ಯುವಕರನ್ನ ವಂಚಿಸುತ್ತಿದ್ದ ನಕಲಿ ಮಿಲಿಟರಿ ಅಧಿಕಾರಿ ಸೆರೆ
ಬೆಳಗಾವಿ: ಸೇನೆಗೆ ಸೇರಿಸುವುದಾಗಿ ಯುವಕರನ್ನು ವಂಚಿಸುತ್ತಿದ್ದ ನಕಲಿ ಮಿಲಿಟರಿ ಅಧಿಕಾರಿಯನ್ನು ಬೆಳಗಾವಿಯ ಕ್ಯಾಂಪ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಾಗರ್ ಪಾಟೀಲ್ ಬಂಧಿತ ಆರೋಪಿ. ಬಂಧಿತನಿಂದ ಎರಡು ನಕಲಿ ಪಿಸ್ತೂಲ್, ನಕಲಿ ಸೇನಾ ಸಮವಸ್ತ್ರ, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಗುರ್ಲಗಂಜಿ ಗ್ರಾಮದ ಸಾಗರ್, ಬೆಳಗಾವಿಯ ಅನಗೋಳ ಗ್ರಾಮದಲ್ಲಿ ವಾಸವಿದ್ದ. ಬೆಳಗ್ಗೆ ರನ್ನಿಂಗ್ ಪ್ರ್ಯಾಕ್ಟೀಸ್ಗೆ ಬಂದ ಯುವಕರನ್ನೇ ಟಾರ್ಗೆಟ್ ಮಾಡ್ತಿದ್ದ. ಕಳೆದ ಅಕ್ಟೋಬರ್ ತಿಂಗಳಲ್ಲಿ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಸೇನಾ ಭರ್ತಿ […]
ಬೆಳಗಾವಿ: ಸೇನೆಗೆ ಸೇರಿಸುವುದಾಗಿ ಯುವಕರನ್ನು ವಂಚಿಸುತ್ತಿದ್ದ ನಕಲಿ ಮಿಲಿಟರಿ ಅಧಿಕಾರಿಯನ್ನು ಬೆಳಗಾವಿಯ ಕ್ಯಾಂಪ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಾಗರ್ ಪಾಟೀಲ್ ಬಂಧಿತ ಆರೋಪಿ. ಬಂಧಿತನಿಂದ ಎರಡು ನಕಲಿ ಪಿಸ್ತೂಲ್, ನಕಲಿ ಸೇನಾ ಸಮವಸ್ತ್ರ, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಮೂಲತಃ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಗುರ್ಲಗಂಜಿ ಗ್ರಾಮದ ಸಾಗರ್, ಬೆಳಗಾವಿಯ ಅನಗೋಳ ಗ್ರಾಮದಲ್ಲಿ ವಾಸವಿದ್ದ. ಬೆಳಗ್ಗೆ ರನ್ನಿಂಗ್ ಪ್ರ್ಯಾಕ್ಟೀಸ್ಗೆ ಬಂದ ಯುವಕರನ್ನೇ ಟಾರ್ಗೆಟ್ ಮಾಡ್ತಿದ್ದ. ಕಳೆದ ಅಕ್ಟೋಬರ್ ತಿಂಗಳಲ್ಲಿ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಸೇನಾ ಭರ್ತಿ ನಡೆದಿತ್ತು. ಈ ವೇಳೆ ಸೇನಾ ಸಮವಸ್ತ್ರ ಧರಿಸಿ ಗ್ರೌಂಡ್ ಬಳಿ ಆಗಮಿಸಿದ್ದ ಸಾಗರ್, ಸೇನಾ ಭರ್ತಿಗೆ ಬಂದ ಯುವಕರಿಗೆ ತಾನು ಮಿಲಿಟರಿ ಅಧಿಕಾರಿ ಅಂತಾ ನಂಬಿಸಿದ್ದ.
ಸೇನೆಗೆ ಸೇರಲು ನಾನು ನಿಮಗೆ ತರಬೇತಿ ನೀಡುವೆ ಎಂದು ನಂಬಿಸಿ, ಅಕ್ಟೋಬರ್ 28ರಂದು ಓರ್ವ ಯುವಕನಿಂದ 1.10ಲಕ್ಷ ಹಣ ಪಡೆದಿದ್ದ. ಅಷ್ಟೇ ಅಲ್ಲದೇ ಇನ್ನೂ ಹಲವು ಯುವಕರಿಂದ ಹಣ ಪಡೆದಿದ್ದಾನೆ ಎನ್ನಲಾಗಿದೆ. ಮೋಸ ಹೋದ ಯುವಕರು ಈ ಕುರಿತು ಕ್ಯಾಂಪ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ನಕಲಿ ಮಿಲಿಟರಿ ಅಧಿಕಾರಿ ಸಾಗರ್ ಪಾಟೀಲ್ನನ್ನು ಬಂಧಿಸಿದ್ದಾರೆ.