೀಟ್ ಸಲ್ಲಿಕೆ ಮಾಡಿತ್ತು. ಅದರ ಮುಂದಿನ ಭಾಗವಾಗಿ ಮತ್ತೆ ಇಬ್ಬರು ಅರೋಪಿಗಳಾದ ತುಫೈಲ್ ಎಂ ಹೆಚ್ ಮತ್ತು ಮಹಮ್ಮದ್ ಜಬೀರ್ ವಿರುದ್ದ ಇದೀಗ ಪೂರಕ ಚಾರ್ಜ್​ರ್ಶೀಟ್​ನ್ನು ಎನ್ ಐ ಎ ವಿಶೇಷ ನ್ಯಾಯಾಲಯ ದೆಹಲಿಗೆ ಸಲ್ಲಿಕೆ ಮಾಡಿದೆ.

ತನಿಖೆ ಹಂತದಲ್ಲಿ ಸ್ಪೋಟಕ ಮಾಹಿತಿ; 2047ಕ್ಕೆ ಭಾರತದಲ್ಲಿ ಇಸ್ಲಾಮಿಸ್ ಆಳ್ವಿಕೆ ಜಾರಿಗೆ

ಹೌದು ಈ ವೇಳೆ ತನಿಖೆ ಹಂತದಲ್ಲಿ ಸ್ಪೋಟಕ ಮಾಹಿತಿಗಳನ್ನು ಬಯಲಿಗೆ ತಂದಿದೆ. ಪ್ರವೀಣ್ ನೆಟ್ಟಾರು ಕೊಲೆ ಹಿಂದೆ 2047ಕ್ಕೆ ಭಾರತದಲ್ಲಿ ಇಸ್ಲಾಮಿಸ್​ ಆಳ್ವಿಕೆಯನ್ನ ಜಾರಿಗೆ ತರುವ ತಯಾರಿಗಾಗಿ ನಡೆಸಿದ್ದ ಒಂದು ಕಾರ್ಯಾಚರಣೆ ಎಂದು ಎನ್ ಐ ಎ ಹೇಳಿದೆ. ಇಷ್ಟು ಮಾತ್ರವಲ್ಲದೆ ಮಸೂದ್ ಕೊಲೆಗೆ ಇದು ಒಂದು ಪ್ರತೀಕಾರ ಸಹ ಎನ್ನುವ ಅಂಶಗಳು ಬಹಿರಂಗವಾಗಿದೆ. ಕಳೆದ ವರ್ಷ ನಡೆದಿದ್ದ ಪ್ರವೀಣ್ ಹತ್ಯೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ರಾಜ್ಯದಲ್ಲಿ ಮಾಡಿದ್ದ ಪ್ಲಾನ್​ಗೆ ಸಿಕ್ಕಿದ್ದ ಸಕ್ಸಸ್, ಯಾಕಂದ್ರೆ, ಕೊಲೆಗೆ 2047 ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸುವ ಗುರಿ ಹೊಂದಿದ್ದ ಪಿಎಫ್ ಐ ಒಂದು ಸಮುದಾಯದ ಸದಸ್ಯರಲ್ಲಿ ಭಯೋತ್ಪಾದನೆಗೆ ತಯಾರಿ ನಡೆಸಿ, ಸಮಾಜದಲ್ಲಿ ಕೋಮು ದ್ವೇಷ ಮತ್ತು ಅಶಾಂತಿಯನ್ನು ಸೃಷ್ಟಿಸುವ PFI ನ ಕಾರ್ಯಸೂಚಿಯ ಭಾಗವಾಗಿಯೇ ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಿದ್ದು ಎನ್ನುವುದು ಸ್ಪಷ್ಟವಾಗಿದೆ.

ಇದನ್ನೂ ಓದಿ:ಪ್ರವೀಣ್ ನೆಟ್ಟಾರು ಹೊಸ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ

ಇನ್ನು PFI ತಾನು ಗ್ರಹಿಸಿದ ವ್ಯಕ್ತಿಗಳನ್ನು ಕೊಲ್ಲಲು ರಹಸ್ಯ ‘ಹಿಟ್ ಸ್ಕ್ವಾಡ್‌’ ಗಳನ್ನ ರಚನೆ ಮಾಡಿಕೊಂಡಿತ್ತು. ಕೊನೆಯದಾಗಿ ಅರೆಸ್ಟ್ ಅಗಿರುವ ಅರೋಪಿ ತುಫೈಲ್ ಕೊಡಗು ಜಿಲ್ಲೆಯ ಪಿಎಫ್‌ಐ ‘ಸೇವಾ ತಂಡ’ಗಳ ಉಸ್ತುವಾರಿಯಾಗಿದ್ದನಂತೆ. ಜೊತೆಗೆ ಶಸ್ತ್ರಾಸ್ತ್ರ ತರಬೇತಿ ಸೇರಿದಂತೆ ಅಡ್ವಾನ್ಸ್ ಟ್ರೈನಿಂಗ್ ನೀಡುವ ಪಿಎಫ್‌ಐ ಮಾಸ್ಟರ್ ಟ್ರೈನರ್ ಅಗಿದ್ದ ಎಂಬುದು ತನಿಖೆಯಿಂದ ಬಹಿರಂಗವಾಗಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಪ್ರೀಡಂ ಸಮುದಾಯ ಭವನದಲ್ಲಿ ಉಡುಪಿಯ ಕಾರ್ಯಕರ್ತರು ಇದ್ದರು ಅಲ್ಲಿಯೇ ಪ್ರವೀಣ್ ಕೊಲೆಗೆ ಅಂತಿಮವಾಗಿ ಯೋಜನೆ ಸಿದ್ದವಾಗಿದ್ದು, ಕೊಲೆಯ ಬಳಿಕ ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಮತ್ತು ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಮಾಡಿದ್ದ ಮೂವರು ಆರೋಪಿಗಳಿಗೆ ಆಶ್ರಯ ನೀಡಲಾಗಿತ್ತು. ಇದನ್ನು ಪುತ್ತೂರು ಪಿಎಫ್‌ಐ ಜಿಲ್ಲಾಧ್ಯಕ್ಷನಾಗಿದ್ದ ಆರೋಪಿ ಮಹಮ್ಮದ್ ಜಾಬಿರ್ ನೋಡಿಕೊಂಡಿದ್ದು ಹಾಗೂ ಕೊಲೆಗೂ ಮೊದಲು ನಡೆಸಿದ್ದ ಪ್ಲಾನಿಂಗ್ ಮೀಟಿಂಗ್​ನಲ್ಲಿ ಬಾಗಿಯಾಗಿದ್ದು ಪತ್ತೆಯಾಗಿದೆ.

ಕೊಲೆ ಮಾಡಿದ್ದ ಅರೋಪಿಗಳ ಪೈಕಿ ಮಹಮ್ಮದ್ ಜಾಬಿರ್ ಮಸೂದ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಹೇಳಿ ಪ್ರಚೋದನಕಾರಿ ಭಾಷಣವನ್ನೂ ಮಾಡಿದ್ದ ಎಂಬುದು ಎನ್ ಐ ಎ ತನಿಖೆ ವೇಳೆ ಪತ್ತಯಾಗಿದೆ. ಒಟ್ಟಾರೆ ಪ್ರವೀಣ್ ನೆಟ್ಟಾರು ಕೊಲೆ ಕೇವಲ ಒಂದು ಕಾರಣಕ್ಕೆ ಆಗಿದ್ದಲ್ಲ, ಬದಲಾಗಿ ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆಯನ್ನು ತರುವ ಉದ್ದೇಶಕ್ಕೆ ಪೂರಕವಾಗಿ ಇಟ್ಟಿದ್ದ ಹೆಜ್ಜೆಗುರುತು ಎನ್ನುವುದು ಆತಂಕಕಾರಿ ವಿಷಯವಾಗಿದೆ. ಸದ್ಯ 21 ಅರೋಪಿಗಳ ವಿರುದ್ದ ಈ ಕೇಸ್​ನಲ್ಲಿ ಚಾರ್ಜ್​ರ್ಶಿಟ್ ಸಲ್ಲಿಕೆ ಮಾಡಿರುವ ಎನ್ ಐ ಎ ಹೆಚ್ಚಿನ ತನಿಖೆ ನಡೆಸುತ್ತಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:19 am, Fri, 5 May 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್