Gang-Rape Case ಸಾಮೂಹಿಕ ಅತ್ಯಾಚಾರ ಪ್ರಕರಣ: ಹಿರಿಯ ಐಎಎಸ್ ಅಧಿಕಾರಿ ಅರೆಸ್ಟ್
ಸಾಮೂಹಿಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಪ್ರಕರಣದಲ್ಲಿ ಹಿರಿಯ ಐಎಎಸ್ ಅಧಿಕಾರಿಯನ್ನು ಎಸ್‌ಐಟಿ ಅರೆಸ್ಟ್ ಮಾಡಿದೆ.
ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ (Gang-Rape Case) ಕೇಂದ್ರಾಡಳಿತ ಪ್ರದೇಶ ಅಂಡಮಾನ್ ಮತ್ತು ನಿಕೋಬಾರ್ (Andaman & Nicobar) ಮುಖ್ಯಕಾರ್ಯದರ್ಶಿಯಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಜಿತೇಂದ್ರ ನರೇನ್ ಅವರನ್ನ ಎಸ್‌ಐಟಿ ಬಂಧಿಸಿದೆ. ಕೋರ್ಟ್ ಜಾಮೀನು ಅರ್ಜಿ ವಜಾ ಮಾಡಿದ ಬೆನ್ನಲ್ಲೇ ವಿಶೇಷ ತನಿಖಾ ತಂಡ (ಎಸ್‌ಐಟಿ) ಜಿತೇಂದ್ರ ನರೇನ್ ಅವರನ್ನು ಇಂದು(ನ.10) ಅರೆಸ್ಟ್ ಮಾಡಿದೆ.
ಮುರುಘಾ ಶ್ರೀಗಳ ಮತ್ತಷ್ಟು ಕಾಮಕೂಟ ಬಿಚ್ಚಿಟ್ಟ ಆಪ್ತರು: ಅಡುಗೆಭಟ್ಟ, ಸಹಾಯಕ, ಆಫೀಸ್ ಬಾಯ್ ಹೇಳಿಕೆ ಇಲ್ಲಿದೆ
ಜಾಮೀನಿಗಾಗಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಜಿತೇಂದ್ರ ನರೈನ್ ಪರ ವಕೀಲರಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಅದರಂತೆ ಜಿತೇಂದ್ರ ನರೇನ್ ಪರ ವಕೀಲರು ಸ್ಥಳೀಯ ನ್ಯಾಯಾಲಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದ್ರೆ, ಕೋರ್ಟ್ ಅವರು ಜಾಮೀನು ಅರ್ಜಿಯನ್ನು ವಜಾ ಮಾಡಿದೆ.
ಪ್ರಕರಣದ ಹಿನ್ನೆಲೆ 21 ವರ್ಷದ ಯುವತಿಯೊಬ್ಬರು ಜಿತೇಂದ್ರ ಹಾಗೂ ಕಾರ್ಮಿಕ ಆಯುಕ್ತ RL ರಿಷಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ನಂತರ ನರೇನ್ ಹೆಸರು ಬೆಳಕಿಗೆ ಬಂದಿತ್ತು. ನರೇನ್ ಮತ್ತು ಕಾರ್ಮಿಕ ಆಯುಕ್ತ ಆರ್ ಎಲ್ ರಿಷಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ದೂರು ನೀಡಿದ್ದಳು.
ಹೋಟೆಲ್ ಮಾಲೀಕರೊಬ್ಬ ಮೂಲಕ ಯುವತಿಗೆ ರಿಷಿ ಪರಿಚಯವಾಗಿತ್ತು, ನಂತರ ರಿಷಿ ನರೇನ್‌ರ ಮನೆಗೆ ಕರೆದುಕೊಂಡು ಹೋದರು. ಅದಾದ ಬಳಿಕ ಅಲ್ಲಿ ಮದ್ಯಪಾನ ಮಾಡುವಂತೆ ನರೇನ್ ಹೇಳಿದರು. ಯುವತಿ ಅದನ್ನು ತಿರಸ್ಕರಿಸಿದರು. ಸರ್ಕಾರಿ ನೌಕರಿ ನೀಡುವುದಾಗಿ ಭರವಸೆ ನೀಡಿದ ಅವರು ನಂತರ ಅತ್ಯಾಚಾರ ಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು. ಈ ದೂರಿನ ನಂತರ ತನಿಖೆ ನಡೆದಿದ್ದು ಅದರ ವರದಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಯುವತಿಯರನ್ನು ಇದೇ ರೀತಿ ಲೈಂಗಿಕವಾಗಿ ಬಳಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ತನಿಖೆಯಲ್ಲಿ ಆರೋಪ ಸಾಬೀತಾದ ಬೆನ್ನಲ್ಲೇ ನರೇನ್‌ರನ್ನು ಅಮಾನತ್ತು ಮಾಡಲಾಗಿತ್ತು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:14 pm, Thu, 10 November 22