ಮನೆ ಮುಂದೆ ನಿಲ್ಲಿಸಿದ ಆಟೋ ಚಕ್ರಗಳೇ ಇವರಿಗೆ ಟಾರ್ಗೆಟ್.. ಕಳ್ಳರ ಕೈಚಳಕಕ್ಕೆ ಕುಟುಂಬ ಕಂಗಾಲು

|

Updated on: Dec 01, 2020 | 11:26 AM

ಎರಡು ತಿಂಗಳಲ್ಲಿ ಒಂದೇ ಮನೆಯ ಮೂರು ಆಟೋಗಳ ಚಕ್ರವನ್ನ ಖದೀಮರು ಕಳ್ಳತನ ಮಾಡಿದ್ದಾರೆ. ಇದರಿಂದ ಬೇಸತ್ತ ಕುಟುಂಬ ಚಿಂತೆಗೆ ಬಿದ್ದಿದೆ. ತಮ್ಮ ಮೂರು ಆಟೋಗಳ ಚಕ್ರವನ್ನು ಕಳೆದುಕೊಂಡ ಮಾಲೀಕ ಕಣ್ಣೀರು ಹಾಕುತ್ತಿದ್ದಾನೆ.

ಮನೆ ಮುಂದೆ ನಿಲ್ಲಿಸಿದ ಆಟೋ ಚಕ್ರಗಳೇ ಇವರಿಗೆ ಟಾರ್ಗೆಟ್.. ಕಳ್ಳರ ಕೈಚಳಕಕ್ಕೆ ಕುಟುಂಬ ಕಂಗಾಲು
ಕೊಪ್ಪಳದಲ್ಲಿ ಆಟೋ ಚಕ್ರಗಳ ಕಳ್ಳತನ
Follow us on

ಕೊಪ್ಪಳ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳ್ಳರು ಕೈಚಳಕ ತೋರಿಸುವುದರಲ್ಲಿ ನಿಸ್ಸೀಮರಾಗಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಆಟೋಗಳ ಚಕ್ರವನ್ನು ಖದೀಮರು ಕದ್ದಿರುವ ಘಟನೆ ನಗರದ 15 ನೇ ವಾರ್ಡ್​ನಲ್ಲಿ ನಡೆದಿದೆ.

ಕಳೆದ ಎರಡು ತಿಂಗಳಿನಿಂದ ಕೆಲ ಕಿಡಿಗೇಡಿಗಳು ಮನೆ ಮುಂದೆ ನಿಲ್ಲಿಸಿದ ಆಟೋಗಳ ಮೇಲೆ ಕಣ್ಣು ಹಾಕಿದ್ದಾರೆ. ಕತ್ತಲಾಗುತ್ತಿದ್ದಂತೆ ತಮ್ಮ ಕೈ ಚಳಕ ತೋರಿಸುತ್ತಿದ್ದಾರೆ. ಕಳ್ಳರು ಯಾವುದೇ ಅನುಮಾನ ಬರದಂತೆ ಕಳ್ಳತನ ಮಾಡ್ತಿದ್ದಾರೆ. ಎರಡು ತಿಂಗಳಲ್ಲಿ ಒಂದೇ ಮನೆಯ ಮೂರು ಆಟೋಗಳ ಚಕ್ರವನ್ನ ಖದೀಮರು ಕಳ್ಳತನ ಮಾಡಿದ್ದಾರೆ. ಇದರಿಂದ ಬೇಸತ್ತ ಕುಟುಂಬ ಚಿಂತೆಗೆ ಬಿದ್ದಿದೆ. ತಮ್ಮ ಮೂರು ಆಟೋಗಳ ಚಕ್ರವನ್ನು ಕಳೆದುಕೊಂಡ ಮಾಲೀಕ ಕಣ್ಣೀರು ಹಾಕುತ್ತಿದ್ದಾನೆ.

ಸಾಲ ಮಾಡಿ ಮೂರು ಮಕ್ಕಳಿಗೆ ಆಟೋ ಕೊಡಿಸಿದ್ವಿ. ಒಂದು ಚಕ್ರಕ್ಕೆ ₹ 5000 ಹಾಕಬೇಕು, ಚಕ್ರದ ಜೊತೆಗೆ ಹಾರ್ನ್ ಕೂಡಾ ಕದ್ದೊಯ್ದಿದ್ದಾರೆ. ದುಡಿಮೆ‌ ಇಲ್ಲ ನಾವೇನ್ ಮಾಡೋಣ ಸ್ವಾಮಿ ಎಂದು ಮಕ್ಕಳಿಗೆ ಆಟೋ ಕೊಡಿಸಿದ್ದ ತಾಯಿ ಕಣ್ಣೀರು ಹಾಕಿದ್ದಾರೆ. ವಿಪರ್ಯಾಸವೆಂದ್ರೆ ಆಟೋ ಚಕ್ರಗಳು ಕಳ್ಳತನವಾದ್ರೂ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

Published On - 10:41 am, Tue, 1 December 20