ಬೆಂಗಳೂರು ಅ.17: ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ (Attack) ಮಾಡಿರುವ ಘಟನೆ ಬೆಂಗಳೂರಿನ (Bengaluru) ಹೆಗಡೆ ನಗರದಲ್ಲಿ ನಡೆದಿದೆ. ಸಮಿ (23) ಹಲ್ಲೆಗೊಳಗಾದ ವ್ಯಕ್ತಿ. ಏರಿಯಾ ಹುಡುಗರು ದೊಣ್ಣೆಯಿಂದ ಹಲ್ಲೆ ಮಾಡಿರುವ ಪರಿಣಾಮ ಸಮಿಗೆ ಗಂಭೀರಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೈಸೂರು: ಹಾವು ಕಚ್ಚಿ ರೈತ ಮಹಿಳೆ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಗೊದ್ದನಪುರ ಗ್ರಾಮದಲ್ಲಿ ನಡೆದಿದೆ. ಜಯಲಕ್ಷ್ಮಿ (42) ಮೃತಪಟ್ಟ ರೈತ ಮಹಿಳೆ. ತಮ್ಮ ಜಮೀನಿನಲ್ಲಿ ಅವರೆಕಾಯಿ ಕುಯ್ಯುವಾಗ ಹಾವು ಕಚ್ಚಿದೆ. ಕೂಡಲೆ ಜಯಲಕ್ಷ್ಮಿ ನನಗೆ ಹಾವು ಕಚ್ಚಿದೆ ಎಂದು ಜೋರಾಗಿ ಕೂಗಿದ್ದಾಳೆ. ತಕ್ಷಣ ಜಯಲಕ್ಷ್ಮಿ ಅವರನ್ನು ಆಸ್ಪತ್ರೆಗೆ ದಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಜಯಲಕ್ಷ್ಮಿ ಮೃತಪಟ್ಟಿದ್ದಾರೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲಮಂಗಲ: ಕ್ಷುಲ್ಲಕ ಕಾರಣಕ್ಕೆ ನಡುರಸ್ತೆಯಲ್ಲೇ ಯುವಕರು ಸಿನಿಮೀಯ ರೀತಿಯಲ್ಲಿ ಬಡಿದಾಡಿಕೊಂಡಿದ್ದಾರೆ. ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿ ಘಟನೆ ನಡೆದಿದೆ. ಗುರಾಯಿಸಿದ ಅನ್ನೋ ಕಾರಣಕ್ಕೆ ಮತ್ತಿಕೆರೆ ಸಂಜು, ತರಬನಹಳ್ಳಿ ಶಿವ ಗ್ಯಾಂಗ್ಗಳ ನಡುವೆ ಬಡಿದಾಟ ನಡೆದಿದೆ. ಪುಂಡರ ಗಲಾಟೆ ಕೆಲ ಕಾಲ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತ್ತು. ಘಟನೆಯಲ್ಲಿ ಶಿವ, ಪ್ರವೀಣ್ಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಮತ್ತಿಕೆರೆ ಸಂಜು, ಯಶಸ್ ಅನ್ನು ವಶಕ್ಕೆ ಪಡೆಯಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:40 am, Tue, 17 October 23