ಬೆಂಗಳೂರಿನಲ್ಲಿ ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ ರೇಪ್ ಕೇಸ್; 7 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ಮಹಿಳಾ ಅಪರಾಧಿ ತಾನಿಯಾ​ಗೆ 20 ವರ್ಷ ಶಿಕ್ಷೆ ಪ್ರಕಟ

ಕಳೆದ ವರ್ಷ ಮೇ.18 ರಂದು ಬೆಂಗಳೂರಿನಲ್ಲಿ ಬಾಂಗ್ಲಾ ದೇಶದ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ತಪ್ಪಿತಸ್ಥರು ಎಂದು ಬೆಂಗಳೂರಿನ 54ನೇ ಸಿಸಿಹೆಚ್ ಕೋರ್ಟ್ ತೀರ್ಪು ಕೊಟ್ಟಿದ್ದು 7 ಜನ ಅಪರಾಧಿಗಳಿಗೆ ಜೀವಾವಧಿಶಿಕ್ಷೆ ಪ್ರಕಟಿಸಿದೆ.

ಬೆಂಗಳೂರಿನಲ್ಲಿ ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ ರೇಪ್ ಕೇಸ್; 7 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ಮಹಿಳಾ ಅಪರಾಧಿ ತಾನಿಯಾ​ಗೆ 20 ವರ್ಷ ಶಿಕ್ಷೆ ಪ್ರಕಟ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:May 20, 2022 | 8:33 PM

