2024ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಮಂದಿರ ಮಸೀದಿ ವಿವಾದ ಹುಟ್ಟುಹಾಕಿದೆ: ಸಂಜಯ್ ರಾವುತ್

TV9 Digital Desk

| Edited By: Rashmi Kallakatta

Updated on: May 20, 2022 | 3:35 PM

ಕಾಶಿ-ಮಥುರಾ ದೇವಸ್ಥಾನದ ಸಮಸ್ಯೆ ನಮಗೆ ಮುಖ್ಯವಾಗಿದೆ .ಆದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಈ ವಿಷಯದ ಮೇಲೆ ಗಲಭೆಗಳನ್ನು ಹುಟ್ಟುಹಾಕುವುದನ್ನು ಎರಡೂ ಕಡೆಯವರು ತಪ್ಪಿಸಬೇಕು. ಶ್ರೀಲಂಕಾದಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ

2024ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಮಂದಿರ ಮಸೀದಿ ವಿವಾದ ಹುಟ್ಟುಹಾಕಿದೆ: ಸಂಜಯ್ ರಾವುತ್
ಸಂಜಯ್ ರಾವುತ್

ಮುಂಬೈ: 2024 ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ (BJP) ಮಂದಿರ-ಮಸೀದಿ ಸಮಸ್ಯೆಯನ್ನು ಹುಟ್ಟುಹಾಕಿದೆ. ದೇಶದಲ್ಲಿ ಧಾರ್ಮಿಕ ಉದ್ವಿಗ್ನತೆಯನ್ನು ಸೃಷ್ಟಿಸಲು ಇಂತಹ ವಿಷಯಗಳನ್ನು ಕೆರಳಿಸಲಾಗಿದೆ ಎಂದು ಶಿವಸೇನಾ (Shiv Sena) ನಾಯಕ ಸಂಜಯ್ ರಾವುತ್ (Sanjay Raut) ಆರೋಪಿಸಿದ್ದಾರೆ. 2024ರ ಚುನಾವಣೆ ತಯಾರಿ ಭಾಗವಾಗಿ ದೇಶದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಲು ಎಲ್ಲಾ ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳನ್ನು ಉತ್ಖನನ ಮಾಡಲಾಗುತ್ತಿದೆ ಎಂದು ಶುಕ್ರವಾರ ದೆಹಲಿಯಲ್ಲಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ರಾವತ್ ಹೇಳಿದ್ದಾರೆ. ಇಸ್ಲಾಮಿಕ್ ಆಡಳಿತಗಾರರು ಮಸೀದಿಗಳನ್ನು ನಿರ್ಮಿಸಲು ದೇವಾಲಯಗಳನ್ನು ಕೆಡವಿದ್ದಾರೆ. ಆದ್ದರಿಂದ ಭೂಮಿಯನ್ನು ಹಿಂದೂಗಳಿಗೆ ಹಿಂದಿರುಗಿಸಬೇಕು ಎಂಬ ವಾದದ ಮೇಲೆ ಕಾಶಿ ಮತ್ತು ಮಥುರಾದಲ್ಲಿ ದೇವಾಲಯಗಳ ನಿರ್ಮಾಣಕ್ಕಾಗಿ ಹೆಚ್ಚುತ್ತಿರುವ ಕೂಗು ಹಿನ್ನೆಲೆಯಲ್ಲಿ ಬಿಜೆಪಿಯನ್ನು ರಾವುತ್ ಟೀಕಿಸಿದ್ದಾರೆ. ಮುಸ್ಲಿಂ ಗುಂಪುಗಳು ಹಿಂದೂಗಳ ವಾದವನ್ನು ನಿರಾಕರಿಸಿವೆ. ಈ ವಿಷಯವನ್ನು ನ್ಯಾಯಾಲಯಗಳು ಪರಿಶೀಲಿಸುತ್ತವೆ ಮತ್ತು ಫಲಿತಾಂಶಕ್ಕಾಗಿ ಎಲ್ಲರೂ ಕಾಯಬೇಕು ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಆದರೆ ಅನೇಕ ಬಿಜೆಪಿ ನಾಯಕರು ದೇವಾಲಯಗಳ ಜೀರ್ಣೋದ್ಧಾರವನ್ನು ಬೆಂಬಲಿಸಿದ್ದಾರೆ. ಆದಾಗ್ಯೂ, ಕಾಶಿ-ಮಥುರಾ ದೇವಾಲಯದಂತಹ ವಿಷಯಗಳು ಶಿವಸೇನಾದಂಥಾ ಹಿಂದುತ್ವವಾದಿ ಪಕ್ಷಗಳಿಗೆ ಪ್ರಮುಖ ವಿಷಯಗಳಲ್ಲ ಎಂದು ಇದರ ಅರ್ಥವಲ್ಲ. ಆದರೆ ಕೇಂದ್ರವು ಹಣದುಬ್ಬರ ಮತ್ತು ಇತರ ವಿಷಯಗಳ ಬಗ್ಗೆ ಮಾತನಾಡಬೇಕು ಎಂದಿದ್ದಾರೆ ರಾವುತ್.

