ಬಳ್ಳಾರಿ: ಲಂಚ ಪಡೆಯುವಾಗ ಸಿಬಿಐ ಬಲೆಗೆ ಬಿದ್ದ ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರಿಗಳು

| Updated By: Rakesh Nayak Manchi

Updated on: Feb 09, 2023 | 5:26 PM

ಸಾಮಾಜಿಕ ಹೋರಾಟಗಾರರಿಂದ ಲಂಚ ಪಡೆಯುತ್ತಿದ್ದಾಗ ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ ಬಿದ್ದಿದ್ದಾರೆ. ಬಳ್ಳಾರಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ.

ಬಳ್ಳಾರಿ: ಲಂಚ ಪಡೆಯುವಾಗ ಸಿಬಿಐ ಬಲೆಗೆ ಬಿದ್ದ ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರಿಗಳು
ಸಿಬಿಐ ಅಧಿಕಾರಿಗಳ ಕಾರು
Follow us on

ಬಳ್ಳಾರಿ: ಸಾಮಾಜಿಕ ಹೋರಾಟಗಾರರಿಂದ ಲಂಚ ಪಡೆಯುತ್ತಿದ್ದಾಗ ಕೇಂದ್ರ ಪುರಾತತ್ವ ಇಲಾಖೆಯ (Central Archaeological Survey Department) ಮೂವರು ಅಧಿಕಾರಿಗಳು ಸಿಬಿಐ (CBI) ಬಲೆಗೆ ಬಿದ್ದಿದ್ದಾರೆ. ಬಳ್ಳಾರಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಪ್ರಶಾಂತ್ ರೆಡ್ಡಿ, ಯೋಗೀಶ್, ಮೊಹಮದ್ ಗೌಸ್ ಬಂಧಿತ ಅಧಿಕಾರಿಗಳಾಗಿದ್ದಾರೆ. ಮನೆ ಕಟ್ಟಲು ಪುರಾತತ್ವ ಇಲಾಖೆಯಿಂದ NOC ನೀಡಲು‌ ಹಣ ಬೇಡಿಕೆ ಇಟ್ಟಿದ್ದ ಬಗ್ಗೆ ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಅವರು ಸಿಬಿಐಗೆ ದೂರು ನೀಡಿದ್ದರು. ಅದರಂತೆ ಖಾಸಗಿ ಹೋಟೆಲ್​ನಲ್ಲಿ ಲಂಚದ ಹಣವನ್ನು ಮುಂಗಡವಾಗಿ ನೀಡುತ್ತಿದ್ದಾಗ ದಾಳಿ ಮಾಡಿದ ಸಿಬಿಐ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ.

ರಾಜಶೇಖರ ಮುಲಾಲಿ ಎಂಬವರು ಬಳ್ಳಾರಿಯ ಇನ್ ಫ್ಯಾಂಟ್ರಿ ರಸ್ತೆಯಲ್ಲಿರುವ ಕೋಟೆ ಪ್ರದೇಶದಲ್ಲಿ ಮನೆ ಕಟ್ಟಲು ಮುಂದಾಗಿದ್ದಾರೆ. ಇದಕ್ಕಾಗಿ ಅವರು ಪುರಾತತ್ವ ಇಲಾಖೆಯಿಂದ NOC ನೀಡಲು‌ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಒಂದೂವರೆ ಲಕ್ಷ ನೀಡುವಂತೆ ಅಧಿಕಾರಿಗಳು ಬೇಡಿಕೆ ಇಟ್ಟಿದ್ದಾರೆ. ಅಧಿಕಾರಿಗಳು ಲಂಚಕ್ಕೆ ಬೇಡಿಕೆಯಿಟ್ಟ ಬಗ್ಗೆ ರಾಜಶೇಖರ ಮುಲಾಲಿ ಅವರು ಸಿಬಿಐಗೆ ದೂರು ನೀಡಿದ್ದರು. ಅದರಂತೆ ಖಾಸಗಿ ಹೋಟೆಲ್​ನಲ್ಲಿ ಮುಂಗಡ 50 ಸಾವಿರ ರೂಪಾಯಿ ಹಣ ಪಡೆಯಲು ಬಂದಾಗ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಬಳಿಕ ಬಂಧಿತರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Delhi Crime: ಮದುವೆ ಮನೆಯಲ್ಲಿ ಖುಷಿಯನ್ನು ಇಮ್ಮಡಿಗೊಳಿಸಲು ಬಂದ ಮ್ಯೂಸಿಕ್​ ಬ್ಯಾಂಡ್​ನವರಿಂದ ಕೊಲೆಯೇ ನಡೆದು ಹೋಯ್ತು

ಮಹಿಳೆ ಕೊಂದು ದೇಹದ ಮೇಲೆ ನೀರು ಹಾಕಿ ಬಾವಿಗೆ ಹಾರಿದ್ದಾಳೆ ಎಂದು ನಾಟಕ

ಗದಗ: ಗೃಹಿಣಿಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿರುವ ಸಾಸ್ವಿಹಳ್ಳಿ ಪಾರ್ಮ್ ನಡೆದಿದೆ. ರುಬಿನಾ ಕಣವಿ (28) ಮೃತ ಗೃಹಿಣಿಯಾಗಿದ್ದಾಳೆ. ಘಟನೆ ನಂತರ ಮೂರು ವರ್ಷದ ಮಗು ನಾಪತ್ತೆಯಾಗಿದೆ. ಇನ್ನು ರುಬಿನಾ ಸಾವಿಗೆ ಪತಿ ದಾವಲ್ ಸಾಬ್ ಮತ್ತು ಆತನ ಕುಟುಂಬಸ್ಥರೇ ಕಾರಣ ಎಂದು ಆರೋಪಿಸಿದ ಮೃತಳ ಕುಟುಂಬಸ್ಥರು, ರುಬಿನಾಳನ್ನು ಕೊಂದು ದೇಹದ ಮೇಲೆ ನೀರು ಹಾಕಿ ಬಾವಿಗೆ ಹಾರಿದ್ದಾಳೆ ಅಂತ ನಾಟವಾಡಿದ್ದಾನೆ ಎಂದಿದ್ದಾರೆ. ರುಬಿನಾಳೊಂದಿಗೆ ಪತಿ ಮತ್ತು ಆತನ ಕುಟುಂಬಸ್ಥರು ಸಾಕಷ್ಟು ಕಿರುಕುಳ ನೀಡುತ್ತಿದ್ದರು, ಜಗಳು ಕೂಡ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಜಾವೇದ್ ಕಣವಿ ಎನ್ನುವ 3 ವರ್ಷದ ಮಗುವನ್ನು ಪತಿ ಕುಟುಂಬಸ್ಥರು ಎಸ್ಕೇಪ್ ಮಾಡಿದ್ದಾರೆ ಎಂದು ಗೋಳಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