ಬೆಂಗಳೂರು: ಬಾಂಗ್ಲಾ ಯುವತಿ ಮೇಲೆ‌ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ತಪ್ಪಿತಸ್ಥರು ಎಂದು ಬೆಂಗಳೂರಿನ 54ನೇ ಸಿಸಿಹೆಚ್ ಕೋರ್ಟ್ ತೀರ್ಪು ಕೊಟ್ಟಿದ್ದು 7 ಜನ ಅಪರಾಧಿಗಳಿಗೆ ಜೀವಾವಧಿಶಿಕ್ಷೆ ಪ್ರಕಟಿಸಿದೆ. ಮಹಿಳಾ ಅಪರಾಧಿ ತಾನಿಯಾ ಖಾನಂ ಗೆ 20 ವರ್ಷ ಶಿಕ್ಷೆ, ಅಪರಾಧಿ ಜಮಾಲ್ ಗೆ 5 ವರ್ಷ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಈ ಬಗ್ಗೆ ಮಾತನಾಡಿರುವ (ಅಂದಿನ ಪೂರ್ವ ವಿಭಾಗ ಡಿಸಿಪಿ) ಸಿಸಿಬಿ ಡಿಸಿಪಿ ಶರಣಪ್ಪ, ಆರೋಪಿತರಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಓರ್ವ ಮಹಿಳಾ ಆರೋಪಿತೆಗೆ ಇಪ್ಪತ್ತು ವರ್ಷ ಸಜೆ. ಒಂಭತ್ತು ಆರೋಪಿಗಳ ಪೈಕಿ ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಕಳೆದ ವರ್ಷ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ನಮ್ಮ ಗಮನಕ್ಕೆ ಈ ಪ್ರಕರಣ ಬಂದಿತ್ತು. ಮೊದಲು ಬಾಂಗ್ಲಾ ಹಾಗೂ ನಂತರ ಭಾರತದ ಪ್ರಮುಖ ನಗರಗಳಲ್ಲಿ ವೈರಲ್ ಆಗಿತ್ತು. ನಂತರ ಕಮಲ್ ಪಂತ್, ಮುರುಗನ್ ಸಂದೀಪ್ ಪಾಟೀಲ್ ರ ಮಾರ್ಗ ದರ್ಶನದಂತೆ ವಿಶೇಷ ಟೀಂ ರಚನೆ ಮಾಡಿ ಕೂಡಲೇ ಪ್ರಕರಣದಲ್ಲಿ ಕೆಲ ಅನುಮಾನಸ್ಪದ ವ್ಯಕ್ತಿಗಳನ್ನ ವಶಕ್ಕೆ ಪಡೆದಿದ್ದೇವು. ಮೊದಲಿಗೆ ಯಾವುದೇ ಕ್ಲೂ ನಮಗೆ ಲಭ್ಯವಾಗಿರಲ್ಲ. ನಂತರ ಆರೋಪಿಗಳನ್ನ ಪತ್ತೆಹಚ್ಚಿದಾಗ ಅವರು ನಿಜ ಒಪ್ಪಿಕೊಂಡರು. ಆರೋಪಿಗಳು ಸಿಕ್ಕರೂ ಸಂತ್ರಸ್ತ್ಗೆ ಪತ್ತೆಯಾಗಿರಲಿಲ್ಲ. ನಂತರ ಕೇರಳದ ಕ್ಯಾಲಿಕಟ್ ನಲ್ಲಿ ಸಂತ್ರಸ್ಥೆಯನ್ನ ಪತ್ತೆ ಹಚ್ಚಿ ಕರೆತರಲಾಗಿತ್ತು. ಒಟ್ಟು 12 ಮಂದಿಯನ್ನ ಬಂಧಿಸಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಸೆನ್ಸಿಟಿವ್ ಕೇಸ್ ಆಗಿದೆ. ಪ್ರಕರಣದಲ್ಲಿ ಸಂತ್ರಸ್ಥೆ ಮತ್ತು ಆರೋಪಿಗಳು ಬಾಂಗ್ಲಾ ಮೂಲದವರು. ಎಲ್ಲರೂ ಅಕ್ರಮವಾಗಿ ಭಾರತಕ್ಕೆ ಬಂದಿದ್ದವರು. ಬಾಣಸವಾಡಿ ಎಸಿಪಿ ನಿಂಗಣ್ಣ ಸಕ್ರಿ, ರಾಮಮೂರ್ತಿನಗರ ಇನ್ಸ್’ಪೆಕ್ಟರ್ ಮೆಲ್ವಿನ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಡಿ.ಎನ್.ಎ ಫ್ರಿಂಗರ್ ಪ್ರಿಂಟ್ ಪೊಟೋ ಆಡಿಯೋ ಡಿಟೇಲ್ಸ್ ಎಲ್ಲ ಡಿಜಿಟಲ್ ಎವಿಡೆನ್ಸ್ ಕಲೆಕ್ಟ್ ಮಾಡಲಾಗಿತ್ತು. 50 ಕ್ಕೂ ಹೆಚ್ಚು ಮೆಟಿರಿಯಲ್ ಆಬ್ಜೆಕ್ಟ್ಸ್ ಗಳನ್ನ ಸೀಜ್ ಮಾಡಲಾಗಿತ್ತು ಎಂದು ಪ್ರಕರಣದ ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನೆಲೆ ಕಳೆದ ವರ್ಷ ಮೇ.18 ರಂದು ಬೆಂಗಳೂರಿನಲ್ಲಿ ಬಾಂಗ್ಲಾ ದೇಶದ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಈ ಕೇಸ್ನಲ್ಲಿ ಶಾಮೀಲಾದವರೆಲ್ಲ ಬಾಂಗ್ಲಾ ದೇಶದ ಮೂಲದವರು. ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನ ರಾಮಮೂರ್ತಿ ನಗರದ ಎನ್ಆರ್ಐ ಕಾಲೋನಿಯಲ್ಲಿ ವಾಸವಾಗಿದ್ದರು. ಇಷ್ಟು ದಿನ ಸೈಲೆಂಟಾಗಿ ವೇಶ್ಯಾವಾಟಿಕೆ ಮಾಡಿಕೊಂಡು ದುಡ್ ಮಾಡುತ್ತಿದ್ದರು. ಎಲ್ಲರೂ ಖುಷಿಯಾಗೆ ಲೈಫ್ ಎಂಜಾಯ್ ಮಾಡುತ್ತಿದ್ದರು. ಆದರೆ, ಸ್ನೇಹಿತರ ಮಧ್ಯೆ ಅದು ಏನ್ ದ್ವೇಷ ಇತ್ತೋ ಗೊತ್ತಿಲ್ಲ. ಕಳೆದ 10 ದಿನಗಳ ಹಿಂದೆ ಬಾಂಗ್ಲಾ ಮೂಲದ ಯುವತಿ ಮೇಲೆ ಯುವಕರು ಕೃತ್ಯ ಎಸಗಿದ್ದಾರೆ. ಅದು ಕೂಡ ಇಬ್ಬರು ಯುವಕರು ಯುವತಿಯ ಕೈ, ಬಾಯಿ ಗಟ್ಟಿಯಾಗಿ ಮುಚ್ಚಿಕೊಂಡಿದ್ರೆ, ಉಳಿದವರು ಅಟ್ಟಹಾಸ ಮೆರೆದಿದ್ದಾರೆ. ಎಲ್ಲವನ್ನೂ ಮೊಬೈಲ್ನಲ್ಲಿ ದೃಶ್ಯ ಸೆರೆ ಹಿಡಿದು, ವೈರಲ್ ಮಾಡಿದ್ದಾರೆ. ವಿಡಿಯೋ ವೈರಲ್ ಆದ ಹಿನ್ನಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೇ.27 ರಂದು ಎಫ್ಐಆರ್ ದಾಖಲಿಸಿ ಒಟ್ಟು 12 ಮಂದಿ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿದ್ದರು. ಇದನ್ನೂ ಓದಿ: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ನಟಿ ಆಶಿಕಾ ರಂಗನಾಥ್

