Crime News: ಸಾಲ ತೀರಿಸಲು ತನ್ನ ಚಿಕ್ಕಮ್ಮನ ಮನೆಯಲ್ಲೇ ಕಳ್ಳತನ ಮಾಡಿದ ಖದೀಮ

ಕುಖ್ಯಾತ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬ್ಯಾಟರಾಯನಪುರ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧನ ಮಾಡಿದ್ದಾರೆ.  ಆನಂದ್ ಬಂಧಿತ ಆರೋಪಿ.

Crime News: ಸಾಲ ತೀರಿಸಲು ತನ್ನ ಚಿಕ್ಕಮ್ಮನ ಮನೆಯಲ್ಲೇ ಕಳ್ಳತನ ಮಾಡಿದ ಖದೀಮ
ಅಜಿತ್ ಮನೆ ಕಳ್ಳತನ ಮಾಡಿದ್ದ ಆರೋಪಿ.
Edited By:

Updated on: May 20, 2022 | 3:25 PM

ಬೆಂಗಳೂರು: ಅಕ್ಷಯ ತೃತೀಯ ದಿನ ಚಿಕ್ಕಮ್ಮನ ಮನೆಯಲ್ಲೆ ಕಳ್ಳತನ ಮಾಡಿದ್ದ ಆರೋಪಿಯನ್ನು ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸರು ಬಂಧನ ಮಾಡಿದ್ದಾರೆ. ಅಜಿತ್ ಮನೆ ಕಳ್ಳತನ ಮಾಡಿದ್ದ ಆರೋಪಿ. ಬ್ಯಾಟರಾಯನಪುರದ ನ್ಯೂ ಎಕ್ಸಟೆಷನ್​ ತನ್ನ ಚಿಕ್ಕಮ್ಮ ಸವಿತಾ ಮನೆಯಲ್ಲಿ ಕಳ್ಳತನ ಮಾಡಿದ್ದ. ಒಂದೂವರೆ ಕೆಜಿ ಚಿನ್ನ ಕಳ್ಳತನ ಮಾಡಿದ್ದ. ಗ್ಯಾಬ್ಲಿಂಗ್​ನಲ್ಲಿ 32 ಲಕ್ಷ ಹಣ ಸೋತಿದ್ದು, ಅತೀ ಹೆಚ್ಚು ಸಾಲ ಕೂಡ ಮಾಡಿದ್ದ. ಹಾಗಾಗಿ ಸಾಲ ತೀರಿಸಲು ಚಿಕ್ಕಮ್ಮನ ಮನೆಯಲ್ಲೇ ಕಳ್ಳತನ ಮಾಡಿದ್ದಾನೆ.

ಕುಖ್ಯಾತ ಬೈಕ್ ಕಳ್ಳ ಅಂದರ್:

ಬೆಂಗಳೂರು: ಕುಖ್ಯಾತ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬ್ಯಾಟರಾಯನಪುರ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧನ ಮಾಡಿದ್ದಾರೆ.  ಆನಂದ್ ಬಂಧಿತ ಆರೋಪಿ. ನಗರದ ವಿವಿಧ ಕಡೆ ಬೈಕ್ ಕಳ್ಳತನ ಮಾಡ್ತಿದ್ದ ಆರೋಪಿ, 12 ಲಕ್ಷ ಬೆಲೆ ಬಾಳುವ 20 ದ್ವಿಚಕ್ರವಾಹನ ವಶ ಪಡಿಸಿಕೊಳ್ಳಲಾಗಿದೆ. ಬ್ಯಾಟರಾಯನಪುರ ಪೊಲೀಸರಿಂದ ಪ್ರಕರಣ ದಾಖಲು ಮಾಡಲಾಗಿದೆ.

ಸಿಲಿಂಡರ್​ ಸ್ಫೋಟಗೊಂಡು ವೃದ್ಧ ಸಾವು

ಚಿಕ್ಕಬಳ್ಳಾಪುರ: ಸಿಲಿಂಡರ್​ ಸ್ಫೋಟದಿಂದ ವೃದ್ಧ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದಿದೆ. ತಾಲೂಕಿನ ಮ್ಯಾಕಲಪಲ್ಲಿನ ಮನೆಯೊಂದರಲ್ಲಿ ಎಲ್​ಪಿಜಿ ಸಿಲಿಂಡರ್ ಸ್ಫೋಟಗೊಂಡಿದೆ. ಈ ವೇಳೆ ಮನೆಯಲ್ಲಿ ಎಂ.ಬಿ.ಲಕ್ಷ್ಮಣ (62) ಇದ್ದರು. ಸ್ಫೋಟದ ತೀವ್ರತೆಗೆ ಮನೆ ಕುಸಿದುಬಿದ್ದಿದ್ದು, ಮನೆಯೊಳಗಿದ್ದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಎಂ.ಬಿ.ಲಕ್ಷ್ಮಣ(62) ಸಾವನ್ನಪ್ಪಿದ ವೃದ್ಧ. ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಘಟನೆ ನಡೆಯುವ ಸಂದರ್ಭದಲ್ಲಿ ಮನೆಯಲ್ಲಿ ಲಕ್ಷ್ಮಣ ಮಾತ್ರ ಇದ್ದರು.

ತಂದೆಯನ್ನು ಹಲ್ಲೆಗೈದು ಆತ್ಮಹತ್ಯೆ ಮಾಡಿಕೊಂಡ ಪುತ್ರ

ತುಮಕೂರು: ತನ್ನನ್ನು ಹುಟ್ಟಿಸಿದ ತಂದೆ ಮೇಲೆಯೇ ಪುತ್ರನೊಬ್ಬ ಹಲ್ಲೆ ನಡೆಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ತಾಲೂಕಿನ ಲಿಂಗನಹಳ್ಳಿಯಲ್ಲಿ ನಡೆದಿದೆ. ತಂದೆಯ ಜೊತೆ ಪುತ್ರ ಗೋವಿಂದ (28) ಜಗಳಕ್ಕೆ ನಿಂತು ಹಲ್ಲೆ ನಡೆಸುತ್ತಿದ್ದ. ಇದನ್ನು ನೋಡಿದ ಸ್ಥಳೀಯರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಕೋರಾ ಠಾನೆಯ ಇಬ್ಬರು ಇಬ್ಬಂದಿಗಳು (ಹೊಯ್ಸಳ ವಾಹನದ ಸಿಬ್ಬಂದಿ) ಹಲ್ಲೆಯನ್ನು ತಡೆಯಲು ಮುಂದಾಗಿದ್ದಾರೆ. ಈ ವೇಳೆ ಗೋವಿಂದ ಪೊಲೀಸರನ್ನು ಕಂಡ ಮನೆಯೊಳಗೆ ಓಡಿಹೋಗಿ ಸೀಮೆಎಣ್ಣೆ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.