ಎಳೆಮಗು ಲಿಂಡ್ಬರ್ಗ್ ಜ್ಯೂನಿಯರ್ ಅಪಹರಣ ಮತ್ತು ಕೊಲೆಯ ವಿಚಾರಣೆ ಈಗಲೂ ‘ಶತಮಾನದ ವಿಚಾರಣೆ’ ಅನಿಸಿಕೊಳ್ಳುತ್ತದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 11, 2022 | 8:00 AM

ಲಿಂಡ್ಬರ್ಗ್ ತಾವು ಕೂತ ಸ್ಥಳದಿಂದ ಎದ್ದು ತಮ್ಮ ಮಗ ಮಲಗಿದ್ದ ಕೋಣೆಗೆ ಹೋದಾಗ ಕಿಟಕಿಯಲ್ಲಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಪತ್ರ, ಮತ್ತು ಹೊರಭಾಗದಲ್ಲಿ ಒಂದು ಮುರಿದ ಏಣಿ ಕಾಣಿಸಿತು. ಮಗು ಬೇಕಾದರೆ 50,000 ಡಾಲರ್ ಕೊಡಬೇಕು ಅಂತ ಪತ್ರದಲ್ಲಿ ಬರೆಯಲಾಗಿತ್ತು.

ಎಳೆಮಗು ಲಿಂಡ್ಬರ್ಗ್ ಜ್ಯೂನಿಯರ್ ಅಪಹರಣ ಮತ್ತು ಕೊಲೆಯ ವಿಚಾರಣೆ ಈಗಲೂ ‘ಶತಮಾನದ ವಿಚಾರಣೆ’ ಅನಿಸಿಕೊಳ್ಳುತ್ತದೆ!
ಚಾರ್ಲ್ಸ್ ಆಗಸ್ತಸ್ ಲಿಂಡ್ಬರ್ಗ್ ಜ್ಯೂನಿಯರ್
Follow us on

ಚಿಕ್ಕ ಮಗುವೊಂದನ್ನು ಹಣಕ್ಕಾಗಿ ಅಪಹರಿಸಿ ಕೇಳಿದಷ್ಟು ದುಡ್ಡು ಸಿಕ್ಕರೂ ವಿನಾಕಾರಣ ಮಗುವನ್ನು ಅತ್ಯಂತ ಅಮಾನುಷವಾಗಿ ಕೊಂದು ಪುಟ್ಟ ದೇಹವನ್ನು ನಾಯಿ ನರಿಗಳಿಗೆ ಆಹಾರವಾಗಲು ಎಸೆದ ಈ ಪ್ರಕರಣ ಅಮೆರಿಕದಲ್ಲಿ ಒಂದು ಹೊಸ ಕಾನೂನು ಸೃಷ್ಟಿಗೆ ಕಾರಣವಾಯಿತು ಮತ್ತು ಪ್ರಕರಣದ ವಿಚಾರಣೆಯನ್ನು ‘ಶತಮಾನದ ವಿಚಾರಣೆ’ (Trial of the Century) ಎಂದು ಈಗಲೂ ಉಲ್ಲೇಖಿಸಲಾಗುತ್ತದೆ. ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ನಾವಿಂದು ತನ್ನ ಎರಡನೇ ಹುಟ್ಟುಹಬ್ಬ ಆಚರಿಸಿಕೊಳ್ಳಲು ಇನ್ನೂ 4 ತಿಂಗಳಿರುವಾಗ ಕೊಲೆಯಾದ ಚಾರ್ಲ್ಸ್ ಆಗಸ್ತಸ್ ಲಿಂಡ್ಬರ್ಗ್(Charles Augustus Lindberg Jr.) ಹೆಸರಿನ ಮಗುವಿನ ಕತೆಯನ್ನು ಹೇಳುತ್ತಿದ್ದೇವೆ. ಇದು ಅಮೆರಿಕ ಇತಿಹಾಸದ ಪ್ರಖ್ಯಾತ ಪ್ರಕರಣಗಳಲ್ಲಿ (famous case) ಒಂದು ಅತ ಹೇಳಿದರೆ ಉತ್ಪ್ರೇಕ್ಷೆ ಅನಿಸದು.

ಮಗು ನಾಪತ್ತೆಯಾಗಿತ್ತು!

