ರಾಯಚೂರು: ಕೊಲೆ ಮತ್ತು ರಾಬರಿ ಕೇಸ್ನ ವಿಚಾರಣಾಧೀನ ಖೈದಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹಿಂದಿರುಗೊ ವೇಳೆ ಪರಾರಿಯಾಗಿರುವಂತಹ ಘಟನೆ ನಗರದ ಜಿಲ್ಲಾ ನ್ಯಾಯಾಲಯದ ಬಳಿ ನಡೆದಿದೆ. ಮಹಾರಾಷ್ಟ್ರ ಮೂಲದ ಹರ್ಷ, ರಾಜೇಶ ಖನ್ನಾ ಮತ್ತು ಗೋವಿಂದ ಪಲ್ಲು ಪರಾರಿಯಾದ ವಿಚಾರಣಾಧೀನ ಖೈದಿಗಳು. ಮಾನ್ವಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್ನ ಆರೋಪಿಗಳು ಎಸ್ಕೇಪ್ ಆದ ಖೈದಿಗಳಿಗಾಗಿ ಪೊಲೀಸರಿಂದ ತೀವ್ರ ಶೋಧ ನಡೆಸಲಾಗುತ್ತಿದೆ.
ಜಾತ್ರೆಗೆ ಅಡ್ಡಿಯಾದ ವೈರ್ ತೆಗೆಯಲು ಹೋಗಿ ಯುವಕ ಕೆಳಗೆ ಬಿದ್ದು ಗಾಯ:
ಧಾರವಾಡ: ದ್ಯಾಮವ್ವ, ದುರ್ಗವ್ವರ ದೇವಿ ಜಾತ್ರೆಯಲ್ಲಿ ಹೊನ್ನಾಟಕ್ಕೆ ವೈರ್ ಅಡ್ಡಿ ಹಿನ್ನೆಲೆ, ವೈರ್ ತೆಗೆಯಲು ಹೋಗಿ ಯುವಕ ಕೆಳಗೆ ಬಿದ್ದಿರುವಂತಹ ಘಟನೆ ಜಿಲ್ಲೆಯ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ. ಜಾತ್ರೆ ಪ್ರಯುಕ್ತ ಗ್ರಾಮದಲ್ಲಿ ನಡೆದಿದ್ದ ಹೊನ್ನಾಟ ಮನೆಯೊಂದರ ಎದುರಿಗಿದ್ದ ವೈರ್ ಅಡ್ಡಿಯಾಗಿದೆ. ವೈರ್ ತೆಗೆಯಲು ಯುವಕ ಛಾವಣಿ ಏರಿದ್ದು, ಮುರಿದು ಕೆಳಗೆ ಬಿದಿದ್ದಾನೆ. ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿ:
Arjun Tendulkar: ಭರ್ಜರಿ ಯಾರ್ಕರ್ಗೆ ಕಿಶನ್ ಕ್ಲೀನ್ ಬೌಲ್ಡ್: ಅರ್ಜುನ್ ತೆಂಡೂಲ್ಕರ್ಗೆ ಸಿಗಲಿದೆಯಾ ಚಾನ್ಸ್?
ಜಾರ್ಖಂಡ್ನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಡಿಯೋ ವೈರಲ್; 10 ಜನರ ಬಂಧನ