ವಿಜಯಪುರ, ಮಾ.21: ಆಕಸ್ಮಿಕವಾಗಿ ನಡೆದಿದ್ದ ಅವಘಡಕ್ಕೆ 70 ವರ್ಷದ ದುಂಡಪ್ಪ ಹರಿಜನ ಎಂಬುವವರನ್ನು ಬೆಂಕಿಯಲ್ಲಿ ಹಾಕಿ ಕೊಲೆಗೆ ಯತ್ನಿಸಿದ ಘಟನೆ ವಿಜಯಪುರ(Vijayapura) ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ನಡೆದಿದೆ. ಕಳೆದ ಮಾರ್ಚ್ 15 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರು ಜನರ ವಿರುದ್ದ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳಾದ ಹನುಮಂತ ಮಲಘಾಣ, ಲಕ್ಷ್ಮಣ ವಾಲೀಕಾರ ಹಾಗೂ ಪವನ ಆಸಂಗಿ ಎಂಬುವವರನ್ನು ಬಂಧಿಸಲಾಗಿದೆ.
ವೃದ್ದ ದುಂಡಪ್ಪ, ತನ್ನ ಜಮೀನಿನಲ್ಲಿದ್ದ ಕಬ್ಬಿನ ರವದಿಗೆ ಬೆಂಕಿ ಹಚ್ಚಿದ್ದ. ಈ ವೇಳೆ ಆಕಸ್ಮಿಕವಾಗಿ ಗಾಳಿಗೆ ಬೆಂಕಿ ಹಾರಿ ಪಕ್ಕದ ಮಲ್ಲಪ್ಪ ಆಸಂಗಿ ಎಂಬುವವರ ಜಮೀನಿನಲ್ಲಿದ್ದ ಮೇವಿನ ಬಣವಿಗೆ ಬೆಂಕಿ ಬಿದ್ದು ಸುಟ್ಟು ಭಸ್ಮವಾಗಿತ್ತು. ಈ ವಿಚಾರವಾಗಿ ದುಂಡಪ್ಪ ಹಾಗೂ ಮಲ್ಲಪ್ಪ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಮೇವಿನ ಬದಲಾಗಿ ಮೇವು ನೀಡುತ್ತೇನೆ, ಇಲ್ಲವೇ ಸುಟ್ಟ ಮೇವಿಗೆ ಪರಿಹಾರ ನೀಡುತ್ತೇನೆಂದ ವೃದ್ದ ಹೇಳಿದ್ದ. ಈ ವೇಳೆ ಸಿಟ್ಟಾದ ಮಲ್ಲಪ್ಪ ಹಾಗೂ ಆತನ ಸಂಬಂಧಿಕ ಹನುಮಂತ ಮಲಘಾಣ ಸೇರಿ ಹಲ್ಲೆ ನಡೆಸಿ, ನಮ್ಮ ಮೇವಿನ ಬಣವೆಗೆ ಬೆಂಕಿ ಹಾಕಿದ್ದೀಯಾ, ನಿನ್ನನ್ನು ಸುಟ್ಟು ಹಾಕುತ್ತೇವೆಂದು ಬೆದರಿಕೆ ಒಡ್ಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ವಿದೇಶಿ ಮಹಿಳೆ ಅನುಮಾನಾಸ್ಪದ ಸಾವು; ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ
ಈ ವೇಳೆ ವೃದ್ದ ದುಂಡಪ್ಪನನ್ನು ಎತ್ತಿ, ಉರಿಯೋ ಬೆಂಕಿಗೆ ಹನುಮಂತ ವಾಲೀಕಾರ, ಸಂಗಪ್ಪ ಆಸಂಗಿ ಎಸೆದಿದ್ದಾರೆ. ದುಂಡಪ್ಪನ ಬೆನ್ನು ಹಾಗೂ ಕೈಗಳಿಗೆ ಬೆಂಕಿ ತಗುಲಿ, ಸುಟ್ಟ ಗಾಯಗಳಿಂದ ಬಳಿಲಿರುವ ದುಂಡಪ್ಪನವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಆರು ಜನರ ಮೇಲೆ ಪ್ರಕರಣ ದಾಖಲಾಗಿದ್ದು, ವಿಜಯಪುರ ಗ್ರಾಮೀಣ ಡಿವೈಎಸ್ಪಿ ಜಿ ಜಿ ತಳಕಟ್ಟಿ, ಸಿಪಿಐ ಆನಂದರಾವ್ ಎಸ್ ಎಲ್ ನೇತೃತ್ವದಲ್ಲಿ ತನಿಖೆ ಶುರುವಾಗಿದೆ.
ಚಿತ್ರದುರ್ಗ: ತಾಲೂಕಿನ ಸಿಂಗಾಪುರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿ ಕುಟುಂಬಸ್ಥರೇ ಹೊಡೆದು ಕೊಲೆ ಮಾಡಿದ್ದಾರೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಶಿವಕುಮಾರ್(31) ಮೃತ ರ್ದುದೈವಿ. ಈ ಕುರಿತು ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ : ಡೆಂಗ್ಯೂ ಜ್ವರಕ್ಕೆ ಬಾಲಕಿ ಅಸುನೀಗಿದ ಘಟನೆ ಹಾಸನದಲ್ಲಿ ನಡೆದಿದೆ. ಸಾತ್ವಿಕ (7) ಮೃತ ಬಾಲಕಿ. ಕಳೆದ ಮೂರ್ನಾಲ್ಕು ದಿನದಿಂದ ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನಲೆ ಇವರನ್ನು ಖಾಸಗಿ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಬಳಿಕ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಿಮ್ಸ್ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾತ್ವಿಕ ಕೊನೆಯುಸಿರೆಳೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