ಮಳೆಯಿಂದ ಜಲಧಾರೆ: ಕನ್ಯೆ ನೋಡಲು ಹೋಗಿ, ವಾಪಸು ಬರುವಾಗ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ

ಮಳೆಯಿಂದ ಜಲಧಾರೆ: ಕನ್ಯೆ ನೋಡಲು ಹೋಗಿ, ವಾಪಸು ಬರುವಾಗ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ
ಕನ್ಯೆ ನೋಡಲು ಹೋಗಿ, ವಾಪಸು ಬರುವಾಗ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ

ನಿನ್ನೆ ಕನ್ಯೆ ನೋಡಲು ಉಪ್ಪಿನ ಬೆಟಗೇರಿಗೆ ಹೋಗಿದ್ದ ಟಿಪ್ಪು ಸುಲ್ತಾನ್ ಎಂಬ ಯುವಕ ಮರಳಿ ಮನೆಗೆ ಬರುವಾಗ ಹಳ್ಳ ದಾಟಲು ಹೋಗಿ ಹಳ್ಳದ ಪಾಲಾಗಿದ್ದಾನೆ. ಹಳ್ಳದ ದಂಡೆಯಲ್ಲಿರುವ ಮುಳ್ಳಿನ ಕಂಟಿಯಲ್ಲಿ ಸಿಲುಕಿದ್ದು ಮೃತ ದೇಹ ಪತ್ತೆಯಾಗಿದೆ.

TV9kannada Web Team

| Edited By: Ayesha Banu

May 20, 2022 | 5:26 PM

ಗದಗ: ಕನ್ಯೆ ನೋಡಲು ಹೋಗಿ ಮರಳಿ ಬರುವಾಗ ಯುವಕ ಹಳ್ಳದ ಪಾಲಾದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಯಕ್ಲಾಸಪುರ ಗ್ರಾಮದಲ್ಲಿ ನಡೆದಿದೆ. ಟಿಪ್ಪು ಸುಲ್ತಾನ್ (26) ಮೃತ ಯುವಕ. ನಿನ್ನೆ ಕನ್ಯೆ ನೋಡಲು ಉಪ್ಪಿನ ಬೆಟಗೇರಿಗೆ ಹೋಗಿದ್ದ ಟಿಪ್ಪು ಸುಲ್ತಾನ್ ಎಂಬ ಯುವಕ ಮರಳಿ ಮನೆಗೆ ಬರುವಾಗ ಹಳ್ಳ ದಾಟಲು ಹೋಗಿ ಹಳ್ಳದ ಪಾಲಾಗಿದ್ದಾನೆ. ಹಳ್ಳದ ದಂಡೆಯಲ್ಲಿರುವ ಮುಳ್ಳಿನ ಕಂಟಿಯಲ್ಲಿ ಸಿಲುಕಿದ್ದು ಮೃತ ದೇಹ ಪತ್ತೆಯಾಗಿದೆ. ಸ್ಥಳೀಯರ ಸಹಾಯದಿಂದ ಪೊಲೀಸರು ಟಿಪ್ಪು ಸುಲ್ತಾನ್ ಮೃತ ದೇಹ ಹೊರಗಡೆ ತೆಗೆದಿದ್ದಾರೆ. ಮುಂಡರಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿದ್ಯುತ್ ವ್ಯತ್ಯಯ ಹಿನ್ನೆಲೆ ಮೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹಿರೇಬೈಲಿನಲ್ಲಿ ವಿದ್ಯುತ್ ವ್ಯತ್ಯಯ ಹಿನ್ನೆಲೆ ಮೆಸ್ಕಾಂ ಸಿಬ್ಬಂದಿ ಹೇಮಂತ್ ಮೇಲೆ 6 ಜನರಿಂದ ಹಲ್ಲೆ ನಡೆದಿರುವ ಘಟನೆ ನಡೆದಿದೆ. ರಂಜನ್, ಆದರ್ಶ, ಸುಂದರೇಶ್ ಸೇರಿದಂತೆ 6 ಜನರಿಂದ ಹಲ್ಲೆ ನಡೆದಿದೆ. ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಠಾಣೆಗೆ ದೂರು ನೀಡಿದ್ದಕ್ಕೆ ಹಲ್ಲೆಗೊಳಗಾದ ಹೇಮಂತ್ಗೆ ಆರೋಪಿಗಳಿಂದ ಜೀವ ಬೆದರಿಕೆ ಹಾಕಲಾಗಿದೆಯಂತೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: 2024ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಮಂದಿರ ಮಸೀದಿ ವಿವಾದ ಹುಟ್ಟುಹಾಕಿದೆ: ಸಂಜಯ್ ರಾವುತ್

ರಸ್ತೆಗೆ ಉರುಳಿ ಬಿದ್ದ ಮರಗಳನ್ನು ತೆರವುಗೊಳಿಸಿದ ಪಿಎಸ್ಐ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬಾಳಂಬೀಡ ಮತ್ತು ಹಾವಣಗಿ ಗ್ರಾಮದ ನಡುವಿನ ರಸ್ತೆಯಲ್ಲಿ ಬಿದ್ದಿದ್ದ ಮರಗಳನ್ನು ಆಡೂರು ಪೊಲೀಸ್ ಠಾಣೆ ಪಿಎಸ್ಐ ಗಡ್ಡೆಪ್ಪ ಗುಂಜಟಗಿ ಮರಗಳನ್ನು ತೆರವುಗೊಳಿಸಿದ್ದಾರೆ. ದಾರಿಯಲ್ಲಿ ಹೋಗುತ್ತಿದ್ದ ವೇಳೆ ಮರಗಳು ಬಿದ್ದಿದ್ದು ಗಮನಿಸಿ ಕೊಡಲಿ, ಮರ ಕತ್ತರಿಸುವ ಮಷೀನ್ ನಿಂದ ಮರಗಳ ಟೊಂಗೆ ಕಡಿದು ತೆರವು ಮಾಡಿದ್ದಾರೆ. ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದ್ದ ಮರಗಳನ್ನು ತೆರವುಗೊಳಿಸಿದ್ದಾರೆ. ಮರಗಳನ್ನು ತೆರವು ಮಾಡಲು ಪಿಎಸ್ಐ ಗಡ್ಡೆಪ್ಪಗೆ ಸ್ಥಳೀಯರು ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಮಂಗಳೂರು ಕಾಲೇಜಿನಲ್ಲಿ ಮಹಿಳಾ ಸಿಬ್ಬಂದಿಗಳ ಫೋನ್ ನಂಬರ್ ಲೀಕ್ ಆರೋಪ; ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಬಂಟ್ವಾಳ ತಹಶೀಲ್ದಾರ್

ಸಿಡಿಲು ಬಡಿದು ಯುವಕ ಸಾವು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಮದನೂರು ಬಳಿ ಸಿಡಿಲು ಬಡಿದು ಯುವಕ ಆನಂದ ಬರಾಗಡೆ(21) ಮೃತಪಟ್ಟಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Follow us on

Related Stories

Most Read Stories

Click on your DTH Provider to Add TV9 Kannada