“ಕಾಶಿ-ಮಥುರಾ ದೇವಸ್ಥಾನದ ಸಮಸ್ಯೆ ನಮಗೆ ಮುಖ್ಯವಾಗಿದೆ .ಆದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಈ ವಿಷಯದ ಮೇಲೆ ಗಲಭೆಗಳನ್ನು ಹುಟ್ಟುಹಾಕುವುದನ್ನು ಎರಡೂ ಕಡೆಯವರು ತಪ್ಪಿಸಬೇಕು. ಶ್ರೀಲಂಕಾದಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಎಲ್ಲಾ ಕಡೆಯವರು ಇಂತಹ ಸಮಸ್ಯೆಗಳ ಬಗ್ಗೆ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕು” ಎಂದು ರಾವುತ್ ಹೇಳಿದರು.

ಅಯೋಧ್ಯೆ ಮಂದಿರ ನಿರ್ಮಾಣದ ನಂತರ ಇಂತಹ ಸಮಸ್ಯೆಗಳನ್ನು ಒಮ್ಮತದಿಂದ ಬಗೆಹರಿಸಿಕೊಳ್ಳಬೇಕು. ತಾಜ್ ಮಹಲ್ ಮತ್ತು ಜುಮಾ ಮಸೀದಿಯ ಕೆಳಗೆ ಏನಿದೆ ಎಂಬುದ ಬಗ್ಗೆ ಸಮಯವನ್ನು ವ್ಯರ್ಥ ಮಾಡಲಾಗುತ್ತಿದೆ. ಹಣದುಬ್ಬರ, ನಿರುದ್ಯೋಗ ಮತ್ತು ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಯಾರೂ ಮಾತನಾಡುವುದಿಲ್ಲ. ಈ ವಿಷಯಗಳ ಮೇಲೆ ಚುನಾವಣೆಗಳನ್ನು ಸ್ಪರ್ಧಿಸಬೇಕಿದೆ ಎಂದು ರಾವುತ್ ಹೇಳಿದರು.

ಇದನ್ನೂ ಓದಿ

ವಾರಣಾಸಿ ಮತ್ತು ಮಥುರಾದಲ್ಲಿನ ಮಂದಿರ-ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿಯನ್ನು ಟೀಕಿಸಿದ ರಾವುತ್ ಶಿವಸೇನಾ ತನ್ನ ಹಿಂದುತ್ವದ ಬೇರುಗಳನ್ನು ಒತ್ತಿಹೇಳುತ್ತಿದೆ. ಮೇ 14 ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ನಡೆದ ರ್ಯಾಲಿಯಲ್ಲಿ, ಪಕ್ಷದ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬಿಜೆಪಿ ರಾಷ್ಟ್ರವನ್ನು ದಾರಿ ತಪ್ಪಿಸುವ ನಕಲಿ ಹಿಂದುತ್ವ ಮಾಡುತ್ತಿದೆ ಎಂದು ಟೀಕಿಸಿದ್ದರು. ಶಿವಸೇನಾದ ಹಿಂದುತ್ವ ಎಂದರೆ “ರಾಮನನ್ನು ಅವರ ಹೃದಯದಲ್ಲಿ ಇಟ್ಟುಕೊಂಡು ಜನರಿಗೆ ಉದ್ಯೋಗ ನೀಡುವುದು” ಎಂದಿದ್ದರು ಠಾಕ್ರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada