ಬೆಂಗಳೂರು: ಕೊರೊನಾ ವಿರುದ್ಧದ ಹೋರಾಟಕ್ಕೆ ಇಡೀ ದೇಶವನ್ನೇ ಲಾಕ್ಡೌನ್ ಮಾಡಲಾಗಿದೆ. ಈ ನಡುವೆ ಎಲ್ಲೂ ಮದ್ಯದಂಗಡಿಗಳು ತೆರೆದಿಲ್ಲ. ಇದರಿಂದ ಮದ್ಯಪ್ರಿಯರು ಪರಿತಪಿಸುವಂತಾಗಿದೆ. ಆದರೆ ಬೇಸರದ ಸಂಗತಿ ಎಂದರೆ ಸರ್ಕಾರಿ ವಾಹನದಲ್ಲಿಯೇ ಅಕ್ರಮವಾಗಿ ಮದ್ಯ ಸಾಗಾಟ ಮಾಡಲಾಗುತ್ತಿದೆ. ಸರ್ಕಾರಿ ಅಧಿಕಾರಿಗಳೇ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಮದ್ಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಸೇರಿದ್ದು ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಪೊಲೀಸರ ತಪಾಸಣೆ ವೇಳೆ ಸರ್ಕಾರಿ ಜಿಎಸ್‌ಟಿ ವಾಹನದಲ್ಲಿ ಮದ್ಯ ಸಾಗಿಸುತ್ತಿದ್ದರು. ಆರೋಪಿಗಳಾದ ವಿಶೇಷ್ ಗುಪ್ತಾ, ಗೋಪಿ ಎಂಬುವರನ್ನು ಬಂಧಿಸಲಾಗಿದ್ದು, 8 ಬಾಕ್ಸ್‌ಗಳಲ್ಲಿದ್ದ ದುಬಾರಿ ಬೆಲೆಯ ಮದ್ಯವನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕೇಸ್ನ ತನಿಖೆ ನಡೆಸಿದ್ದ ಎಸಿಪಿ ಅಮಾನತಿಗೆ ಶಿಫಾರಸು:
ಪ್ರಕರಣದ ತನಿಖೆ ನಡೆಸಿದ್ದ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಎಸಿಪಿ ವಾಸು ಅಮಾನತಿಗೆ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಶಿಫಾರಸು ಮಾಡಿದ್ದಾರೆ. ಏ.11ರಂದು ಮುರುಗನ್ ಕಡೆಯವರಿಗೆ ಸೇರಿದ ಮದ್ಯ ಜಪ್ತಿ ಮಾಡಲಾಗಿತ್ತು. ಆಗ ಆರೋಪಿಗಳ ವಿರುದ್ಧ ಕೇಸ್ ದಾಖಲಿಸದಂತೆ ಮುರುಗನ್ ಎಚ್ಚರಿಕೆ ನೀಡಿದ್ರು. ಆರೋಪಿಗಳ ಹೇಳಿಕೆ ಪಡೆದು ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದಾರೆ. ಆರೋಪಿಗಳ ಬಿಡುಗಡೆಗೆ ನಾನು 50 ಲಕ್ಷ ಕೇಳಿದ್ದೇನೆಂದು ಸುಳ್ಳು ಆರೋಪ ಮಾಡಿ ಅಮಾನತಿಗೆ ಶಿಫಾರಸು ಮಾಡಿದ್ದಾರೆ ಎಂದು ಟಿವಿ9ಗೆ ಎಸಿಪಿ ವಾಸು ಪ್ರತಿಕ್ರಿಯೆ ನೀಡಿದ್ದಾರೆ.
Published On - 4:15 pm, Fri, 24 April 20