ಪೊಲೀಸರು ಆರೋಪಿಗಳನ್ನು ಬಂಧಿಸಿದ ಬಳಿಕ ಆರೋಪಿಗಳು ತಮ್ಮ ತಪ್ಪನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದರು. ‘ತಾವೂ ಅಕ್ರಮ ನುಸುಳುಕೋರರು’ ಎಂದು ತಪ್ಪನ್ನು ಒಪ್ಪಿಕೊಂಡಿದ್ದರು. ಬಂಧಿತ ಆರು ಆರೋಪಿಗಳ ಹೇಳಿಕೆಯನ್ನು ರಾಮಮೂರ್ತಿನಗರ ಪೊಲೀಸರು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದರು. ಆಗ ಸರ್, ನಾವೆಲ್ಲಾ ಬಾಂಗ್ಲಾದವರು. ನಾವೂ ಯಾವುದೇ ಪಾಸ್ ಪೋರ್ಟ್ ಮತ್ತು ವೀಸಾ ಹೊಂದಿಲ್ಲ. ಯಾವುದೇ ದಾಖಲೆಗಳಿಲ್ಲದೆ ಕಾನೂನು ಬಾಹಿರವಾಗಿ ಬಾಂಗ್ಲಾದಿಂದ ಭಾರತಕ್ಕೆ ಅತಿಕ್ರಮವಾಗಿ ನುಸುಳಿದ್ದೇವೆ. ನಂತರ ಬೆಂಗಳೂರಿಗೆ ಬಂದು, ಇಲ್ಲಿ ವಿವಿಧ ಕಡೆಗಳಲ್ಲಿ ವಾಸಿಸುತ್ತಿದ್ದೇವೆ ಎಂದು ಬಂಧಿತರು ಮಾಹಿತಿ ನೀಡಿದ್ದರು. ವಿಡಿಯೋದಲ್ಲಿರುವ ಯುವತಿ ಕೂಡ ಬಾಂಗ್ಲಾದವಳು. ಆಕೆ ನಮಗೆ ಪರಿಚಿತೆ. ಆಕೆಗೂ ಹಾಗೂ ನಮಗೂ ವ್ಯವಹಾರಿಕ ವಿಚಾರದಲ್ಲಿ ಗಲಾಟೆಯಾಗಿತ್ತು. ಇದೇ ಕಾರಣಕ್ಕೆ ನಾವೂ 6 ಜನರು ಈ ಕೃತ್ಯ ಎಸಗಿದ್ದೇವೆ. ಕೃತ್ಯವನ್ನು ರಾಮಮೂರ್ತಿನಗರದ ಮನೆಯಲ್ಲಿ ಮಾಡಿದ್ದೇವೆ ಎಂದು ತಿಳಿಸಿದ್ದರು. ಸದ್ಯ ಆರೋಪಿಗಳು ತಪ್ಪಿತಸ್ಥರು ಎಂದು ಬೆಂಗಳೂರಿನ 54ನೇ ಸಿಸಿಹೆಚ್ ಕೋರ್ಟ್ ನ್ಯಾಯಾಧೀಶ ಎನ್.ಸುಬ್ರಮಣ್ಯ ತೀರ್ಪು ನೀಡಿದ್ದು 7 ಜನ ಅಪರಾಧಿಗಳಿಗೆ ಜೀವಾವಧಿಶಿಕ್ಷೆ ಪ್ರಕಟಿಸಿದ್ದಾರೆ.

Published On - 5:08 pm, Fri, 20 May 22

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