ಮಹಿಳಾ ಕಂಡಕ್ಟರ್ ಮೇಲೆ ಆ್ಯಸಿಡ್ ದಾಳಿ: ಬಯಲಾಯ್ತು ಪ್ರೇಮ ಬಣ್ಣ

|

Updated on: Dec 21, 2019 | 2:08 PM

ಬೆಂಗಳೂರು: ಡಿಸೆಂಬರ್ 19ರಂದು ನಗರದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಎಂಟಿಸಿ ಮಹಿಳಾ ಕಂಡಕ್ಟರ್ ಮೇಲೆ ಆ್ಯಸಿಡ್ ಎರಚಲಾಗಿತ್ತು. ಇದೀಗ ಆ್ಯಸಿಡ್ ದಾಳಿಯ ಹಿಂದಿನ ನಿಜ ಬಣ್ಣ ಬಯಲಾಗಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಸಂಬಂಧ ಹೊಂದಿದ್ದ ಸಂತ್ರಸ್ತೆ: ಸಂತ್ರಸ್ತೆ ಮಹಿಳಾ ಕಂಡಕ್ಟರ್ ಮೈದುನ ಅರುಣ್‌, ಪೀಣ್ಯ ಡಿಪೋದಲ್ಲಿ‌ ಬಿಎಂಟಿಸಿ ಬಸ್ ಚಾಲಕನಾಗಿದ್ದ. ಅತ್ತಿಗೆಯ ಜೊತೆ ಆತ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇತ್ತೀಚೆಗೆ ಮಹಿಳಾ ಕಂಡಕ್ಟರ್, ಅರುಣ್​ನನ್ನು ನಿರ್ಲಕ್ಷಿಸುತ್ತಿದ್ದರು. ಸಾಲದ್ದಕ್ಕೆ ಮತ್ತೊಬ್ಬನೊಂದಿಗೆ […]

ಮಹಿಳಾ ಕಂಡಕ್ಟರ್ ಮೇಲೆ ಆ್ಯಸಿಡ್ ದಾಳಿ: ಬಯಲಾಯ್ತು ಪ್ರೇಮ ಬಣ್ಣ
Follow us on

ಬೆಂಗಳೂರು: ಡಿಸೆಂಬರ್ 19ರಂದು ನಗರದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಎಂಟಿಸಿ ಮಹಿಳಾ ಕಂಡಕ್ಟರ್ ಮೇಲೆ ಆ್ಯಸಿಡ್ ಎರಚಲಾಗಿತ್ತು. ಇದೀಗ ಆ್ಯಸಿಡ್ ದಾಳಿಯ ಹಿಂದಿನ ನಿಜ ಬಣ್ಣ ಬಯಲಾಗಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಸಂಬಂಧ ಹೊಂದಿದ್ದ ಸಂತ್ರಸ್ತೆ:
ಸಂತ್ರಸ್ತೆ ಮಹಿಳಾ ಕಂಡಕ್ಟರ್ ಮೈದುನ ಅರುಣ್‌, ಪೀಣ್ಯ ಡಿಪೋದಲ್ಲಿ‌ ಬಿಎಂಟಿಸಿ ಬಸ್ ಚಾಲಕನಾಗಿದ್ದ. ಅತ್ತಿಗೆಯ ಜೊತೆ ಆತ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇತ್ತೀಚೆಗೆ ಮಹಿಳಾ ಕಂಡಕ್ಟರ್, ಅರುಣ್​ನನ್ನು ನಿರ್ಲಕ್ಷಿಸುತ್ತಿದ್ದರು. ಸಾಲದ್ದಕ್ಕೆ ಮತ್ತೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ಬಗ್ಗೆ ಮಹಿಳೆಗೆ ಹಲವಾರು ಸಲ ವಾರ್ನ್ ಸಹ ಮಾಡಿದ್ದನಂತೆ. ಕೊನೆಗೆ ಇದರಿಂದ ಸಿಟ್ಟಿಗೆದ್ದು ಎರಡೂವರೆ ತಿಂಗಳ ಹಿಂದೆಯೇ ಆ್ಯಸಿಡ್ ತಂದಿಟ್ಟುಕೊಂಡಿದ್ದಾನೆ. ಸ್ನೇಹಿತ ಕುಮಾರ್ ಜೊತೆ ಸೇರಿ ಮಹಿಳೆ ಮೇಲೆ ಆ್ಯಸಿಡ್‌ ದಾಳಿ ನಡೆಸಿ ಪರಾರಿಯಾಗಿದ್ದಾನೆ.

5-6 ತಿಂಗಳ ಹಿಂದೆ ಸಂತ್ರಸ್ತೆಗೆ ಅನುಮಾನಾಸ್ಪದವಾಗಿ ಆಕ್ಸಿಡೆಂಟ್ ಸಹ ಆಗಿತ್ತು. ಆದರೆ ಯಾವುದೇ ದೂರು ದಾಖಲಾಗಿರಲಿಲ್ಲ. ಆಕ್ಸಿಡೆಂಟ್ ಸಹ ಇದೇ ಆರೋಪಿ ಮಾಡಿಸಿದ್ದನಾ? ಎಂಬ ಬಗ್ಗೆ ತನಿಖೆಯ ನಂತರ ಗೊತ್ತಾಗಲಿದೆ. ಸದ್ಯ ಇಬ್ಬರು ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Published On - 1:28 pm, Sat, 21 December 19