Andhra Pradesh Crime: ವಿಚ್ಛೇದನ ಪಡೆಯಲು ಪತ್ನಿಗೆ ಕುಮ್ಮಕ್ಕು ನೀಡುತ್ತಿದ್ದ ಕಾರಣಕ್ಕೆ ಅತ್ತೆಯನ್ನೇ ಹತ್ಯೆಗೈದ ಅಳಿಯ

ವಿಚ್ಛೇದನ ತೆಗೆದುಕೋ ಎಂದು ಪತ್ನಿಗೆ ಕುಮ್ಮಕ್ಕು ನೀಡುತ್ತಿದ್ದ ಕಾರಣಕ್ಕೆ ಅಳಿಯನೊಬ್ಬ ಅತ್ತೆಯನ್ನೇ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

Andhra Pradesh Crime: ವಿಚ್ಛೇದನ ಪಡೆಯಲು ಪತ್ನಿಗೆ ಕುಮ್ಮಕ್ಕು ನೀಡುತ್ತಿದ್ದ ಕಾರಣಕ್ಕೆ ಅತ್ತೆಯನ್ನೇ ಹತ್ಯೆಗೈದ ಅಳಿಯ
ಸಾವು

Updated on: Jun 25, 2023 | 9:18 AM

ವಿಚ್ಛೇದನ ತೆಗೆದುಕೋ ಎಂದು ಪತ್ನಿಗೆ ಕುಮ್ಮಕ್ಕು ನೀಡುತ್ತಿದ್ದ ಕಾರಣಕ್ಕೆ ಅಳಿಯನೊಬ್ಬ ಅತ್ತೆಯನ್ನೇ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ರಾತ್ರಿ 9 ಗಂಟೆ ಸುಮಾರಿಗೆ ಚನುವೋಲು ವೆಂಕಟರಾವ್ ಮೇಲ್ಸೇತುವೆ ಮೇಲೆ ರಾಜೇಶ್​​(37) ಎಂಬಾತ ನಾಗಮಣಿ(47) ಎಂಬಾತನನ್ನು ಹತ್ಯೆಗೈದಿದ್ದಾನೆ. ವಿಚ್ಛೇದನ ಅರ್ಜಿಯು ನ್ಯಾಯಾಲಯದ ಮುಂದೆ ಇನ್ನೂ ಬಾಕಿ ಇದೆ ಎಂದು ವಿಜಯವಾಡ ಪಶ್ಚಿಮ ಎಸಿಪಿ ಹನುಮಂತ ರಾವ್ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಪತ್ನಿ ತನ್ನೊಂದಿಗಿಲ್ಲ ಎನ್ನುವ ಕೋಪವಿತ್ತು, ಪತ್ನಿ ನ್ಯಾಯಾಲಯದ ಮುಂದೆ ವಿಚ್ಛೇದನ ಅರ್ಜಿ ಸಲ್ಲಿಸಲು ಅತ್ತೆಯೇ ಕಾರಣ ಎನ್ನುವ ಕೋಪವಿತ್ತು.

ಮತ್ತಷ್ಟು ಓದಿ: ಕೇರಳದಿಂದ ಕಾನೂನು ವಿದ್ಯಾಭ್ಯಾಸಕ್ಕೆಂದು ಉಡುಪಿಗೆ ಬಂದವರು ಈಗ ಡ್ರಗ್ಸ್ ಡೀಲರ್ಸ್ !

ಪತ್ನಿ ತನ್ನಿಂದ ದೂರವಾಗಲು ಅತ್ತೆ ಮಾವನೇ ಕಾರಣ ಎಂದು ಭಾವಿಸಿ ಅತ್ತೆಯನ್ನು ತೆಂಗಿನ ಕಾಯಿ ಕಡಿಯಲು ಬಳಸುವ ಕುಡುಗೋಲಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ.

ನಾಗಮಣಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ರಾಜೇಶ್ ಬಂಧನಕ್ಕೆ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ರಾಜೇಶ್​ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