ಬೆಂಗಳೂರು: ಓರ್ವ ಯುವತಿ ಮತ್ತು ಇಬ್ಬರು ಯುವಕರನ್ನು ಸುಲಿಗೆಕೋರರ ಗ್ಯಾಂಗ್ವೊಂದು ಅಪರಣ ಮಾಡಿರುವ ಘಟನೆ ಬನ್ನೇರುಘಟ್ಟ ರಸ್ತೆಯ ದೇವರಚಿಕ್ಕನಹಳ್ಳಿ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಜುನಾಥ್ ಮತ್ತು ರಜನೀಕಾಂತ್ ಅಪರಣವಾಗಿದ್ದ ಯುವಕರು. ಸದ್ಯ ಆರೋಪಿಗಳನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ತಿರುಮಲೇಶ್, ನವೀನ್. ಕೆಂಪರಾಜು. ಮುಖೇಶ್, ಮಂಜುನಾಥ್ ಭರತ್. ಧಲ್ಫೀರ್ ಸೌದ್ ಅಲಿಯಾಸ್ ದೀಪು. ಮತ್ತು ಪ್ರಿಯಾ ಬಂಧಿತ ಆರೋಪಿಗಳು.
ಫೆ. 17 ರಂದು ಮಂಜುನಾಥ್ ಮತ್ತು ರಜನೀಕಾಂತ್ ಸ್ನೇಹಿತರು ಓರ್ವ ಯುವತಿಯನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಬನ್ನೇರುಘಟ್ಟ ರಸ್ತೆಯಲ್ಲಿರುವ ಹೊಟೇಲ್ಗೆ ಹೋಗಿದ್ದರು. ಫೆಬ್ರವರಿ 17ರ ರಾತ್ರಿ ಸುಮಾರು 1.30ಕ್ಕೆ ವಾಪಸ್ ಮನೆಗೆ ತೆರಳಲೆಂದು ಯುವತಿ ಹಾಗೂ ಯುವಕರು ಹೊಟೇಲ್ ಬಳಿ ನಿಂತಿದ್ದರು. ಈ ವೇಳೆ ಯುವತಿ ಪ್ರಿಯಾ ಆರೋಪಿಗಳಿಗೆ ಹೊಟೇಲ್ ಲೊಕೇಶನ್ ಕಳುಹಿಸಿದ್ದಾಳೆ. ಯುವತಿ ಲೋಕೇಷನ್ ಕಳುಹಿಸಿದ ಸ್ಥಳಕ್ಕೆ ಸುಲಿಗೆಕೋರರ ಗ್ಯಾಂಗ್ 4 ಬೈಕ್ಗಳಲ್ಲಿ ಬಂದು ನಮ್ಮ ಗಾಡಿಗೆ ಡಿಕ್ಕಿ ಹೊಡೆದಿದ್ದೀಯಾ ಎಂದು ಗಲಾಟೆಯ ನಾಟಕವಾಡಿದ್ದರು. ನಂತರ ಆರೋಪಿಗಳು, ಯುವತಿ ಸೇರಿ ಮೂವರನ್ನು, ಮಂಜುನಾಥ್ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದರು. ಈ ವೇಳೆ ಮಂಜುನಾಥ್ ಕಾರಿನಿಂದ ಹಾರಿ ತಪ್ಪಿಸಿಕೊಂಡಿದ್ದರು. ನಂತರ ಯುವತಿ ಪ್ರಿಯಾ ಮತ್ತು ಯುವಕ ರಜನಿಕಾಂತ್ನನ್ನು ಮಂಡ್ಯ, ಮೈಸೂರು ಮೂಲಕ ನಂಜನಗೂಡಿಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಅಲ್ಲಿ ರಜನೀಕಾಂತ್ ಬಿಡುಗಡೆಗೆ 5 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ: ಗೆಳತಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪ್ರಿಯಕರ, ಚಿಕಿತ್ಸೆ ಫಲಿಸದೆ ಮಹಿಳೆ ಆಸ್ಪತ್ರೆಯಲ್ಲಿ ಸಾವು
ಇತ್ತ ಮಂಜುನಾಥ್ ಕೋಳಿಫಾರಂ ಗೇಟ್ ಬಳಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದರು. ವಿಷಯ ತಿಳಿದ ಬೇಗೂರು ಪೊಲೀಸರು ರಾತ್ರೋರಾತ್ರಿ ಆರೋಪಿಗಳ ಬೆನ್ನು ಬಿದ್ದಿದ್ದಾರೆ. ಆಗ ಪೊಲೀಸರಿಗೆ ನಂಜನಗೂಡು ಬಳಿ ಆರೋಪಿಗಳು ಇರುವುದು ತಿಳಿದಿದೆ. ಕೂಡಲೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಿಡ್ನಾಪ್ ಮಾಡಿದ 8 ಜನರನ್ನು ಹೆಡೆಮುರಿ ಕಟ್ಟಿ ಕಂಬಿ ಹಿಂದೆ ತಳ್ಳಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಕಿಡ್ನಾಪ್ ಆಗಿದ್ದ ಯುವತಿ ಪ್ರಿಯಾ ಕಾಲ್ ಗರ್ಲ್ ಎಂದು ಬೆಳಕಿಗೆ ಬಂದಿದೆ. ಮಂಜುನಾಥ್ ಮತ್ತು ರಜನೀಕಾಂತ್ ಯುವತಿಯನ್ನ ಕೆಂಗೇರಿಯಿಂದ ಕರೆತಂದಿದ್ದರು ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಕಿಡ್ನಾಪ್ ಆರೋಪಿಗಳನ್ನು ಹಾಗೂ ದೂರುದಾರರನ್ನು ವಿಚಾರಣೆ ನಡಸಿದ್ದಾರೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:51 am, Tue, 21 February 23