ಖಾತೆಯಲ್ಲಿದ್ದ ಹಣ ಕೊಡಲು ನಿರಾಕರಿಸಿದಕ್ಕೆ ಮಚ್ಚಿನಿಂದ ಹಲ್ಲೆಗೆ ಯತ್ನ
ದೊಡ್ಡಬಳ್ಳಾಪುರ: ಖಾತೆದಾರರೊಬ್ಬರು ಬ್ಯಾಂಕ್ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ. ತಮ್ಮ ಖಾತೆಯಲ್ಲಿದ್ದ 240 ರೂ ಹಣವನ್ನ ಕೊಡಲು ನಿರಾಕರಿಸಿದಕ್ಕೆ ಹಲ್ಲೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಬ್ಯಾಂಕ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರು. ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಕಾರ್ಪೋರೆಷನ್ ಬ್ಯಾಂಕ್ ನಲ್ಲಿ ಘಟನೆ ನಡದಿದೆ. ಆರೋಪಿಯ ಖಾತೆ ಕಳೆದೊಂದು ವರ್ಷದಿಂದ ಲಾಕ್ ಆಗಿತ್ತು. ತಾಲೂಕಿನ ದುರ್ಗೆನಹಳ್ಳಿಯ ಕುಮಾರ್ ಹಲ್ಲೆಗೆ ಯತ್ನಿಸಿದ ಖಾತೆದಾರರು. ಹಲ್ಲೆ ಮಾಡಲು ಬಂದವನನ್ನ ಸ್ಥಳಿಯರು ಹಿಡಿದು ಥಳಿಸಿದ್ದಾರೆ. ನಂತರ ಆರೋಪಿಯನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆ […]
ದೊಡ್ಡಬಳ್ಳಾಪುರ: ಖಾತೆದಾರರೊಬ್ಬರು ಬ್ಯಾಂಕ್ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ. ತಮ್ಮ ಖಾತೆಯಲ್ಲಿದ್ದ 240 ರೂ ಹಣವನ್ನ ಕೊಡಲು ನಿರಾಕರಿಸಿದಕ್ಕೆ ಹಲ್ಲೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಬ್ಯಾಂಕ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರು. ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಕಾರ್ಪೋರೆಷನ್ ಬ್ಯಾಂಕ್ ನಲ್ಲಿ ಘಟನೆ ನಡದಿದೆ.
ಆರೋಪಿಯ ಖಾತೆ ಕಳೆದೊಂದು ವರ್ಷದಿಂದ ಲಾಕ್ ಆಗಿತ್ತು. ತಾಲೂಕಿನ ದುರ್ಗೆನಹಳ್ಳಿಯ ಕುಮಾರ್ ಹಲ್ಲೆಗೆ ಯತ್ನಿಸಿದ ಖಾತೆದಾರರು. ಹಲ್ಲೆ ಮಾಡಲು ಬಂದವನನ್ನ ಸ್ಥಳಿಯರು ಹಿಡಿದು ಥಳಿಸಿದ್ದಾರೆ. ನಂತರ ಆರೋಪಿಯನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.