ಅಲಯನ್ಸ್ ಅಯ್ಯಪ್ಪ ಹತ್ಯೆ ಪ್ರಕರಣ: ಮತ್ತೊಂದು ಬಿಗ್ ಫಿಶ್ ಪೊಲೀಸ್ ಬಲೆಗೆ
ಬೆಂಗಳೂರು: ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪ್ರಮುಖ ಆರೋಪಿ ಸೂರಜ್ ಸಿಂಗ್ ಮತ್ತು ಅಯ್ಯಪ್ಪ ಕೊಲೆಗೆ ಸುಪಾರಿ ನೀಡಿದ್ದ ಅಲಯನ್ಸ್ ವಿವಿಯ ಸುಧೀರ್ ಅಂಗೊರ್ ನನ್ನ ಬಂಧಿಸಲಾಗಿತ್ತು. ಇಂದು ಅರ್ ಟಿ ನಗರ ಪೊಲೀಸರು ಇತರೆ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಅವರಲ್ಲಿ ಪ್ರಮುಖವಾಗಿ ಅಲಯನ್ಸ್ ಯುನಿವರ್ಸಿಟಿಯ ಫೈನಾನ್ಸಿಯಲ್ ಡೈರೆಕ್ಟರ್ ಪ್ರಕಾಶ್ ಎಸ್. ಬೂದೂರ್, ಮುತ್ತಾ ಮತ್ತು ಮಂಜು ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆ ಅರೋಪಿ ಸೂರಜ್ ಜೊತೆ […]
ಬೆಂಗಳೂರು: ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪ್ರಮುಖ ಆರೋಪಿ ಸೂರಜ್ ಸಿಂಗ್ ಮತ್ತು ಅಯ್ಯಪ್ಪ ಕೊಲೆಗೆ ಸುಪಾರಿ ನೀಡಿದ್ದ ಅಲಯನ್ಸ್ ವಿವಿಯ ಸುಧೀರ್ ಅಂಗೊರ್ ನನ್ನ ಬಂಧಿಸಲಾಗಿತ್ತು. ಇಂದು ಅರ್ ಟಿ ನಗರ ಪೊಲೀಸರು ಇತರೆ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಅವರಲ್ಲಿ ಪ್ರಮುಖವಾಗಿ ಅಲಯನ್ಸ್ ಯುನಿವರ್ಸಿಟಿಯ ಫೈನಾನ್ಸಿಯಲ್ ಡೈರೆಕ್ಟರ್ ಪ್ರಕಾಶ್ ಎಸ್. ಬೂದೂರ್, ಮುತ್ತಾ ಮತ್ತು ಮಂಜು ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆ ಅರೋಪಿ ಸೂರಜ್ ಜೊತೆ ಫೈನಾನ್ಸಿಯಲ್ ಡೈರೆಕ್ಟರ್ ಪ್ರಕಾಶ್ ವ್ಯವಹಾರ ಮಾಡ್ತ್ತಿದ್ದ. ಕೊಲೆ ಪ್ಲಾನ್ ಮಾಡುವಾಗೆಲ್ಲಾ ಪ್ರಕಾಶ್ ಜೊತೆಯಲ್ಲೆ ಇರ್ತಿದ್ದ. ಈ ಐವರೂ ಸೇರಿ ಅಯ್ಯಪ್ಪ ದೂರೆಯನ್ನು ಕೊಚ್ಚಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
1 ಲಕ್ಷ ಬಹುಮಾನ: ಈ ಮಧ್ಯೆ, ಅಲಯನ್ಸ್ ವಿ.ವಿ ಮಾಜಿ ಕುಲಪತಿ ಡಾ. ಅಯ್ಯಪ್ಪ ದೊರೆ ಅವರನ್ನು ಕೊಲೆ ಮಾಡಿದ ಆರೋಪಿಗಳ ಬಂಧನ, ಪ್ರಕರಣ ಬೇಧಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಒಂದು ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ. ಹತ್ಯೆಯ ವೃತ್ತಾಂತ: ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಅಯ್ಯಪ್ಪ ದೊರೆ ಮಂಗಳವಾರ ರಾತ್ರಿ ಬರ್ಬರವಾಗಿ ಹತ್ಯೆಯಾಗಿದ್ರು. ಮಾರನೆ ದಿನ ಎಚ್‌ಎಂಟಿ ಮೈದಾನದಲ್ಲಿ ಅವರ ಶವ ಪತ್ತೆಯಾಗಿತ್ತು. ಕೆಲವೇ ಗಂಟೆಗಳಲ್ಲಿ ಆರ್.ಟಿ ನಗರ ಪೊಲೀಸರು ಸೂರಜ್ ಮತ್ತು ಸುಧೀರ್ ನನ್ನ ವಶಕ್ಕೆ ಪಡೆದಿದ್ದರು.
ಅಯ್ಯಪ್ಪ ಹತ್ಯೆಗೆ ಸೂರಜ್ ಗೆ ಸುಧೀರ್ 1 ಕೋಟಿ ರೂಪಾಯಿ ಸುಪಾರಿ ನೀಡಿದ್ದ. 2017ರಲ್ಲಿ ಅಲಯನ್ಸ್ ವಿವಿ ವ್ಯವಹಾರದ ಸಂಬಂಧ ಸಹೋದರರಾದ ಸುಧೀರ್ ಅಂಗೂರ್ ಹಾಗೂ ಮಧುಕರ್ ಅಂಗೂರ್ ನಡುವೆ ದೊಡ್ಡಮಟ್ಟದ ಗಲಾಟೆ ನಡೆದಿತ್ತು. ಗಲಾಟೆಯಲ್ಲಿ ಅಯ್ಯಪ್ಪ, ಮಧುಕರ್ ಅಂಗೂರ್ ಜೊತೆ ಸೇರಿದ್ದ. ಅದಾದ ನಂತರ, ಸುಧೀರ್ ಅಂಗೂರ್, ಸೂರಜ್ ಗೆ ಒಂದು ಕೋಟಿ ಹಣ ನೀಡಿ ಹತ್ಯೆ ಮಾಡುವಂತೆ ಸುಪಾರಿ ಕೊಟ್ಟಿದ್ದ.
ಅಲಯನ್ಸ್ ವಿವಿ ಎಕ್ಸಿಕ್ಯೂಟಿವ್ ಹಾಗೂ ಶಿವಸೇನೆಯ ಕಾರ್ಯಕರ್ತನಾಗಿದ್ದ ಸೂರಜ್, ಸುಪಾರಿ ಪಡೆದ ನಂತರ ಗ್ಯಾಂಗ್ ರಚನೆ ಮಾಡಿಕೊಂಡು ಮಧುಕರ್ ಅಂಗೂರ್ ಹಾಗೂ ಅಯ್ಯಪ್ಪ ದೊರೆಯ ಚಟುವಟಿಕೆಗಳ ಬಗ್ಗೆ ಕಳೆದ ಆರು ತಿಂಗಳಿಂದ ನಿಗಾ ಇಟ್ಟಿದ್ದ. ಅಕ್ಟೋಬರ್ 15ರಿಂದ ಪ್ಲಾನ್ ಮಾಡಿ, ಕಡೆಗೆ ಮೊನ್ನೆ ಮಂಗಳವಾರ ರಾತ್ರಿ ವಾಕಿಂಗ್‌ಗೆ ಬಂದಿದ್ದ ಅಯ್ಯಪ್ಪ ದೊರೆಯನ್ನ ಐವರೂ ಸೇರಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನಿನ್ನೆ ತಿಳಿಸಿದ್ದಾರೆ.
Published On - 4:04 pm, Fri, 18 October 19