ಹಾಸನ: ಮದ್ಯದ ಚಟ ಬಿಡಿಸುತ್ತೇವೆಂದು ಪುನರ್ವಸತಿ ಕೇಂದ್ರದಲ್ಲಿ ವ್ಯಕ್ತಿಯ ಕೊಲೆ; ಪೋಷಕರ ಆರೋಪ

ಮಗ ಮದ್ಯ ಚಟ ಬಿಡಲೆಂದು ನಾಲ್ಕು ದಿನಗಳ ಹಿಂದೆ, ತಂದೆ ಹಾಸನದ ವಿಜಯನಗರದಲ್ಲಿರುವ ಪುನರ್ ಜೀವನ ವಸತಿ ಮದ್ಯದ ಚಟ ಬಿಡಿಸುವ ಕೇಂದ್ರಕ್ಕೆ ಸೇರಿಸಿದ್ದರು. ಆದರೆ ಪುನರ್ವಸತಿ ಸಿಬ್ಬಂದಿ ಮಗನಿಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಮೃತ ಪದ್ಮೇಗೌಡ ತಾಯಿ ಆರೋಪ ಮಾಡಿದ್ದಾರೆ.

ಹಾಸನ: ಮದ್ಯದ ಚಟ ಬಿಡಿಸುತ್ತೇವೆಂದು ಪುನರ್ವಸತಿ ಕೇಂದ್ರದಲ್ಲಿ ವ್ಯಕ್ತಿಯ ಕೊಲೆ; ಪೋಷಕರ ಆರೋಪ
ಸಾಂದರ್ಭಿಕ ಚಿತ್ರ
Edited By:

Updated on: Aug 25, 2023 | 5:34 PM

ಹಾಸನ: ಮದ್ಯದ ಚಟ ಬಿಡಲು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದ ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಹಾಸನ (Hassan) ತಾಲ್ಲೂಕಿನ ದೊಡ್ಡಮೇದೂರು ಗ್ರಾಮದ ಪದ್ಮೇಗೌಡ (38) ಮೃತ ದುರ್ದೈವಿ. ಮದ್ಯ ವ್ಯಸನಿಯಾಗಿದ್ದ (Alcoholic) ಪದ್ಮೆಗೌಡ ಅವರಿಗೆ ಮದ್ಯದ ಚಟ ಬಿಡಿಸಲು ನಾಲ್ಕು ದಿನಗಳ ಹಿಂದೆ ಹಾಸನದ ವಿಜಯನಗರದಲ್ಲಿರುವ ಪುನರ್ ಜೀವನ ವಸತಿ ಮದ್ಯದ ಚಟ ಬಿಡಿಸುವ ಪುನರ್ವಸತಿ ಕೇಂದ್ರಕ್ಕೆ ತಂದೆ ತೋಪೇಗೌಡ ಸೇರಿಸಿದ್ದರು.

ಪದ್ಮೆಗೌಡ ತೀವ್ರ ಸುಸ್ತಿನಿಂದ ಬಳಲುತ್ತಿದ್ದಾರೆಂದು ಪುನರ್ವಸತಿ ಕೇಂದ್ರದ ಸಿಬ್ಬಂದಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಪದ್ಮೇಗೌಡ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ (ಆ.24) ರಂದು ನಿಧನರಾಗಿದ್ದರು. ಇಂದು (ಆ.25) ಸ್ವಗ್ರಾಮದಲ್ಲಿ ಶವ ಸಂಸ್ಕಾರ ಮಾಡುವ ವೇಳೆ ಮೃತ ವ್ಯಕ್ತಿಯ ಮೈಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ.

ಇದನ್ನೂ ಓದಿ: ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ SSLC ವಿದ್ಯಾರ್ಥಿನಿ ಆತ್ಮಹತ್ಯೆ

ಈ ಹಿನ್ನೆಲೆಯಲ್ಲಿ ಪದ್ಮೇಗೌಡನ ಮೇಲೆ‌ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆಂದು ಮೃತನ ತಾಯಿ ಆರೋಪ ಮಾಡಿದ್ದಾರೆ. ಹಾನಸ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿಮ್ಸ್ ವೈದ್ಯರ ನಿರ್ಲಕ್ಷಕ್ಕೆ ಮಹಿಳೆ ಸಾವು; ಪೋಷಕರ ಆರೋಪ

ಹುಬ್ಬಳ್ಳಿ: ಕಿಮ್ಸ್ ವೈದ್ಯರ ನಿರ್ಲಕ್ಷಕ್ಕೆ ಮಹಿಳೆ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ಮುಂಡಗೋಡ ಮೂಲದ ಅನ್ನಪೂರ್ಣ ಶಂಕರ ಹುಲಿಯಾಳ್ ಮೃತ ಮಹಿಳೆ. ಅನ್ನಪೂರ್ಣ ಶಂಕರ ಹುಲಿಯಾಳ್ ಕಿಮ್ಸ್ ನ ಸುಟ್ಟುಗಾಯ ಹಾಗೂ ಪ್ಲಾಸ್ಟಿಕ್ ಶಾಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಒಂದು ವಾರದಿಂದ ಮಹಿಳೆ ಆರೋಗ್ಯವಿದ್ದಳು. ಇಂದು ಏಕಾಏಕಿ ಮಹಿಳೆ ಮೃತಪಟ್ಟಿದ್ದಾಳೆ.  ಇದಕ್ಕೆ ವೈದ್ಯರ ನಿಷ್ಕಾಳತಿ ಕಾರಣ. ಅಲ್ಲದೇ  ರಾತ್ರಿ ವೇಳೆ ಆಸ್ಪತ್ರೆ ಸಿಬ್ಬಂದಿ ಕುಡಿದು ಬರುತ್ತಿದ್ದರು ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.  ಆಸ್ಪತ್ರೆ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:38 pm, Fri, 25 August 23