ಮಂಗಳೂರಿನಲ್ಲಿ ನೀರಿನ ಸಮಸ್ಯೆ ಉಲ್ಬಣ: ಕಟ್ಟಡ ಕಾಮಗಾರಿ, ವೆಹಿಕಲ್ ವಾಶ್ ನಿಷೇಧ

ಸಾರ್ವಜನಿಕರಿಗೆ ಈ ಬೇಸಿಗೆಯ ಅಂತ್ಯದವರೆಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾಗದಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೇ 4 ರಿಂದ ರೇಷನಿಂಗ್ ಮೂಲಕ ನೀರು ಸರಬರಾಜು ಮಾಡುವುದು ಅನಿವಾರ್ಯವಾಗಿದೆ.

ಮಂಗಳೂರಿನಲ್ಲಿ ನೀರಿನ ಸಮಸ್ಯೆ ಉಲ್ಬಣ: ಕಟ್ಟಡ ಕಾಮಗಾರಿ, ವೆಹಿಕಲ್ ವಾಶ್ ನಿಷೇಧ
ತುಂಬೆ ಡ್ಯಾಂನಲ್ಲಿ ನೀರಿನ‌ ಮಟ್ಟ ಕುಸಿತ
Follow us
ಆಯೇಷಾ ಬಾನು
|

Updated on: May 04, 2023 | 9:31 AM

ಮಂಗಳೂರು: ಮಂಗಳೂರು ನಗರ ಹಾಗೂ ಸುತ್ತಾಮುತ್ತಲಿನ ಪ್ರದೇಶಗಳಿಗೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ(Thumbe Dam) ನಿರಂತರವಾಗಿ ನೀರು ಕಡಿಮೆಯಾಗುತ್ತಿದ್ದು ನೀರಿನ ಸಮಸ್ಯೆ(Water Crisis) ಎದುರಾಗುವ ಬಗ್ಗೆ ಈ ಹಿಂದೆ ವರದಿ ಮಾಡಲಾಗಿತ್ತು. ಈ ಸಂಬಂಧ ಜಿಲ್ಲಾಡಳಿತ ಸಭೆ ನಡೆಸಿ ಕೆಲವು ತೀರ್ಮಾನಗಳನ್ನು ತೆಗೆದುಕೊಂಡಿದೆ. ನೇತ್ರಾವತಿ ನದಿಯ ನೀರಿನ ಒಳಹರಿವು ಈಗಾಗಲೇ ನಿಂತಿರುವುದರಿಂದ ಮತ್ತು ಬೇಸಿಗೆ ಬಿರು ಬಿಸಿಲಿನಿಂದಾಗಿ ಮಂಗಳೂರು ನಗರ ಪಾಲಿಕೆಯ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿದೆ.

ಸಾರ್ವಜನಿಕರಿಗೆ ಈ ಬೇಸಿಗೆಯ ಅಂತ್ಯದವರೆಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾಗದಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೇ 4 ರಿಂದ ರೇಷನಿಂಗ್ ಮೂಲಕ ನೀರು ಸರಬರಾಜು ಮಾಡುವುದು ಅನಿವಾರ್ಯವಾಗಿದೆ. ಈ ಬಗ್ಗೆ ಸಾಧಕ ಭಾದಕಗಳನ್ನು ಪರಿಶೀಲಿಸಿ ಜಿಲ್ಲಾಡಳಿತ ಸಭೆ ನಡೆಸಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದೆ.

ಇದನ್ನೂ ಓದಿ: ತುಂಬೆ ಡ್ಯಾಂನಲ್ಲಿ ಕೇವಲ 20 ದಿನಗಳಿಗೆ ಆಗುವಷ್ಟು ಮಾತ್ರ ನೀರು ಸಂಗ್ರಹ, ಮಂಗಳೂರು ನಗರಕ್ಕೆ ಜಲಕ್ಷಾಮ ಸಾಧ್ಯತೆ

ಜಿಲ್ಲಾಡಳಿತ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಹೀಗಿವೆ

  • ಲಭ್ಯವಿರುವ ನೀರನ್ನು ಮಂಗಳೂರು ನಗರ ಪ್ರದೇಶಕ್ಕೆ (ಮಂಗಳೂರು ನಗರ ದಕ್ಷಿಣ) ಮತ್ತು ಸುರತ್ಕಲ್ ಪ್ರದೇಶಕ್ಕೆ (ಮಂಗಳೂರು ನಗರ ಉತ್ತರ ಭಾಗಕ್ಕೆ) ಪರ್ಯಾಯ ದಿನಗಳಲ್ಲಿ ನೀರು ಬಿಡಲು ನಿರ್ಣಯಿಸಲಾಗಿದೆ.
  • ಕಟ್ಟಡ ರಚನೆ, ಇತರ ನಿರ್ಮಾಣ ಕಾಮಗಾರಿಗಳು ಹಾಗೂ ವಾಹನ ತೊಳೆಯುವ ಸರ್ವಿಸ್ ಸೆಂಟರ್ ಗಳ ಜೋಡಣೆಯನ್ನು ಮುಂದಿನ ಸೂಚನೆಯವರೆಗೆ ಕಡಿತಗೊಳಿಸುವುದು.
  • ಸಾರ್ವಜನಿಕರು ನೀರನ್ನು ಅನವಶ್ಯಕವಾಗಿ ಪೋಲು ಮಾಡುವುದು ಕಂಡು ಬಂದಲ್ಲಿ ಯಾವುದೇ ಸೂಚನೆ ನೀಡದೆ, ಜೋಡಣೆ ಕಡಿತಗೊಳಿಸುವುದು.
  • ಮೇ 5ರಂದು ಮಂಗಳೂರು ನಗರ ಉತ್ತರಕ್ಕೆ, ಮೇ 6 ರಂದು ಮಂಗಳೂರು ನಗರ ದಕ್ಷಿಣ, ನಂತರ ಕ್ರಮಾನುಗತವಾಗಿ ಮೇಲೆ ತಿಳಿಸಿದಂತೆ ನೀರು ಪೂರೈಕೆ ಮಾಡಲು ನಿರ್ಧರಿಸಲಾಗಿರುತ್ತದೆ.
  • ಲಭ್ಯವಿರುವ ನೀರನ್ನು ಮೇಲೆ ತಿಳಿಸಿದಂತೆ ಪೂರೈಕೆ ಮಾಡುವುದು ಅನಿವಾರ್ಯವಾಗಿದ್ದು ಸಾರ್ವಜನಿಕರು ಮೇಲಿನ ವಿಷಯವನ್ನು ಮನಗಂಡು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸುವಂತೆ ಪಾಲಿಕೆಯ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಪ್ರಕಟಣೆ ಹೊರಡಿಸಲಾಗಿದೆ.

    ಮಂಗಳೂರಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