ಜೈನಮುನಿ ಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್; ವಿದ್ಯುತ್ ಶಾಕ್ ಕೊಟ್ಟು ಹತ್ಯೆ ಮಾಡಿದ್ರಾ ಆರೋಪಿಗಳು?

ಚಿಕ್ಕೋಡಿ(Chikkodi) ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ (Acharya Shri 108 Kamkumarnandi Maharaj)ಕೊಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​ ಸಿಕ್ಕಿದ್ದು, ಇಲ್ಲಿದೆ ನೋಡಿ.

ಜೈನಮುನಿ ಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್; ವಿದ್ಯುತ್ ಶಾಕ್ ಕೊಟ್ಟು ಹತ್ಯೆ ಮಾಡಿದ್ರಾ ಆರೋಪಿಗಳು?
ಜೈನಮುನಿ
Updated By: ಕಿರಣ್ ಹನುಮಂತ್​ ಮಾದಾರ್

Updated on: Jul 08, 2023 | 1:52 PM

ಬೆಳಗಾವಿ: ಚಿಕ್ಕೋಡಿ(Chikkodi) ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ (Acharya Shri 108 Kamkumarnandi Maharaj)ಕೊಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಹೌದು ಪೊಲೀಸರು ನೀಡಿದ್ದ ಪ್ರಾಥಮಿಕ ಮಾಹಿತಿ ಪ್ರಕಾರ ಆಶ್ರಮದಲ್ಲೇ ಜೈನಮುನಿಯವರನ್ನ ಕೊಲೆ ಮಾಡಿ, ಸಂಬಂಧಿಕರ ಗದ್ದೆಯಲ್ಲಿ ಶವ ಎಸೆದಿರುವುದಾಗಿ ಬಂಧಿತ ಆರೋಪಿಗಳು ಹೇಳಿದ್ದರು. ‘ಶ್ರೀಗಳಿಗೆ ವಿದ್ಯುತ್ ಶಾಕ್ ಕೊಟ್ಟು ಹತ್ಯೆ ಮಾಡಿದ್ದಾರೆ’ ಎಂದು ಶ್ರೀಗಳ ಪೂರ್ವಾಶ್ರಮದ ಸಂಬಂಧಿ ಪ್ರದೀಪ್ ಎನ್ನುವವರು ಹೇಳಿದ್ದಾರೆ.

ವಿದ್ಯುತ್ ಶಾಕ್ ಕೊಟ್ಟು ಹತ್ಯೆ ಮಾಡಿದ್ರಾ ಆರೋಪಿಗಳು?

ಜೈನ ಮುನಿಗಳ ಹತ್ಯೆ ಕುರಿತು ಟಿವಿ9 ಜೊತೆಗೆ ಮಾತನಾಡಿರುವ ಶ್ರೀಗಳ ಪೂರ್ವಾಶ್ರಮದ ಸಂಬಂಧಿ ಪ್ರದೀಪ್ ‘ ಶ್ರೀಗಳನ್ನು ವಿದ್ಯುತ್ ಶಾಕ್ ಕೊಟ್ಟು ಹತ್ಯೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಪೀಸ್ ಪೀಸ್ ಮಾಡಿ, ಕೊಳವೆ ಬಾವಿಗೆ ಹಾಕಿದ್ದಾರೆ. ಇನ್ನು ಕೊಲೆ ಮಾಡಿದ ಆರೋಪಿ ನಿನ್ನೆ(ಜು.7) ನಮ್ಮ ಜೊತೆಗೆ ಇದ್ದ. ನಮ್ಮ ಜೊತೆ ಗದ್ದೆಯಲ್ಲಿ ಹುಡುಕಾಟದ ನಾಟಕ ಕೂಡ ಮಾಡಿದ್ದ. ಬಳಿಕ ಪೊಲೀಸರಿಗೆ ಅನುಮಾನ ಬಂದು ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬಳಿಕ ಶ್ರೀಗಳ ಹತ್ಯೆ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ಶ್ರೀಗಳ ಪೂರ್ವಾಶ್ರಮದ ಸಂಬಂಧಿ ಹೇಳಿದ್ದಾರೆ.

ಇದನ್ನೂ ಓದಿ:ಜೈನಮುನಿ ಕಾಮಕುಮಾರ ನಂದಿ ಮಹಾರಾಜ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್; ಆಪ್ತನಿಂದಲೇ ಜೈನಮುನಿ ಹತ್ಯೆ

ಜೈನ ಮುನಿಗಳ ಶೋಧ ಕಾರ್ಯದಲ್ಲಿ ಪಾಲ್ಗೋಂಡಿದ್ದ ಪ್ರಮುಖ ಆರೋಪಿ

ಇನ್ನು ಜೈನಮುನಿಗಳು ಆಶ್ರಮದಿಂದ ಕಾಣೆಯಾಗುತ್ತಿದ್ದಂತೆ ಸ್ಥಳೀಯರು ಸೇರಿದಂತೆ, ಆಶ್ರಮದವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ನಿನ್ನೆ ಅವರ ಜೊತೆ ಸೇರಿ ಪ್ರಮುಖ ಆರೋಪಿ ಶೋಧಕಾರ್ಯದಲ್ಲಿ ಭಾಗವಹಿಸಿದ್ದ. ಹೌದು ಪ್ರಮುಖ ಆರೋಪಿಯಾಗಿರುವ ಆತ ಆಶ್ರಮದಲ್ಲಿಯೇ ಕೆಲಸ ಮಾಡುತ್ತಿದ್ದ. ಏನಾದರೂ ಕಷ್ಟವಿದ್ದಾಗ ಸ್ವಾಮೀಜಿಯವರು ಹಣ ನೀಡುತ್ತಿದ್ದರು. ಆದರೆ ಇದೀಗ ಆತನೇ ಅವರ ಅಂತ್ಯಕ್ಕೆ ಕಾರಣವಾಗಿದ್ದಾನೆ. ಸದ್ಯ ಮೃತದೇಹಕ್ಕಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಸಂಜೆ ವೇಳೆಗೆ ಮೃತದೇಹ ಪತ್ತೆಯಾಗುವ ನಿರೀಕ್ಷೆ ಇದೆ ಎಂದು ಪ್ರದೀಪ್ ತಿಳಿಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:21 pm, Sat, 8 July 23