ಶ್ರೀಕಾಕುಳಂ: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಸಿರಾಜು ಕಾಸಿಪುರಂನಲ್ಲಿ ಹೊಳೆಗೆ ಬಿದ್ದ ತನ್ನ ತಂಗಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ 12 ವರ್ಷದ ಬಾಲಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ.
ಸಾವರ ಹರಿಕಾ ಎಂದು ಗುರುತಿಸಲಾದ ಮಗು, ತನ್ನ ಸಹೋದರಿ ಹೊಳೆಗೆ ಜಾರಿಬಿದ್ದು ಹೊರಬರಲು ಹೆಣಗಾಡುತ್ತಿರುವುದನ್ನು ಕಂಡು. ಕೂಡಲೇ ನೀರಿಗೆ ಹಾರಿ ತಂಗಿ ಜಾಹ್ನವಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾಳೆ.
ದುರದೃಷ್ಟವಶಾತ್, ಹೊಳೆಯ ಒಳಹರಿವಿನ ನೀರು ಹೆಚ್ಚಾದ ಕಾರಣ 12 ವರ್ಷದ ಅಕ್ಕ ಸಾವರ ಹರಿಕಾ ತನ್ನ ತಂಗಿಯನ್ನು ರಕ್ಷಿಸಿದ ನಂತರ ಕೊಚ್ಚಿಕೊಂಡು ಹೋಗಿದ್ದಾಳೆ ಎಂದು ಹೇಳಲಾಗಿದೆ.
ದಲಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ
ರಾಜಸ್ಥಾನದ ಅಜ್ಮೀರ್‌ನಲ್ಲಿ 25 ವರ್ಷದ ದಲಿತ ಮಹಿಳೆಯ ಮೇಲೆ ಪಾದ್ರಿ ಸೇರಿದಂತೆ ಕೆಲವೊಂದು ಗುಂಪು ಅತ್ಯಾಚಾರವೆಸಗಿದೆ ಎಂದು ಆರೋಪಿಸಲಾಗಿದೆ. ಸಂಜಯ್ ಶರ್ಮಾ ಎಂದು ಗುರುತಿಸಲಾದ ಆರೋಪಿಯು ಮಹಿಳೆಯನ್ನು ಆಕೆಯ ಕುಟುಂಬದ ಅರ್ಚಕನಾಗಿದ್ದರಿಂದ ತಿಳಿದಿದ್ದನು ಮತ್ತು ಆಕೆಯ ಮನೆಯಲ್ಲಿ ಪ್ರಾರ್ಥನೆಗಳನ್ನು ಮಾಡುತ್ತಿದ್ದನು.
ಮಹಿಳೆ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ಹಣ ವಸೂಲಿ ಮಾಡಿ ಮತ್ತೆ ಕೆಲವರ ಜೊತೆ ಸೇರಿ ಆಕೆಯನ್ನು ದಿನಗಟ್ಟಲೆ ಸೆರೆಯಲ್ಲಿಟ್ಟು ಅತ್ಯಾಚಾರ ಎಸಗಿದ್ದಾನೆ.
ಆರೋಪಿಯು ಮಹಿಳೆಯನ್ನು ತನ್ನ ಸುಖಕ್ಕಾಗಿ ಬಳಸುತ್ತಿದ್ದರು ಮತ್ತು ಎಷ್ಟು ಜನರು ಈ ಅಪರಾಧದಲ್ಲಿವಿದ್ದರೆ ಎಂದು ಹೇಳಲು ಆಕೆಗೆ ಆಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ಆಕೆ ಹಾಗೂ ಆಕೆಯ ಪತಿ ಹಾಗೂ ಮಕ್ಕಳನ್ನು ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು.
Published On - 2:34 pm, Mon, 10 October 22