ಮಾರ್ಚ್1, 1932 ರಂದು ಆ ಜಮಾನಾದ ಜನಪ್ರಿಯ ಪೈಲಟ್ ಎನಿಸಿಕೊಂಡಿದ್ದ ಮತ್ತು ಅಟ್ಲಾಂಟಿಕ್ ಸಾಗರದ ಮೇಲಿಂದ ಒಂಟಿಯಾಗಿ ವಿಮಾನ ಹಾರಿಸಿಕೊಂಡು ಬಂದಿದ್ದ ಚಾರ್ಲ್ಸ್ ಲಿಂಡ್ಬರ್ಗ್ ಸೀನಿಯರ್ ತಮ್ಮ ಮನೆಯ ಹಾಲ್ ನಲ್ಲಿ ಕುಳಿತು ಪುಸ್ತವೊಂದನ್ನು ಓದುತ್ತಿದ್ದಾಗ, ಆಡುಗೆ ಕೋಣೆಯಿಂದ ಕಟ್ಟಿಗೆಯ ಡಬ್ಬವೊಂದರ ಮುಚ್ಚಳವನ್ನು ಜೋರಾಗಿ ಮುಚ್ಚಿದ ಶಬ್ದ ಕೇಳಿಸಿತು. ಕುಟುಂಬದ ನರ್ಸ್ ಆಗಿದ್ದ ಮಹಿಳೆಯೊಬ್ಬರು ಬೆಡ್ ರೂಮಿನಲ್ಲಿದ್ದ ತೊಟ್ಟಿಲಲ್ಲಿ ಮಲಗಿದ್ದ ಚಾರ್ಲ್ಸ್ ಲಿಂಡ್ಬರ್ಗ್ ಸೀನಿಯರ್ ಅವರ 20-ತಿಂಗಳು-ಪ್ರಾಯದ ಮಗ ಚಾರ್ಲ್ಸ್ ಲಿಂಡ್ಬರ್ಗ್ ಜ್ಯೂನಿಯರ್ ನಾಪತ್ತೆಯಾಗಿದ್ದ.

ಲಿಂಡ್ಬರ್ಗ್ ತಾವು ಕೂತ ಸ್ಥಳದಿಂದ ಎದ್ದು ತಮ್ಮ ಮಗ ಮಲಗಿದ್ದ ಕೋಣೆಗೆ ಹೋದಾಗ ಕಿಟಕಿಯಲ್ಲಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಪತ್ರ, ಮತ್ತು ಹೊರಭಾಗದಲ್ಲಿ ಒಂದು ಮುರಿದ ಏಣಿ ಕಾಣಿಸಿತು. ಮಗು ಬೇಕಾದರೆ 50,000 ಡಾಲರ್ ಕೊಡಬೇಕು ಅಂತ ಪತ್ರದಲ್ಲಿ ಬರೆಯಲಾಗಿತ್ತು.

ಎರಡು ತಿಂಗಳು ಹುಡುಕಿದ ಎಫ್​ ಬಿ ಐ!

ಮುಂದಿನ ಎರಡು ಮೂರು ತಿಂಗಳು ಕಾಲ ಲಿಂಡ್ಬರ್ಗ್ ಕುಟುಂಬವು ಎಫ್ ಬಿ ಐ (ಫೆಡರಲ್ ಬ್ಯುರೊ ಅಫ್ ಇನ್ವಸ್ಟಿಗೇಷನ್) ಜೊತೆ ಸೇರಿ ಮಗುಗಾಗಿ ಹುಡುಕಾಟದ ಸ್ಥಳವಿರಲಿಲ್ಲ. ಅಷ್ಟು ಮಾತ್ರವಲ್ಲ, ಲಿಂಡ್ಬರ್ಗ್ ಸೀನಿಯರ್ ಅಪಹರಣಕಾರ ಕೇಳಿದಷ್ಟು ಹಣವನ್ನು ಸಹ ತಲುಪಿಸಿದ್ದರು. ಆದರೆ, 50,000 ಡಾಲರ್ ನೀಡಿದರೆ ಮಗುವನ್ನು ವಾಪಸ್ಸು ಕೊಡುವುದಾಗಿ ಹೇಳಿದ್ದ ಅಪಹರಣಕಾರ ತನ್ನ ಮಾತು ಉಳಿಸಿಕೊಳ್ಳಲಿಲ್ಲ. ಲಿಂಡ್ಬರ್ಗ್ ಸೀನಿಯರ್ ತಮ್ಮ ಮಗನನ್ನು ಯಾವತ್ತೂ ನೋಡಲಿಲ್ಲ.

ಸುಮಾರು ಎರಡೂವರೆ ತಿಂಗಳು ನಂತರ ನಿಖರವಾಗಿ ಹೇಳಬೇಕೆಂದರೆ, ಮೇ 12, 1932 ರಂದು ಲಿಂಡ್ಬರ್ಗ್ ಸೀನಿಯರ್ ಮಗನ ದೇಹದ ಪುಟ್ಟ ಪುಟ್ಟ ಅವಶೇಷಗಳು ಲಿಂಡ್ಬರ್ಗ್ ಕುಟುಂಬದ ಒಡೆತನದಲ್ಲಿದ್ದ ಎಸ್ಟೇಟ್ ಬಳಿ ಪತ್ತೆಯಾಗಿದ್ದವು.
ಎರಡು ತಿಂಗಳು ಹಿಂದೆ ನಾಪತ್ತೆಯಾಗಿದ್ದ ಮಗು ಅಪಹರಣಗೊಂಡ ದಿನವೇ ಸಾವಿಗೀಡಾಗಿರಬಹುದೆಂದು ಪೊಲೀಸರು ತರ್ಕಿಸಿದರು.

