Menstruation: ರಿಯಾದ್‌ನಿಂದ ವಿಮಾನದಲ್ಲಿ ಬಂದ ಕೇರಳದ ಮಹಿಳೆ ಚಿನ್ನ ಅಡಗಿಸಿಟ್ಟುಕೊಂಡು ಕಳ್ಳಸಾಗಣೆ ಮಾಡಿದ್ದು ಹೇಗೆ ಗೊತ್ತಾ!?

ಚಿನ್ನ ಕಳ್ಳಸಾಗಣೆ ಬಗ್ಗೆ ನಿತ್ಯವೂ ಸುದ್ದಿ ನೋಡುತ್ತಿರುತ್ತೇವೆ. ವಿದೇಶದಿಂದ ಅದರಲ್ಲೂ ಅರಬ್ ರಾಷ್ಟ್ರಗಳಿಂದ ಅಕ್ರಮವಾಗಿ ಚಿನ್ನ ಸಾಗಿಸುವಾಗ ಭಾರತದ ಯಾವುದಾದರೂ ವಿಮಾನ ನಿಲ್ದಾಣಕ್ಕೆ ಬಂದು ತಗಲಾಕಿಕೊಳ್ಳುತ್ತಾರೆ. ಕಳ್ಳಸಾಗಣೆದಾರರು ಆಯ್ಕೆ ಮಾಡಿಕೊಳ್ಳುವ ಮಾರ್ಗಗಳು ನಿಜಕ್ಕೂ ಒಮ್ಮೊಮ್ಮೆ ಕುತೂಹಲಕಾರಿಯಾಗಿರುತ್ತದೆ.

Menstruation: ರಿಯಾದ್‌ನಿಂದ ವಿಮಾನದಲ್ಲಿ ಬಂದ ಕೇರಳದ ಮಹಿಳೆ ಚಿನ್ನ ಅಡಗಿಸಿಟ್ಟುಕೊಂಡು ಕಳ್ಳಸಾಗಣೆ ಮಾಡಿದ್ದು ಹೇಗೆ ಗೊತ್ತಾ!?
ಕೇರಳದ ಮಹಿಳೆ ಸ್ಯಾನಿಟರಿ ನ್ಯಾಪ್ಕಿನ್​ನಲ್ಲಿ ಚಿನ್ನ ಅಡಗಿಸಿಟ್ಟುಕೊಂಡು ಕಳ್ಳಸಾಗಣೆ ಮಾಡಿದರು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 10, 2023 | 6:23 AM

ಚಿನ್ನ ಕಳ್ಳಸಾಗಣೆ (Gold Smuggling) ಬಗ್ಗೆ ನಿತ್ಯವೂ ಸುದ್ದಿ ನೋಡುತ್ತಿರುತ್ತೇವೆ. ವಿದೇಶದಿಂದ ಅದರಲ್ಲೂ ದುಬೈ, ರಿಯಾದ್‌ (Riyadh) ಅಂತಹ ಅರಬ್ ರಾಷ್ಟ್ರಗಳಿಂದ ಅಕ್ರಮವಾಗಿ ಚಿನ್ನ ಸಾಗಿಸುವಾಗ ಭಾರತದ ಯಾವುದಾದರೂ ವಿಮಾನ ನಿಲ್ದಾಣಕ್ಕೆ ಬಂದು ತಗಲಾಕಿಕೊಳ್ಳುತ್ತಾರೆ. ಕಳ್ಳಸಾಗಾಣಿಕೆಗಾಗಿ ಕಳ್ಳಸಾಗಣೆದಾರರು ಆಯ್ಕೆ ಮಾಡಿಕೊಳ್ಳುವ ಮಾರ್ಗಗಳು ನಿಜಕ್ಕೂ ಒಮ್ಮೊಮ್ಮೆ ಕುತೂಹಲಕಾರಿಯಾಗಿರುತ್ತದೆ. ಅಧಿಕಾರಿಗಳು ಎಷ್ಟೇ ಕ್ರಮ ಕೈಗೊಂಡರೂ ಚಿನ್ನದ ಮೇಲಿನ ವ್ಯಾಮೋಹವೋ ಏನೋ, ಅಕ್ರಮವಂತೂ ನಿಂತಿಲ್ಲ. ಕಳ್ಳಸಾಗಣೆದಾರರು ತಮ್ಮ ಸಾಹಸ ಜಾರಿಯಲ್ಲಿಟ್ಟಿರುತ್ತಾರೆ. ಇತ್ತೀಚಿಗೆ ಕೇರಳದ ಮಹಿಳೆಯೊಬ್ಬರು (Kerala Woman) ಮಾಡಿದ್ದೇನು ಅಂತ ಗೊತ್ತಾದ್ರೆ ಸ್ವಲ್ಪ ಶಾಕ್ ಆಗುವುದು ಗ್ಯಾರಂಟಿ.

