ಬೆಂಗಳೂರು, (ನವೆಂಬರ್ 03): ಕಾರು ಹ್ಯಾಕ್ ಮಾಡಿ ಕದ್ದೊಯ್ಯುತ್ತಿದ್ದ ಖದೀಮರನ್ನ ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದಿಂದ ಫ್ಲೈಟ್ನಲ್ಲಿ ಬಂದು ಕಾರುಗಳನ್ನ ಕದಿಯುತ್ತಿದ್ದ ಹೈಟೆಕ್ ಕಳ್ಳರನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದೆ. ಬೆಂಗಳೂರಿನ ಸುತ್ತಮುತ್ತ ಹೈಎಂಡ್ ಕಾರುಗಳನ್ನೇ ಟಾರ್ಗೆಟ್ ಮಾಡಿದ್ದ ಈ ಹ್ಯಾಕಿಂಗ್ ಟೀಂ, ಕಾರಿನ ಡೋರ್ ಗಳನ್ನ ಈಜಿಯಾಗಿ ಸಾಫ್ಟ್ ವೇರ್ ಹ್ಯಾಕ್ ಮಾಡುವದರ ಮೂಲಕ ಕಾರನ್ನ ಕಂಟ್ರೋಲ್ ಗೆ ತೆಗೆದುಕೊಳ್ಳುತ್ತಾರೆ. ಇದೀಗ ಆರೋಪಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಕಾರಿನ ಡೋರ್ ಗಳನ್ನ ಈಜಿಯಾಗಿ ಸಾಫ್ಟ್ ವೇರ್ ಹ್ಯಾಕ್ ಮಾಡುವುದರ ಮೂಲಕ ಕಾರನ್ನ ಕಂಟ್ರೋಲ್ ಗೆ ತೆಗೆದುಕೊಳ್ಳುತ್ತಾರೆ. ರಾಜಸ್ಥಾನದಿಂದ ಫ್ಲೈಟ್ ನಲ್ಲೇ ಬಂದು ಆಪರೇಟ್ ಮಾಡುತ್ತಿದ್ದ ಖದೀಮರು, ಬ್ಯಾಡರಹಳ್ಳಿ, ಅನ್ನಪೂರ್ಣೇಶ್ವರಿನಗರ ಸೇರಿದಂತೆ ಹಲವು ಕಡೆ ಕಾರುಗಳನ್ನು ಕಳವು ಮಾಡಿದ್ದರು.
ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಸ್ಕಾರ್ಪಿಯೋ ಕಾರನ್ನು ಕದ್ದಿದ್ದರು. ಇನ್ನು ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್ನೋವಾ ಕ್ರಿಸ್ಟಾ ಕಾರನ್ನ ಕದ್ದೊಯ್ದಿದ್ದರು. ರಾಜ್ಯವಲ್ಲದೇ ಇತರ ರಾಜ್ಯಗಳಿಗೂ ಈ ಕಾರು ಹ್ಯಾಕಿಂಗ್ ಟೀಂ ಬೇಕಾಗಿದೆ. ಸದ್ಯಕ್ಕೆ ರಾಜಸ್ಥಾನ ಮೂಲದ ಮೂವರು ಆರೋಪಿಗಳನ್ನ ಅನ್ನಪೂರ್ಣೇಶ್ವರಿ ನಗರ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