ಬುರುಡೆಯಲ್ಲಿ ರಂಧ್ರ!

ಮಗುವಿನ ಬುರಡೆಯಲ್ಲಿ ಒಂದು ರಂಧ್ರ ಪತ್ತೆಯಾಗಿತ್ತು ಅದರ ಎಳೆಯ ಮೂಳೆಗಳನ್ನು ಮುರಿಯಲ್ಪಟ್ಟಿದ್ದವು. ಪ್ರಾಣಿ ಮತ್ತು ಕ್ರಿಮಿಕೀಟಗಳು ಮಗುವಿನ ದೇಹವನ್ನು ತಿಂದುಬಿಟ್ಟಿದ್ದವು.

ಜರ್ಮನಿಯಿಂದ ಅಮೆರಿಕಾಗೆ ವಲಸೆ ಹೋಗಿ ಅಲ್ಲಿನ ನಿವಾಸಿಯಾಗಿದ್ದ ಮತ್ತು ಅಪರಾಧ ಹಿನ್ನೆಲೆ ಹೊಂದಿದ್ದ ರಿಚರ್ಡ್ ಹಾಪ್ಟ್ ಮನ್ ಮಗುವನ್ನು ಅಪಹರಿಸಿ ಕೊಂದಿದ್ದು ಅನ್ನೋದನ್ನಿ ಪೊಲೀಸರು ಪತ್ತೆ ಮಾಡಿದರು. ಲಿಂಡ್ಬರ್ಗ್ ನೀಡಿದ ಹಣದಲ್ಲಿ ಒಂದಷ್ಟು ಭಾಗವನ್ನು ಉಪಯೋಗಿಸಿದ ನಂತರ ಹಾಪ್ಟ್ ಮನ್ ಪೊಲೀಸರಿಗೆ ಸೆರೆಸಿಕ್ಕಿದ್ದ.

ಶತಮಾನದ ವಿಚಾರಣೆ!

ಲಿಂಡ್ಬರ್ಗ್ ಜ್ಯೂನಿಯರ್ ಅಪಹರಣ ಮತ್ತು ನಂತರ ನಡೆದ ವಿಚಾರಣೆ ತೀವ್ರ ಸಾರ್ವಜನಿಕ ಕುತೂಹಲ ಸೃಷ್ಟಿಸಿತ್ತು. ಇದೇ ವಿಚಾರಣೆಯನ್ನು ‘ಶತಮಾನದ ವಿಚಾರಣೆ’ ಉಲ್ಲೇಖಿಸಲಾಗುತ್ತದೆ. ಅಂತಿಮವಾಗಿ, ಏಪ್ರಿಲ್ 3, 1936 ರಂದು ನ್ಯಾಯಾಲಯ ರಿಚರ್ಡ್ ಹಾಪ್ಟ್ ಮನ್ ನನ್ನು ದೋಷಿಯೆಂದು ಘೋಷಿಸಿ ಅವನಿಗೆ ಗಲ್ಲು ಶಿಕ್ಷೆ ವಿಧಿಸಿತು.

ಲಿಂಡ್ಬರ್ಗ್ ಜ್ಯೂನಿಯರ್ ಪ್ರಕರಣವು ಅಮೆರಿಕದ ಸಂಸತ್ತಿಗೆ ಫೆಡರಲ್ ಕಿಡ್ನ್ಯಾಪಿಂಗ್ ಌಕ್ಟ್, 1932 ರೂಪಿಸುವ ಸನ್ನಿವೇಶ ಸೃಷ್ಟಸಿತು. ಹೊಸ ಕಾನೂನಿನ ಪ್ರಕಾರ ಅಪಹೃತ ವ್ಯಕ್ತಿಯನ್ನು ಒಂದು ರಾಜ್ಯಂದಿಂದ ಮತ್ತೊಂದು ರಾಜ್ಯಕ್ಕೆ ಸಾಗಿಸುವುದು ಅಕ್ರಮ. ಎನಸಿಕೊಳ್ಳುತ್ತದೆ. ಸದರಿ ಕಾನೂನನ್ನು ಆಡುಭಾಷೆಯಲ್ಲಿ ಅಮೆರಿಕನ್ನರು ಲಿಂಡ್ಬರ್ಗ್ ಲಾ ಎಂದು ಉಲ್ಲೇಖಿಸುತ್ತಾರೆ.