ವಿಷಯ ಏನೆಂದರೆ… ರಿಯಾದ್ ನಿಂದ ಮಹಿಳೆಯೊಬ್ಬರು ಕೊಚ್ಚಿಯ ನೆಡುಂಬಸ್ಸೆರಿ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ವಿಮಾನ ನಿಲ್ದಾಣದಿಂದ ಹೊರಡುವಾಗ ಗ್ರೀನ್ ಚಾನೆಲ್ ಮೂಲಕ ಹಾದುಹೋಗಲು ಪ್ರಯತ್ನಿಸಿದಾಗ, ಕಸ್ಟಮ್ಸ್ ಅಧಿಕಾರಿಗಳು ಅನುಮಾನಗೊಂಡು ಆಕೆಯನ್ನು ಪ್ರಶ್ನಿಸಿದರು. ದೈಹಿಕ ಪರೀಕ್ಷೆ ನಡೆಸಬೇಕು ಎಂದು ಅಧಿಕಾರಿಗಳು ಕೇಳಿದ್ದಾರೆ.

ಆಕೆ ತಾನು ಋತುಮತಿ ಸ್ಥಿತಿಯಲ್ಲಿರುವುದರಿಂದ (Menstruation) ದೈಹಿಕ ಪರೀಕ್ಷೆಗೆ ಸಹಕರಿಸುವುದಿಲ್ಲ ಎಂದು ಉತ್ತರಿಸಿದ್ದಾರೆ. ಆದರೆ ಮಹಿಳಾ ಅಧಿಕಾರಿಗಳು ಆಕೆಯ ಮಾತನ್ನು ನಂಬಿಲ್ಲ. ಪರೀಕ್ಷೆಯಲ್ಲಿ.. ಮಹಿಳೆಯ ಖಾಸಗಿ ಭಾಗದಲ್ಲಿ ಐದು ಚಿನ್ನದ ಬಿಸ್ಕತ್ತುಗಳನ್ನು ತುರುಕಿಕೊಂಡಿರುವುದು ಪತ್ತೆಯಾಗಿದೆ. ಅಲ್ಲಿ ಅಡಗಿಸಿಟ್ಟುಕೊಂಡಿದ್ದ ಚಿನ್ನದ ಬೆಲೆ ಸುಮಾರು ರೂ. 30 ಲಕ್ಷ.

ಇನ್ನೂ ಆಘಾತಕಾರಿ ಸಂಗತಿಯೆಂದರೆ ಅಧಿಕಾರಿಗಳನ್ನು ಮೂರ್ಖರನ್ನಾಗಿಸಲು ಆ ಮಹಿಳೆ ಕೃತಕವಾಗಿ, ತಾನು ಋತುಚಕ್ರ ಅವಸ್ಥೆಯಲ್ಲಿರುವುದಾಗಿ ಸಾಬೀತುಪಡಿಸಲು ಪ್ರಯತ್ನಿಸಿದ್ದಳು ಎಂಬುದು ತನಿಖೆ ವೇಳೆ ಬಟಾಬಯಲಾಗಿದೆ. ಸ್ಯಾನಿಟರಿ ನ್ಯಾಪ್ಕಿನ್‌ನಲ್ಲಿ (Sanitary Napkin) ಚಿನ್ನವನ್ನು ಬಚ್ಚಿಟ್ಟು, ನ್ಯಾಪ್ಕಿನ್‌ಗೆ ಕೆಂಪು ಬಣ್ಣ ಬಳಿದು ಋತುಸ್ರಾವದ ಭಾವನೆ ಮೂಡಿಸಿದ್ದಾಳೆ! ಈ ವಿಷಯ ತಿಳಿದ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಆದರೆ ಪಟ್ಟುಬಿಡದೆ ಆಕೆಯ ಅಕ್ರಮವನ್ನು ಬಟಾಬಯಲು ಮಾಡಿದ್ದಾರೆ.

ಚಿನ್ನ ಕಳ್ಳಸಾಗಣೆ ರಹದಾರಿಗಳು ನೂರೆಂಟು ಎಂಬುದು ಕಸ್ಟಮ್ಸ್​ ಅಧಿಕಾರಿಗಳಿಗೆ ಆಗಾಗ ಮನದಟ್ಟಾಗುತ್ತಿದ್ದು, ತಮ್ಮ ಕಣ್ಗಾವಲನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಇಷ್ಟೆಲ್ಲಾ ಕಡಿವಾಣ ಹಾಕಿದರೂ ಕಳ್ಳಸಾಗಣೆದಾರರು ರಂಗೋಲಿ ಹಾಕುತ್ತಾರಲ್ಲಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು